ಮಂಗಳೂರು: ಈಜು ತರಬೇತುದಾರ ಸಂದೇಶ್ ಅಂತಾರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆ

ಮಂಗಳೂರು, ಅ. 19: ನಗರದ ಸಂತ ಅಲೋಶಿಯಸ್‌ನ ವಿ ವನ್ ಅಕ್ವಾ ಸೆಂಟರ್ ಸ್ವಿಮ್ಮಿಂಗ್ ಪೂಲ್‌ನ ತರಬೇತುದಾರ ಸಂದೇಶ್ ಅವರು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಪ್ಯಾನ್ ಫೆಸಿಫಿಕ್ ಮಾಸ್ಟರ್ ಗೇಮ್ಸ್ ಈಜು ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
44ರ ಹರೆಯದ ಸಂದೇಶ್ ಮೂಲತಃ ಮೀನುಗಾರ ಸಮುದಾಯದವರಾಗಿದ್ದು, ಇತ್ತೀಚೆಗೆ ನಡೆದ ರಾಷ್ಟ್ರಮಟ್ಟದ ಈಜು ಸ್ಪರ್ಧೆಯ ವಿವಿಧ ವಿಭಾಗಗಳಲ್ಲಿ ಆರು ಚಿನ್ನದ ಪದಕಗಳನ್ನು ಗಳಿಸಿದ್ದಾರೆ. ಅದಕ್ಕೂ ಮೊದಲು ನಡೆದ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲೂ 13 ಪದಕಗಳ್ನು ತಮ್ಮದಾಗಿಸಿಕೊಂಡಿದ್ದರು. ಇದೀಗ ನವೆಂಬರ್ ಪ್ರಥಮ ವಾರದಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಈ ಅಂತಾರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ ಎಂದು ಅಕ್ವಾ ಸೆಂಟರ್‌ನ ನವೀನ್ ಸುದ್ದಿಗೋಷ್ಟಿಯಲ್ಲಿಂದು ತಿಳಿಸಿದರು.
ಈ ಸ್ಪರ್ಧೆಯಲ್ಲಿ ಭಾಗವಹಿಸಲು ಸುಮಾರು 2.5 ಲಕ್ಷ ರೂ.ಗಳಷ್ಟು ಖರ್ಚಾಗಲಿದ್ದು, ಸಹೃದಯಿಗಳ ಸಹಕಾರದ ನಿರೀಕ್ಷೆಯನ್ನು ಸಂದೇಶ್ ಹೊಂದಿದ್ದಾರೆ. ಅವರ ಮೊಬೈಲ್ (9743171748) ಮೂಲಕ ಅವರನ್ನು ಸಂಪರ್ಕಿಸಿ ಅವರಿಗೆ ಆರ್ಥಿಕ ನೆರವನ್ನು ಒದಗಿಸುವಂತೆ ನವೀನ್ ಈ ಸಂದರ್ಭ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಈಜುಗಾರ ನವೀನ್, ರೂಪಾ ಪ್ರಭು ಉಪಸ್ಥಿತರಿದ್ದರು.