ಮಂಜೇಶ್ವರ | ದಯಾಬಾಯಿಗೆ ಬೆಂಬಲಾರ್ಥ ಸೂಚಿಸಿ ಯೂತ್ ಲೀಗ್ ಅಹೋರಾತ್ರಿ ಧರಣಿ

ಮಂಜೇಶ್ವರ, ಅ.18: ಏಮ್ಸ್ ಪ್ರಸ್ತಾವ ಪಟ್ಟಿಯಲ್ಲಿ ಕಾಸರಗೋಡು ಜಿಲ್ಲೆಯ ಹೆಸರನ್ನು ಸೇರಿಸಬೇಕೆಂದು ಆಗ್ರಹಿಸಿ ಸಾಮಾಜಿಕ ಹೋರಾಟಗಾರ್ತಿ ದಯಾಬಾಯಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹಕ್ಕೆ ಬೆಂಬಲ ಘೋಷಿಸಿ ಮಂಜೇಶ್ವರ ಮುಸ್ಲಿಮ್ ಯೂತ್ ಲೀಗ್ ಮಂಜೇಶ್ವರ ಪಂಚಾಯತ್ ಸಮಿತಿಯು ಕುಂಚತ್ತೂರು ಜಂಕ್ಷನ್‌ನಲ್ಲಿ ಅಹೋರಾತ್ರಿ ಸತ್ಯಾಗ್ರಹ ನಡೆಸಿತು.
ಬೆಳಗ್ಗೆ 10:30ಕ್ಕೆ ಆರಂಭವಾದ ಧರಣಿಯನ್ನು ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಉದ್ಘಾಟಿಸಿದರು. ಮುಸ್ಲಿಮ್ ಲೀಗ್ ಮಂಡಲ ಪ್ರಧಾನ ಕಾರ್ಯದರ್ಶಿ ಎಂ.ಅಬ್ಬಾಸ್, ಜಿಲ್ಲಾ ಕಾರ್ಯದರ್ಶಿ ಅಝೀಝ್ ಮರಿಕೆ, ಎ.ಕೆ.ಆರಿಫ್, ಮುಸ್ಲಿಮ್ ಲೀಗ್ ಮಂಜೇಶ್ವರ ಪಂಚಾಯತ್ ಅಧ್ಯಕ್ಷ ಯು.ಕೆ.ಸೈಫುಲ್ಲಾ ತಂಙಳ್, ಕಾರ್ಯದರ್ಶಿ ಅಬ್ದುಲ್ಲಾ ಕಜೆ, ಯೂತ್ ಲೀಗ್ ಜಿಲ್ಲಾ ಉಪಾಧ್ಯಕ್ಷ ಮುಖ್ತಾರ್ ಎ. ಮಾತನಾಡಿದರು.
ಹನೀಫ್ ಕೂಚಿಕ್ಕಾಡ್ ಅಧ್ಯಕ್ಷತೆ ವಹಿಸಿದ್ದರು. ಮುಬಾರಕ್ ಗುಡ್ಡಕೇರಿ ಸ್ವಾಗತಿಸಿದರು. ರಿಯಾಝ್ ಮೌಲಾನ ರೋಡ್ ವಂದಿಸಿದರು.

Next Story





