ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆ: ಮೊದಲ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ, 11 ಶಾಸಕರಿಗೆ ಕೊಕ್

Photo:PTI
ಹೊಸದಿಲ್ಲಿ: ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆಗೆ ಆಡಳಿತಾರೂಢ ಬಿಜೆಪಿ 62 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬುಧವಾರ ಬಿಡುಗಡೆ ಮಾಡಿದೆ. ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಅವರು ಸ್ವ ಕ್ಷೇತ್ರವಾದ ಸೆರಾಜ್ ನಿಂದಲೇ ಸ್ಪರ್ಧಿಸಲಿದ್ದಾರೆ.
ಪಕ್ಷವು ಕ್ಯಾಬಿನೆಟ್ ಮಂತ್ರಿ ಸೇರಿದಂತೆ 11 ಮಂದಿ ಹಾಲಿ ಶಾಸಕರನ್ನು ಕೈಬಿಟ್ಟಿದೆ. ಇಬ್ಬರು ಮಂತ್ರಿಗಳಾದ ಸುರೇಶ್ ಭಾರದ್ವಾಜ್ ಹಾಗೂ ರಾಕೇಶ್ ಪಾಥಾನಿಯಾ ಅವರ ಕ್ಷೇತ್ರಗಳನ್ನು ಬದಲಾಯಿಸಿದೆ.
ಭಾರದ್ವಾಜ್ ಹಿರಿಯ ಬಿಜೆಪಿ ನಾಯಕರಾಗಿದ್ದು ಶಿಮ್ಲಾ ನಗರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಅವರನ್ನು ಕಸಂಪ್ಟಿಯಿಂದ ಕಣಕ್ಕಿಳಿಸಲಾಗಿದೆ. ಆದರೆ ನೂರ್ಪುರ್ ಶಾಸಕ ಪಾಥಾನಿಯಾರನ್ನು ನೆರೆಯ ಫತೇಪುರದಿಂದ ಟಿಕೆಟ್ ನೀಡಲಾಗಿದೆ.
ಧಾರಾಂಪುರದ ಶಾಸಕ, ಸಚಿವ ಮಹೇಂದ್ರ ಸಿಂಗ್ ಅವರ ಬದಲಿಗೆ ಅವರ ಮಗ ರಾಜತ್ ಠಾಕೂರ್ ಗೆ ಟಿಕೆಟ್ ನೀಡಲಾಗಿದೆ. .
ಮಾಜಿ ಕೇಂದ್ರ ಸಚಿವ ಸುಖ್ ರಾಮ್ ಅವರ ಪುತ್ರ ಅನಿಲ್ ಶರ್ಮಾ ಅವರನ್ನು ಮಂಡಿಯಿಂದ ಕಣಕ್ಕಿಳಿಸಲಾಗಿದೆ.
Next Story





