ಬೆಂಗಳೂರಿನ ಬಾಲಕಿ ಕಾಣೆ: ಪತ್ತೆಗೆ ಮನವಿ
ಮಂಗಳೂರಿನಲ್ಲಿ ತಿರುಗಾಡಿದ ಬಗ್ಗೆ ಮಾಹಿತಿ
ಮಂಗಳೂರು: ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‌ನ ಮನೆಯಿಂದ ಸೋಮವಾರ ನಾಪತ್ತೆಯಾದ ಬಾಲಕಿಯೊಬ್ಬಳು ಮಂಗಳೂರಿಗೆ ಆಗಮಿಸಿ, ನಾನಾ ಕಡೆ ತಿರುಗಾಡಿದ ಬಗ್ಗೆ ಮಾಹಿತಿ ಲಭಿಸಿದೆ.
ಭಾರ್ಗವಿ (14) ನಾಪತ್ತೆಯಾದ ಬಾಲಕಿ.
ಈಕೆ ಸೋಮವಾರ ಬೆಂಗಳೂರಿನಿಂದ ನಾಪತ್ತೆಯಾಗಿದ್ದು, ಅಲ್ಲಿಂದ ಬಸ್ ಮೂಲಕ ಬೆಳಗ್ಗಿನ ಜಾವ 3 ಗಂಟೆಗೆ ಮಂಗಳೂರಿನ ಕೆಎಸ್ಸಾರ್ಟಿಗೆ ಆಗಮಿಸಿದ್ದಾಳೆ. ಅಲ್ಲಿಂದ ರಿಕ್ಷಾವೊಂದನ್ನು ಬಾಡಿಗೆಗೆ ಗೊತ್ತುಪಡಿಸಿ ಮುಕ್ಕ ಬೀಚ್ ಗೆ, ಕದ್ರಿ ಪಾರ್ಕ್ ತಿರುಗಿದ್ದಾಳೆ. ಅಲ್ಲಿಂದ ರಿಕ್ಷಾದಲ್ಲಿ ಮತ್ತೆ ಕೆಎಸ್ಸಾರ್ಟಿಸಿಗೆ ಮರಳಿ ಚಿಕ್ಕಮ್ಮನ ಮನೆಗೆ ಹೋಗುವುದಾಗಿ ರಿಕ್ಷಾ ಚಾಲಕನ ಬಳಿ ಹೇಳಿ ಬಾಡಿಗೆ ನೀಡಿ ತೆರಳಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Next Story