ಮಂಗಳೂರು | ದೀಪಾವಳಿ ಪ್ರಯುಕ್ತ ಅ.26ರಂದು ವಿವಿಧ ಸ್ಪರ್ಧೆ
ಮಂಗಳೂರು, ಅ.19: ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜರ ನೇತೃತ್ವದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಅ.26ರಂದು ಗೂಡುದೀಪ, ಭಾಷಣ ಹಾಗೂ ಚಿತ್ರಕಲಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಅ.26ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಗೂಡುದೀಪ ಸ್ಪರ್ಧೆ ಏರ್ಪಡಿಸಲಾಗಿದೆ. ಭಾಗವಹಿಸುವವರು ತಮ್ಮ ಹೆಸರುಗಳನ್ನು ನೋಂದಾಯಿಸಬಹುದು. ಈ ಸ್ಪರ್ಧೆಯಲ್ಲಿ ಆಧುನಿಕ ಮತ್ತು ಸಾಂಪ್ರದಾಯಿಕ ಎಂಬ 2 ವಿಭಾಗ, ಪ್ರತಿ ವಿಭಾಗದಲ್ಲೂ ಪ್ರಥಮ/ದ್ವಿತೀಯ/ತೃತೀಯ ಬಹುಮಾನಗಳನ್ನು ನೀಡಲಾಗುವುದು. ಸ್ಪರ್ಧೆಯು ಅಂದು ಅಪರಾಹ್ನ 3 ಗಂಟೆಯಿಂದ ಪ್ರಾರಂಭಗೊಳ್ಳುವುದು. ಭಾಗವಹಿಸಿದ ಎಲ್ಲರಿಗೂ ಸಮಾಧಾನಕರ ಬಹುಮಾನಗಳನ್ನು ನೀಡಲಾಗುವುದು.
ಭಾಷಣ ಸ್ಪರ್ಧೆಯು 'ದೀಪಾವಳಿ ಹಬ್ಬದ ಔಚಿತ್ಯತೆ ಮತ್ತು ಸೌಹಾರ್ದ' ಎಂಬ ವಿಷಯದಲ್ಲಿ ನಡೆಯಲಿದ್ದು, ಸ್ಪರ್ಧೆಯಲ್ಲಿ 2 ವರ್ಗಗಳಿವೆ. 6-10ನೇ ತರಗತಿಯವರೆಗೆ ಮತ್ತು 11ನೇ ತರಗತಿಯಿಂದ ಮೇಲ್ಪಟ್ಟ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ. ಸ್ಪರ್ಧೆಯಲ್ಲಿ ಕನ್ನಡ/ತುಳು/ಇಂಗ್ಲಿಷ್ ಭಾಷೆಗಳನ್ನು ಬಳಸಬಹುದಾಗಿದೆ. ಸ್ಪರ್ಧೆಯು 4 ನಿಮಿಷಗಳಿಗೆ ಸೀಮೀತವಾಗಿದೆ.
ಚಿತ್ರಕಲಾ ಸ್ಪರ್ಧೆಯು ದೀಪಾವಳಿಯ ವೈಶಿಷ್ಟತೆಯ ಬಗ್ಗೆ ಕಲ್ಪನೆಯ ವಿಷಯವಾಗಿದ್ದು, ಸ್ಪರ್ಧೆಯಲ್ಲಿ 3 ವರ್ಗಗಳಿವೆ. ಪ್ರಾಥಮಿಕ(1ರಿಂದ 7ನೇ ತರಗತಿ), ಹೈಸ್ಕೂಲ್ 8ರಿಂದ ಪಿಯುಸಿ 12ನೇ ತರಗತಿಯವರೆಗೆ ಹಾಗೂ ಡಿಗ್ರಿ ಮೇಲ್ಪಟ್ಟ ಎಲ್ಲಾ ವಯೋಮನದವರಿಗೆ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸುವವರು ತಮ್ಮ ವಿವರಗಳನ್ನು, ಭಾಷಣ/ಚಿತ್ರಕಲಾ ಸ್ಪರ್ಧೆಗೆ ಸತೀಶ್ ಪೆಂಗಲ್ (9036719916), ಆನಂದ ಸೋನ್ಸ್(9901184656), ಅನಿಲ್ ತೋರಸ್(9343561281), ಮೀನಾ ಟೆಲ್ಲಿಸ್(7022436831) ಹಾಗೂ ಗೂಡುದೀಪ ಸ್ಪರ್ಧೆಗೆ ಮಹೇಶ್ ಕುಮಾರ್(9743597991) ಇವರನ್ನು ಸಂಪರ್ಕಿಸಬಹುದಾಗಿದೆ. ಆಸಕ್ತರು ಅ. 24ರೊಳಗೆ ಹೆಸರು ನೊಂದಾಯಿಸುವಂತೆ ಪ್ರಕಟನೆ ತಿಳಿಸಿದೆ.