ಸೋಮವಾರ ವಾರದ ಅತ್ಯಂತ ಕೆಟ್ಟ ದಿನ: ಅಧಿಕೃತವಾಗಿ ಘೋಷಿಸಿದ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್

we're officially giving monday the record of the worst day of the week
— Guinness World Records (@GWR) October 17, 2022ಹೊಸದಿಲ್ಲಿ: ವಾರಾಂತ್ಯ ಕಳೆದು ಸೋಮವಾರ (Monday) ಕಚೇರಿ ಕೆಲಸ ಕಾರ್ಯಗಳಿಗೆ ತೆರಳಲು ಹಲವರಿಗೆ ಆಲಸ್ಯವಾಗುವುದುಂಟು. ಇದಕ್ಕೆ ಮಂಡೇ ಬ್ಲೂಸ್ ಎಂದೂ ಆಂಗ್ಲ ಭಾಷೆಯಲ್ಲಿ ಹೇಳಲಾಗುತ್ತದೆ. ಹಾಗಾದರೆ ಒಂದು ವಾರದ ಅತ್ಯಂತ ಕೆಟ್ಟ ದಿನ ಯಾವುದೆಂದು ನೀವು ಸರಿಯಾಗಿಯೇ ಊಹಿಸಿರಬೇಕು. ಗಿನ್ನೆಸ್ ವಿಶ್ವ ದಾಖಲೆಗಳು (Guinness World Records) ಸೋಮವಾರವನ್ನು 'ವಾರದ ಅತ್ಯಂತ ಕೆಟ್ಟ ದಿನ' ಎಂದು ಅಧಿಕೃತವಾಗಿ ಘೋಷಿಸಿದೆ. ಈ ಕುರಿತು ಸಂಸ್ಥೆ ಟ್ವಿಟರ್ ನಲ್ಲಿ ಸೋಮವಾರ ಮಾಹಿತಿ ಹಂಚಿಕೊಂಡಿದೆ.
ಇದು ಹಲವರಿಂದ ಸ್ವಾರಸ್ಯಕರ ಪ್ರತಿಕ್ರಿಯೆಗಳಿಗೆ ಕಾರಣವಾಯಿತು. 'ರೆಡ್ ದಿ ಆಂಗ್ರಿ ಬರ್ಡ್'ವೀಡಿಯೋ ಗೇಮಿನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ಪ್ರತಿಕ್ರಿಯಿಸಿ "ಇದಕ್ಕೆ ನಿಮಗೆ ಬಹಳ ಸಮಯ ಬೇಕಾಯಿತು,'' ಎಂದು ಬರೆದಾಗ ತಕ್ಷಣ ಉತ್ತರಿಸಿದ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್, ಐಕೆಆರ್ (ಐ ನೋ ರೈಟ್) ನನಗೆ ಗೊತ್ತು ಆಯಿತೇ ಎಂದು ಮಾರ್ಮಿಕವಾಗಿ ಉತ್ತರಿಸಿದೆ.
ಇದೇ ಕಾರಣಕ್ಕೆ ನಾನು ಸೋಮವಾರ ರಜೆ ಮಾಡುತ್ತೇನೆ ಎಂದು ಒಬ್ಬರು ಬರೆದರೆ, ಅದಕ್ಕೆ ಪ್ರತಿಕ್ರಿಯಿಸಿದ ಸಂಸ್ಥೆ 'ಸ್ಮಾರ್ಟ್' ಎಂದು ಉತ್ತರಿಸಿದೆ.
"ರವಿವಾರ ಸಂಜೆಯ ಹೊತ್ತಿಗೆ ಉಂಟಾಗುವ ಭಾವನೆ ಸೋಮವಾರ ಬೆಳಗ್ಗಿನದಕ್ಕಿಂತ ಕೆಟ್ಟದ್ದಾಗಿದೆ,'' ಎಂದು ಇನ್ನೊಬ್ಬರು ಪ್ರತಿಕ್ರಿಯಿಸಿದ್ದಾರೆ. ಇನ್ನು ಕೆಲವರು ಸೋಮವಾರ ಅತ್ಯುತ್ತಮ ದಿನವೆಂದು ಬರೆದಿದ್ದಾರೆ.
ಇನ್ನೊಬ್ಬರಂತೂ ಒಂದು ಪ್ರಶ್ನೆಯ ಬಾಣವನ್ನೇ ಎಸೆದಿದ್ದಾರೆ. "ಸೋಮವಾರ ವಾರದ ಅತ್ಯಂತ ಕೆಟ್ಟ ದಿನ ಯಾವಾಗಿನಿಂದ ಆಗಿರಲಿಲ್ಲ,'' ಎಂದು ಅವರು ಕೇಳಿದ್ದಾರೆ.
we're officially giving monday the record of the worst day of the week
— Guinness World Records (@GWR) October 17, 2022