"ಯಾವುದೇ ಹೊರಗಿನ ಸಂಸ್ಥೆಗಳು ಕಾನೂನು ರಚಿಸುವಂತೆ ಸರಕಾರಕ್ಕೆ ಸೂಚಿಸುವ ಹಾಗಿಲ್ಲ": ಸುಪ್ರೀಂಗೆ ಕೇಂದ್ರದಿಂದ ಅಫಿಡವಿಟ್
Photo: PTI
ಹೊಸದಿಲ್ಲಿ: ಕಾನೂನುಗಳನ್ನು ರಚಿಸುವ ಸಾರ್ವಭೌಮ ಹಕ್ಕನ್ನು ಸಂಸತ್ತು ಚಲಾಯಿಸುತ್ತದೆ, ಯಾವುದೇ ಬಾಹ್ಯ ಸಂಸ್ಥೆಗೆ ಕಾನೂನು ರಚಿಸುವ ಕುರಿತು ಸರಕಾರಕ್ಕೆ ಸೂಚನೆ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟಿಗೆ ಸಲ್ಲಿಸಿರುವ ಅಫಿಡವಿಟ್ನಲ್ಲಿ ಕೇಂದ್ರ ಸರ್ಕಾರ ಹೇಳಿದೆ.
ವಿಚ್ಛೇದನ, ದತ್ತು, ವಿವಾಹ ವಯಸ್ಸು, ಜೀವನಾಂಶ, ಉತ್ತರಾಧಿಕಾರ ಮುಂತಾದ ವಿಚಾರಗಳಲ್ಲಿ ಲಿಂಗ ಹಾಗೂ ಧರ್ಮ ತಟಸ್ಥ ಕಾನೂನುಗಳನ್ನು ಜಾರಿಗೊಳಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ವಕೀಲ ಅಶ್ವಿನಿ ಉಪಾಧ್ಯಾಯ ಎಂಬವರು ಸಲ್ಲಿಸಿದ್ದ ಅರ್ಜಿಗೆ ಪ್ರತಿಕ್ರಿಯೆಯಾಗಿ ಕೇಂದ್ರ ತನ್ನ ಅಫಿಟವಿಟ್ ಸಲ್ಲಿಸಿದೆ.
ಯಾವುದೇ ಒಂದು ನಿರ್ದಿಷ್ಟ ವಿಚಾರ ಕುರಿತಂತೆ ಕಾನೂನು ಜಾರಿಗೊಳಿಸಲು ಯಾವುದೇ ಬಾಹ್ಯ ಶಕ್ತಿ ಅಥವಾ ಪ್ರಾಧಿಕಾರ ತನಗೆ ಸೂಚಿಸುವಂತಿಲ್ಲ ಎಂದು ಸರ್ಕಾರ ಹೇಳಿದೆ.
ಮೇಲಿನ ವಿಚಾರ ಕುರಿತಂತೆ ತನ್ನ ಮುಂದಿದ್ದ ಹಲವು ಅರ್ಜಿಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ಕೇಂದ್ರದ ವಿಸ್ತøತ ವಿವರಣೆಯನ್ನು ಕೋರಿತ್ತು.
ಉಪಾಧ್ಯಾಯ ಅವರು ತಮ್ಮ ವಕೀಲರ ಮೂಲಕ ಮೇಲಿನ ವಿಚಾರ ಕುರಿತಂತೆ ಐದು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದರು.