ಪೌರತ್ವ (ತಿದ್ದುಪಡಿ) ಕಾಯ್ದೆಗೆ ನಿಯಮಗಳನ್ನು ರೂಪಿಸಲು ಗೃಹ ಸಚಿವಾಲಯಕ್ಕೆ ಇನ್ನಷ್ಟು ಕಾಲಾವಕಾಶ

Photo:PTI
ಹೊಸದಿಲ್ಲಿ: 2019ರ ಪೌರತ್ವ (ತಿದ್ದುಪಡಿ) ಕಾಯ್ದೆಗೆ ನಿಯಮಗಳನ್ನು ರೂಪಿಸಲು ಸಂಸದೀಯ ಸಮಿತಿಗಳು ಕೇಂದ್ರ ಗೃಹ ಸಚಿವಾಲಯಕ್ಕೆ ಮತ್ತೊಂದು ವಿಸ್ತರಣೆಯನ್ನು ನೀಡಿದೆ ಎಂದು ಮೂಲಗಳು ಮಂಗಳವಾರ ತಿಳಿಸಿವೆ.
2022 ರ ಡಿಸೆಂಬರ್ 31 ರವರೆಗೆ ರಾಜ್ಯಸಭೆಯಿಂದ ಅನುಮತಿ ನೀಡಲಾಗಿದ್ದರೂ, ಲೋಕಸಭೆಯು ಜನವರಿ 9, 2023 ರವರೆಗೆ ಸಮಯವನ್ನು ನೀಡಿದೆ.
ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಅಡಿಯಲ್ಲಿ ನಿಯಮಗಳನ್ನು ರೂಪಿಸಲು ಗೃಹ ಸಚಿವಾಲಯಕ್ಕೆ ನೀಡಲಾದ ಏಳನೇ ವಿಸ್ತರಣೆ ಇದಾಗಿದೆ.
ಬಾಂಗ್ಲಾದೇಶ, ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನದಿಂದ ಡಿಸೆಂಬರ್ 31, 2014 ರವರೆಗೆ ಭಾರತಕ್ಕೆ ಬಂದಿರುವ ಮುಸ್ಲಿಮೇತರ ವಲಸಿಗರಾದ ಹಿಂದೂಗಳು, ಸಿಖ್ಖರು, ಜೈನರು, ಬೌದ್ಧರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರಿಗೆ ಕೇಂದ್ರ ಸರ್ಕಾರ ಭಾರತೀಯ ರಾಷ್ಟ್ರೀಯತೆಯನ್ನು ನೀಡಲು ಬಯಸಿದೆ.
ಸಿಎಎ ಅನ್ನು ಡಿಸೆಂಬರ್ 11, 2019 ರಂದು ಸಂಸತ್ತು ಅಂಗೀಕರಿಸಿತು ಹಾಗೂ ಮರುದಿನ ರಾಷ್ಟ್ರಪತಿಯಿಂದ ಅಂಕಿತ ಪಡೆಯಿತು. ತರುವಾಯ ಇದನ್ನು ಗೃಹ ಸಚಿವಾಲಯ ರವಾನಿಸಲಾಯಿತು.
Next Story





