ಸ್ಟರ್ಲೈಟ್ ವಿರೋಧಿ ಪ್ರತಿಭಟನಾಕಾರರ ಮೇಲೆ ಪೊಲೀಸ್ ಗೋಲಿಬಾರ್ ಅಪ್ರಚೋದಿತ: ವಿಚಾರಣಾ ಆಯೋಗದ ವರದಿ

Photo : NDTV
ಚೆನ್ನೈ,ಅ.18: ನಾಲ್ಕು ವರ್ಷಗಳ ಹಿಂದೆ ತೂತ್ತುಕುಡಿಯಲ್ಲಿ ಸ್ಟರ್ಲೈಟ್ ವಿರೋಧಿ (Anti-Sterlite) ಪ್ರತಿಭಟನಾಕಾರರ ಮೇಲೆ ನಡೆದಿದ್ದ ಪೊಲೀಸ್ ಗೋಲಿಬಾರ್ ಅಪ್ರಚೋದಿತವಾಗಿತ್ತು ಎಂದು ನ್ಯಾ.ಅರುಣಾ ಜಗದೀಶನ್(Dr. Aruna Jagadeesan) ವಿಚಾರಣಾ ಆಯೋಗವು ಹೇಳಿದೆ. ಗೋಲಿಬಾರ್ನಲ್ಲಿ 13 ಪ್ರತಿಭಟನಾಕಾರರು ಮೃತಪಟ್ಟು, 100ಕ್ಕೂ ಅಧಿಕ ಜನರು ಗಾಯಗೊಂಡಿದ್ದರು.
ಪೊಲೀಸರು ಬಂದೂಕುಗಳ ಬಳಕೆಯನ್ನು ತಪ್ಪಿಸಬೇಕಿತ್ತು ಎಂದು ಮಂಗಳವಾರ ರಾಜ್ಯ ವಿಧಾನಸಭೆಯಲ್ಲಿ ಮಂಡಿಸಲಾದ ಆಯೋಗದ ವರದಿಯು ಹೇಳಿದೆ. ವರದಿಯು ಉನ್ನತ ಹುದ್ದೆಗಳಲ್ಲಿರುವವರನ್ನೂ ಬಿಟ್ಟಿಲ್ಲ. ಘಟನೆಯ ಕುರಿತು ಆಳವಾದ ಅಧ್ಯಯನ ನಡೆಸಿರುವ ಅದು,ಪೊಲೀಸರು ಸ್ಟರ್ಲೈಟ್ ವಿರೋಧಿ ಪ್ರತಿಭಟನಾಕಾರರ ವಿರುದ್ಧ ಅತಿಯಾದ ಬಲ ಪ್ರಯೋಗಿಸಿದ್ದರು ಎಂದು ಅಂತಿಮವಾಗಿ ನಿರ್ಧರಿಸಿದೆ.
2018ರಲ್ಲಿ ರಚನೆಯಾಗಿದ್ದ ಆಯೋಗವು ಮೇ 18,2022ರಂದು ತನ್ನ ವರದಿಯನ್ನು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರಿಗೆ ಸಲ್ಲಿಸಿತ್ತು.
Next Story





