‘ಕಾಂತಾರ’ ಸಿನೆಮಾಕ್ಕೆ ಅಭಿನಂದನೆ ಸಲ್ಲಿಸುವ ಮರಳಶಿಲ್ಪ!

ಕುಂದಾಪುರ, ಅ.18: ಕರಾವಳಿ ಭಾಗದ ಆಚರಣೆ, ಕ್ರೀಡೆ, ದೈವರಾಧನೆ, ಜನರ ಮುಗ್ಧತೆಗೆ ಮತ್ತು ನಂಬಿಕೆಗೆ ಪಾತ್ರವಾದ ದೃಶ್ಯವನ್ನು ಪರಿಣಾಮಕಾರಿಯಾಗಿ ಚಿತ್ರೀಕರಿಸಿದ ಮತ್ತು ಕರಾವಳಿ ಭಾಗದ ಬಹುತೇಕ ಕಲಾವಿದರ ನ್ನೊಳ ಗೊಂಡ ರಿಷಭ್ ಶೆಟ್ಟಿ ಅಭಿನಯದ ಹಾಗೂ ನಿರ್ದೇಶನದ ಕಾಂತಾರ ಚಲನ ಚಿತ್ರಕ್ಕೆ ಮರಳ ಶಿಲ್ಪ ಕಲಾಕೃತಿಯ ಮೂಲಕ ಅಭಿನಂದನೆ ಸಲ್ಲಿಸಲಾಗಿದೆ.
ಇಂದು ಕುಂದಾಪುರ ಕೋಟೇಶ್ವರ ಹಳೆ ಅಲಿವೆ ಕಡಲ ತೀರದಲ್ಲಿ ರಕ್ಷಕ ಶಕ್ತಿಯನ್ನು ಸಾರಿದ ವರಾಹರೂಪಿ ಪಂಜುರ್ಲಿ ಮತ್ತು ದೈವದರೂಪದಲ್ಲಿ ಅವತರಿಸಿದ ನಟ ರಿಷಭ್ ಶೆಟ್ಟಿಯವರನ್ನೇ ಕೇಂದ್ರವಾಗಿಸಿ, 4 ಅಡಿ ಮತ್ತು 7.5 ಅಡಿ ಎತ್ತರ ಅಗಲಗಳುಳ್ಳ ಮರಳು ಕಲಾಕೃತಿಯನ್ನು ಉಡುಪಿ ಸ್ಯಾಂಡ್ ಥೀಂ ತಂಡದ ಕಲಾವಿದರಾದ ಹರೀಶ್ ಸಾಗಾ, ಸಂತೋಷ್ ಭಟ್ ಹಾಲಾಡಿ, ಪ್ರಸಾದ್ ಆರ್. ರಚಿಸಿದ್ದಾರೆ.
Next Story





