ಕುಂಪಲ: ಇಸ್ಕೇ ರಸೂಲ್ ಮೀಲಾದ್ ಫೆಸ್ಟ್

ಉಳ್ಳಾಲ: ನೂರುಲ್ ಇಸ್ಲಾಂ ಮದರಸ ಆಶ್ರಯದಲ್ಲಿ ವಿದ್ಯಾರ್ಥಿಗಳ ಮೀಲಾದ್ ಕಾರ್ಯಕ್ರಮ ಕುಂಪಲ ನೂರೂಲ್ ಇಸ್ಲಾಂ ಮಸೀದಿ ವಠಾರದಲ್ಲಿ ಹಾಜಿ ಮುಹಮ್ಮದ್ ಇಕ್ಬಾಲ್ ಕುಂಪಲ ಅಧ್ಯಕ್ಷತೆಯಲ್ಲಿ ನಡೆಯಿತು.
ಮಸೀದಿಯ ಖತೀಬ್ ಅಮೀನ್ ಉಸ್ತಾದ್ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಸಯ್ಯದ್ ಮದನಿ ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್, ಸಯ್ಯದ್ ಮದನಿ ಅರಬಿಕ್ ಎಜುಕೇಶನ್ ಟ್ರೆಸ್ಟ್ ಮುಫತ್ತೀಸ್ ಅಬೂಬಕರ್ ಸಿದ್ದೀಕ್ ಅಲ್ ಅಝಹರಿ, ಪ್ರಧಾನ ಕಾರ್ಯದರ್ಶಿ ಹಾಜಿ ಅಮೀರ್, ಕಾರ್ಯದರ್ಶಿ ಆಸೀಫ್ ಅಬ್ದುಲ್ಲಾ ಮತ್ತಿತರರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದ ಅಂಗವಾಗಿ ಮದ್ರಸ ವಿದ್ಯಾರ್ಥಿಗಳ ದಫ್ ಮತ್ತು ಕಾಲ್ನಡಿಗೆ ಜಾಥಾ ನೂರಾನಿ ಯತೀಮ್ ಖಾನ ದಿಂದ ಮದ್ರಸ ತನಕ ನಡೆಯಿತು. ಅಶ್ರಫ್ ಸಖಾಪಿ ಕಾರ್ಯಕ್ರಮ ನಿರೂಪಿಸಿದರು.

Next Story





