ಮಂಗಳೂರು | ಪಂಪ್ ವೆಲ್ ನಲ್ಲಿ ಮತ್ತೆ ತಲೆಯೆತ್ತಲಿದೆ ಮಹಾವೀರ ಸರ್ಕಲ್
ಸ್ಮಾರ್ಟ್ ಸಿಟಿ ವೃತ್ತಗಳ ಅಭಿವೃದ್ಧಿ ಯೋಜನೆಗಳಿಗೆ ಸಂಸದರಿಂದ ಶಿಲಾನ್ಯಾಸ

ಮಂಗಳೂರು, ಅ.18: ಪಂಪ್ ವೆಲ್ ನಲ್ಲಿ ಕರ್ಣಾಟಕ ಬ್ಯಾಂಕ್ ಹಾಗೂ ಸ್ಮಾರ್ಟ್ ಸಿಟಿ ವತಿಯಿಂದ ಮಹಾವೀರ ವೃತ್ತ ಅಭಿವೃದ್ಧಿ ಕಾಮಗಾರಿಗೆ ಇಂದು ಸಂಸದರಾದ ನಳಿನ್ ಕುಮಾರ್ ಕಟೀಲು ಶಿಲಾನ್ಯಾಸ ನೆರವೇರಿಸಿ ವಿವಿಧ ವೃತ್ತಗಳ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕರಾದ ವೇದವ್ಯಾಸ್ ಕಾಮತ್, ಮೇಯರ್ ಜಯಾನಂದ ಅಂಚನ್, ಉಪ ಮೇಯರ್ ಪೂರ್ಣಿಮಾ, ಕರ್ಣಾಟಕ ಬ್ಯಾಂಕ್ ನ ಮಹಾಪ್ರಬಂಧಕ ರವಿಚಂದ್ರನ್, ನಿರ್ಮಲ್ ಕುಮಾರ್, ಮನಪಾ ಆಯುಕ್ತ ಅಕ್ಷಯ್ ಶ್ರೀಧರ್, ಮಾಜಿ ಮೇಯರ್ ದಿವಾಕರ ಪಾಂಡೇಶ್ವರ, ಪ್ರೇಮಾನಂದ ಶೆಟ್ಟಿ, ಮನಪಾ ಸದಸ್ಯ ಸಂದೀಪ್ ಗರೋಡಿ, ಜೈನ್ ಮಿಲನ್ ಅಧ್ಯಕ್ಷ ಪುಷ್ಪರಾಜ್ ಜೈನ್, ಮುಖಂಡರಾದ ಸುರೇಶ್ ಬಲ್ಲಾಳ್, ರಾಜವರ್ಮ ಬಲ್ಲಾಳ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ಇದನ್ನೂ ಓದಿ: ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರಿಗೆ 'ಬೆದರಿಕೆ' ಪ್ರಕರಣ: ತನಿಖೆ ಸಿಐಡಿಗೆ ಒಪ್ಪಿಸಿದ ಸರಕಾರ
Next Story









