'ಯಾವ ಸನ್ ಸ್ಕ್ರೀನ್ ಲೋಷನ್ ಬಳಸುತ್ತೀರಿ?' ಎಂಬ ಪ್ರಶ್ನೆಗೆ ಉತ್ತರಿಸಿದ ರಾಹುಲ್ ಗಾಂಧಿ; ವಿಡಿಯೋ ವೈರಲ್
Mr @RahulGandhi :
I don’t use sunscreen…
मेरी माँ ने मेरे लिए Sunscreen भेजी है लेकिन मैं इस्तेमाल नही करता pic.twitter.com/VTNTWHLHiZ
ಬಳ್ಳಾರಿ : ರಾಹುಲ್ ಗಾಂಧಿ (RahulGandhi) ನೇತೃತ್ವದಲ್ಲಿ ನಡೆಯುತ್ತಿರುವ 'ಭಾರತ್ ಜೋಡೊ' ಯಾತ್ರೆ ಸದ್ಯ ಬಳ್ಳಾರಿ ಜಿಲ್ಲೆಯಲ್ಲಿ ಸಾಗುತ್ತಿದ್ದು, ಈ ವೇಳೆ ಅವರು ತಮ್ಮ ಬೆಂಬಲಿಗರ ಜೊತೆ ನಡೆಸಿದ ಮಾತುಕತೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ವಿಡಿಯೋ ವೈರಲ್ ಆಗಿದೆ.
ಯುವಕನೋರ್ವ ರಾಹುಲ್ ಗಾಂಧಿ ಬಳಿ ನೀವು ಚರ್ಮದ ಬಣ್ಣ ಕಪ್ಪಾಗದಂತೆ ತಡೆಯಲು ಯಾವ ಸನ್ ಸ್ಕ್ರೀನ್ ಲೋಷನ್ ಬಳಸುತ್ತೀರಿ? ಎಂದು ಪ್ರಶ್ನಸಿದಾಗ, ಮುಗುಳ್ನಕ್ಕ ರಾಹುಲ್ ಗಾಂಧಿ, ನಮ್ಮಮ್ಮ ಸನ್ ಸ್ಕ್ರೀನ್ ಲೋಷನ್ ಕಳುಹಿಸಿದ್ದಾರೆ. ಆದರೆ ನಾನು ಯಾವುದನ್ನೂ ಬಳಸುತ್ತಿಲ್ಲ ಎಂದು ಹೇಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ‘ಭಾರತ್ ಜೋಡೊ' ಯಾತ್ರೆ ಕೈಗೊಂಡಿರುವ ರಾಹುಲ್ ಗಾಂಧಿ, 3,570 ಕಿಲೋಮೀಟರ್ಗಳಷ್ಟು ಪಾದಯಾತ್ರೆ ಮಾಡಲಿದ್ದಾರೆ. ಸದ್ಯ ಬಳ್ಳಾರಿಯಲ್ಲಿದ್ದು, ರಾಯಚೂರು ತಾಲೂಕಿನಲ್ಲಿ ಅಕ್ಟೋಬರ್ 21 ರಿಂದ ಅಕ್ಟೋಬರ್ 23 ರವರೆಗೆ ಪಾದಯಾತ್ರೆ ಮುಂದುವರಿಯಲಿದೆ ಎಂದು ಹೇಳಲಾಗಿದೆ.
Mr @RahulGandhi :
— Supriya Bhardwaj (@Supriya23bh) October 17, 2022
I don’t use sunscreen…
मेरी माँ ने मेरे लिए Sunscreen भेजी है लेकिन मैं इस्तेमाल नही करता pic.twitter.com/VTNTWHLHiZ