ರಶ್ಯದಿಂದ ಪರಮಾಣು ಸ್ಥಾವರದ ಸಿಬ್ಬಂದಿಗಳ ಅಪಹರಣ: ಉಕ್ರೇನ್

ಕೀವ್, ಅ.18: ರಶ್ಯ ಆಕ್ರಮಿತ ದಕ್ಷಿಣ ಉಕ್ರೇನ್(Southern Ukraine)ನ ಝಪೋರಿಝಿಯಾ ಪರಮಾಣು(Zaporizhia nuclear) ಸ್ಥಾವರದ ಇಬ್ಬರು ಹಿರಿಯ ಸಿಬ್ಬಂದಿಗಳನ್ನು ರಶ್ಯದ ಅಧಿಕಾರಿಗಳು ಅಪಹರಿಸಿದ್ದಾರೆ ಎಂದು ಉಕ್ರೇನ್‍ನ ಪರಮಾಣು ಇಂಧನ ಸಂಸ್ಥೆ ಮಂಗಳವಾರ ಆರೋಪಿಸಿದೆ.
ಪರಮಾಣು ಸ್ಥಾವರದ ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಒಲೆಹ್ ಕೊಸ್ಟ್ಯುಕೋವ್(Oleh Kostyukov), ಸ್ಥಾವರದ ನಿರ್ದೇಶಕರ ಸಹಾಯಕ ಒಲೆಹ್ ಒಷೆಕ್‍ರನ್ನು ಸೋಮವಾರ ರಶ್ಯದ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈ ಇಬ್ಬರು ಸಿಬಂದಿಗಳ ಬಗ್ಗೆ ಇದುವರೆಗೆ ಯಾವುದೇ ಮಾಹಿತಿ ಲಭಿಸಿಲ್ಲ ಎಂದು ಉಕ್ರೇನ್‍ನ `ನ್ಯಾಷನಲ್ ನ್ಯೂಕ್ಲಿಯರ್ ಎನರ್ಜಿ ಜನರೇಟಿಂಗ್ ಕಂಪೆನಿ'ಯ ವಕ್ತಾರರು ಮಂಗಳವಾರ ಹೇಳಿದ್ದಾರೆ.
Next Story