Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಉಡುಪಿ
  4. ಹೆಚ್ಚುತ್ತಿರುವ ಹಳೆಯ-ಹೊಸ ಪತ್ರಿಕೋದ್ಯಮದ...

ಹೆಚ್ಚುತ್ತಿರುವ ಹಳೆಯ-ಹೊಸ ಪತ್ರಿಕೋದ್ಯಮದ ಅಂತರ; ಕುಸಿಯುತ್ತಿರುವ ಸಾರ್ವಜನಿಕ ವಿಶ್ವಾಸ: ಡಾ.ಮಾಲಿನಿ ಪಾರ್ಥಸಾರಥಿ ಕಳವಳ

ವಾರ್ತಾಭಾರತಿವಾರ್ತಾಭಾರತಿ19 Oct 2022 7:55 PM IST
share
ಹೆಚ್ಚುತ್ತಿರುವ ಹಳೆಯ-ಹೊಸ ಪತ್ರಿಕೋದ್ಯಮದ ಅಂತರ; ಕುಸಿಯುತ್ತಿರುವ ಸಾರ್ವಜನಿಕ ವಿಶ್ವಾಸ: ಡಾ.ಮಾಲಿನಿ ಪಾರ್ಥಸಾರಥಿ ಕಳವಳ

ಮಣಿಪಾಲ, ಅ.19: ಪತ್ರಿಕೋದ್ಯಮದ ಹಳೆ ವಿಧಾನ ಹಾಗೂ ಈಗ ಪ್ರವರ್ಧಮಾನಕ್ಕೆ ಬರುತ್ತಿರುವ ಹೊಸ ಪತ್ರಿಕಾ ವೇದಿಕೆಗಳ ನಡುವಿನ ಅಂತರ  ಹೆಚ್ಚುತ್ತಿರುವುದರಿಂದ ಮಾಧ್ಯಮಗಳ ಮೇಲೆ ಇದ್ದ ಸಾರ್ವಜನಿಕ ವಿಶ್ವಾಸದ ಪ್ರಮಾಣ ತೀವ್ರವಾಗಿ ಕುಸಿಯುತ್ತಿದೆ ಎಂದು ಚೆನ್ನೈನ ದಿ ಹಿಂದು ಗ್ರೂಪ್‌ನ ಚಯರ್‌ ಪರ್ಸನ್ ಹಾಗೂ ಸಂಪಾದಕೀಯ ನಿರ್ವಹಣಾ ನಿರ್ದೇಶಕಿ ಡಾ.ಮಾಲಿನಿ ಪಾರ್ಥಸಾರಥಿ ಕಳವಳ ವ್ಯಕ್ತಪಡಿಸಿದ್ದಾರೆ.  

ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್ (ಎಂಐಸಿ) ವತಿಯಿಂದ ಮಣಿಪಾಲದ ಫಾರ್ಚ್ಯೂನ್ ಇನ್ ವ್ಯಾಲಿವ್ಯೆ ಹೊಟೇಲ್‌ನ ಚೈತ್ಯಾ ಹಾಲ್‌ನಲ್ಲಿ ಆಯೋಜಿಸಲಾದ ಹಿರಿಯ ಪತ್ರಕರ್ತ ಎಂ.ವಿ.ಕಾಮತ್ ಸ್ಮಾರಕ ದತ್ತಿನಿಧಿ ಉಪನ್ಯಾಸ ಮಾಲಿಕೆಯಲ್ಲಿ ‘ಡಿಜಿಟಲ್ ಯುಗದಲ್ಲಿ ಪತ್ರಿಕೋದ್ಯಮದ ಮೇಲೆ ಸಾರ್ವಜನಿಕರ ವಿಶ್ವಾಸವನ್ನು ಉಳಿಸಿಕೊಳ್ಳುವುದು’ ಎಂಬ ವಿಷಯದ ಕುರಿತು ಉಪನ್ಯಾಸ ನೀಡುತಿದ್ದರು. 

ಸದ್ಯ ಹೊಸ ಮಾಧ್ಯಮ ಪ್ರಕಾರಗಳಲ್ಲಿ ಸೋಷಿಯಲ್ ಮೀಡಿಯಾ, ಸುದ್ದಿಗಳ ನಂಬಲರ್ಹತೆ ಹಾಗೂ ವಿಶ್ವಾಸಾ ರ್ಹತೆಗಳ ತೀರ್ಪುಗಾರನ ಪಾತ್ರ ವಹಿಸುತಿದ್ದು, ಇನ್ನೊಂದು ಅರ್ಥದಲ್ಲಿ ಸುದ್ದಿಸಂಸ್ಥೆಗಳಂತೆ ಕಾರ್ಯನಿರ್ವಹಿಸುತ್ತಿವೆ ಎಂದು ಅವರು ವಿಶ್ಲೇಷಿಸಿದರು. 

ದಶಕಗಳ ಹಿಂದೆಲ್ಲಾ ನಮ್ಮ ಆಗಿನ ಜನಪ್ರಿಯ ಹಾಗೂ ಓದುಗರ ವಿಶ್ವಾಸಕ್ಕೆ  ಪಾತ್ರರಾಗಿದ್ದ ಸಂಪಾದಕರು, ತಮ್ಮ ವಿಷಯ ತಜ್ಞತೆ, ಸಮರ್ಥ ಸುದ್ದಿ ವಿಶ್ಲೇಷಣೆ ಹಾಗೂ ಪಾಂಡಿತ್ಯಗಳ ಮೂಲಕ ತನ್ನ ಓದುಗರಿಗೆ ಸರಿಯಾದ ಮಾಹಿತಿಗಳನ್ನು ಓದಗಿಸುತಿದ್ದರು. ಇದರಿಂದ ಪತ್ರಿಕೆಗಳ ಪುಟಪುಟಗಳ ಸುದ್ದಿಗಳನ್ನು ಓದುಗರು ಆಸ್ವಾದಿಸು ತಿದ್ದರು. ಆದರೆ ಇಂದಿನ ಯುವ, ಮಹತ್ವಾಕಾಂಕ್ಷಿ ಹಾಗೂ ಜಾಗತಿಕ ಮನೋಭಾವದ ‘ಪ್ರೇಕ್ಷಕರು’ ಕೇವಲ ಮಾಹಿತಿಯನ್ನು ಮಾತ್ರ ಬಯಸುತಿದ್ದು, ಅದರಿಂದ ಪಡೆಯುವ ಶಿಕ್ಷಣವನ್ನಲ್ಲ ಎಂದು ಡಾ.ಮಾಲಿನಿ ವಿಷಾಧಿಸಿದರು.

ಇದರಿಂದಾಗಿಯೇ ಕುಲದೀಪ್ ನಯ್ಯರ್, ನಿಖಿಲ್ ಚಕ್ರವರ್ತಿ ಹಾಗೂ ಎಂ.ವಿ.ಕಾಮತ್‌ರಂಥ ಸ್ಟಾರ್ ಪತ್ರಕರ್ತರ ನಿಧನದೊಂದಿಗೆ ಪತ್ರಿಕೋದ್ಯಮ ಇಂದು ವೃತ್ತಿ ಘನತೆ, ಸಿದ್ಧಾಂತ ಹಾಗೂ ಮೌಲ್ಯಗಳ ಮೂಲಕ ಮಾದರಿ ಯಾಗಬಲ್ಲ ಧ್ವನಿಗಳನ್ನೇ ಕಳೆದುಕೊಂಡಿದೆ ಎಂದರು.

ಡಿಜಿಟಲ್ ತಂತ್ರಜ್ಞಾನ ಇಂದು ಬದುಕಿನ ಭಾಗವೇ ಆಗಿ ಹೋಗಿದೆ. ಪತ್ರಿಕೋದ್ಯಮದಲೂ ಅದು ಪ್ರಮುಖ ಸುದ್ದಿ ಪ್ರಸಾರಕ, ಸುದ್ದಿಗಳ ಕುರಿತಂತೆ  ಜನರಲ್ಲಿ ಸಂದೇಹ ಮೂಡಿಸುವ, ಎಲ್ಲಾ ಪತ್ರಿಕಾ ಸಂಸ್ಥೆಗಳು ಅವಲಂಬಿತ ವಾಗಿರುವ ಸಾಧಕವಾಗಿದೆ. ಸೋಷಿಯಲ್ ಮೀಡಿಯಾ ಹಾಗೂ ಇತರ ವೇದಿಕೆಗಳ ಪರಿಣಾಮವನ್ನು ನಾವು ದೈನಂದಿನ ಬದುಕಿನಲ್ಲಿ ನೋಡುತಿದ್ದೇವೆ ಎಂದರು. 

ಡಿಜಿಟಲ್ ಪತ್ರಿಕೋದ್ಯಮದ ಕುರಿತಂತೆ ದಿ ರೈಟರ್ಸ್‌ ಇನ್‌ಸ್ಟಿಟ್ಯೂಟ್ ಫಾರ್ ದಿ ಸ್ಟಡಿ ಆಫ್ ಜರ್ನಲಿಸಮ್ 2022ನೇ ಸಾಲಿನ ಡಿಜಿಟಲ್ ನ್ಯೂಸ್ ರಿಪೋರ್ಟ್‌ನ ವರದಿಯನ್ನು ಇತ್ತೀಚೆಗೆ ಪ್ರಕಟಿಸಿದ್ದು, ಅದು ನಡೆಸಿದ ಸರ್ವೆಯಲ್ಲಿ ಭಾರತದ ಕುರಿತಂತೆ ಹಲವು ಕುತೂಹಲಕರ ವಿಷಯಗಳನ್ನು ಪ್ರಸ್ತಾಪಿಸಿದೆ ಎಂದು ಡಾ.ಮಾಲಿನಿ ಪಾರ್ಥಸಾರಥಿ ವಿವರಿಸಿದರು.

ಇಂಗ್ಲಿಷ್ ಮಾತನಾಡುವ ಇಂಟರ್ನೆಟ್ ಬಳಸುವವರನ್ನು ಒಳಗೊಂಡವರ ಸರ್ವೆಯಂತೆ ದೇಶದ ಪ್ರಮುಖ ಟಿವಿ ಚಾನೆಲ್‌ಗಳು ಅತ್ಯಂತ ಜನಪ್ರಿಯ ಆಫ್‌ಲೈನ್ ಬ್ರಾಂಡ್‌ಗಳಾಗಿವೆ. ಆದರೆ ಸುದ್ದಿಯ ಕುರಿತಂತೆ ಜನರ ವಿಶ್ವಾಸಗಳು ಈಗಲೂ ದೂರದರ್ಶನ ಮತ್ತು ಆಕಾಶವಾಣಿ ಹಾಗೂ ಪ್ರಮುಖ ಪತ್ರಿಕೆಗಳ ಮೇಲೆ ಅಚಲವಾಗಿವೆ ಎಂದವರು ತಿಳಿಸಿದರು.

ಆದರೆ ನಮ್ಮ ಪತ್ರಿಕೆಗಳು, ಆನ್‌ಲೈನ್‌ನಲ್ಲಿ ಸ್ವತಂತ್ರ ಪತ್ರಿಕೋದ್ಯಮ ನಡೆಸುವ ಡಿಜಿಟಲ್ ಮೂಲದ ಬ್ರಾಂಡ್‌ಗಳಿಂದ ತೀವ್ರ ಪ್ರತಿಸ್ಪರ್ಧೆ ಎದುರಿಸುತ್ತಿದೆ. ಇಷ್ಟಾದರೂ ಡಿಜಿಟಲ್ ಮಾರ್ಕೆಟ್ 2021ನೇ ಸಾಲಿನಲ್ಲಿ ಜಾಹೀರಾತುವಿನಲ್ಲಿ ಶೇ.29ರಷ್ಟು ಹಾಗೂ ಚಂದಾ ಸಂಗ್ರಹದಲ್ಲಿ ಶೇ.೨೯ರಷ್ಟು ಅಭಿವೃದ್ಧಿಯನ್ನು ಸಾಧಿಸಿದೆ ಎಂದು ವರದಿಯಲ್ಲಿ ಹೇಳಲಾಗಿದೆ ಎಂದು ಅವರು ನುಡಿದರು.

ಇನ್ನೊಂದು ಕುತೂಹಲದ ವಿಷಯವೆಂದರೆ ಭಾರತದಲ್ಲಿ ಸ್ಮಾರ್ಟ್‌ಫೋನ್ ಹೊಂದಿರುವವರು ಸುದ್ದಿಗಳನ್ನು ಮೊಬೈಲ್ ಮೂಲಕ ಪಡೆಯುವ ಮಾರ್ಕೆಟ್ ಶೇ.೭೨ರಷ್ಟಿದೆ. ಕೇವಲ ಶೇ.೩೫ರಷ್ಟು ಮಂದಿ ಮಾತ್ರ ಕಂಪ್ಯೂಟರ್ ಮೂಲಕ ಸುದ್ದಿಯನ್ನು ಓದುತಿದ್ದಾರೆ. ಹೀಗಾಗಿ ಗೂಗಲ್ ನ್ಯೂಸ್, ಡೈಲಿ ಹಂಟ್, ಇನ್‌ಶಾರ್ಟ್ ಹಾಗೂ ನ್ಯೂಸ್‌ಪಾಯಿಂಟ್ ಸುದ್ದಿಯನ್ನು ಬಿತ್ತರಿಸುವ ವೇದಿಕೆಯಾಗಿ ವ್ಯಾಪಕವಾಗಿ ಬಳಸಲ್ಪಡುತ್ತದೆ ಎಂದರು.

ವರದಿಯ ಪ್ರಕಾರ ಸುದ್ದಿಯ ವಿಶ್ವಾಸಾರ್ಹತೆ ವಿಷಯಕ್ಕೆ ಬಂದರೆ ಮುದ್ರಣ ಮಾಧ್ಯಮಗಳು, ಡಿಡಿ ನ್ಯೂಸ್, ಆಕಾಶವಾಣಿ ಅತ್ಯಂತ ಹೆಚ್ಚು ಮಂದಿಯ ಮತಗಳನ್ನು ಪಡೆದಿವೆ. ಈ ವಿಷಯದಲ್ಲಿ ೨೪ಗಂಟೆ ಕಾರ್ಯ ನಿರ್ವಹಿಸುವ ಟಿವಿ ನ್ಯೂಸ್ ಚಾನೆಲ್‌ಗಳು, ಡಿಜಿಟಲ್ ಬ್ರಾಂಡ್‌ಗಳೊಂದಿಗೆ ಕಡಿಮೆ ವಿಶ್ವಾಸಾರ್ಹತೆ ಹೊಂದಿವೆ ಎಂದವರು ವಿವರಿಸಿದರು.

ಇದರಿಂದ ನಮ್ಮ ಮುಂದಿರುವ ಸವಾಲುಗಳ ಸ್ಪಷ್ಟ ಚಿತ್ರಣ ಸಿಗುತ್ತದೆ. ಡಿಜಿಟಲ್ ಟೆಕ್ನಾಲಜಿ ಹಾಗೂ ಸೋಷಿಯಲ್ ಮಿಡಿಯಾಗಳು ಮುಂಚೂಣಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಹೊಸ ತಲೆಮಾರು ಸುದ್ದಿಗಳನ್ನು ಗ್ರಹಿಸುವ ಹಾಗೂ ಸ್ವೀಕರಿಸುವ ವಿಧಾನದಲ್ಲಿ ಭಾರೀ ಬದಲಾವಣೆಗಳಾಗಿವೆ. ಮುದ್ರಣ ಮಾಧ್ಯಮಗಳು ಹೊಸ ತಲೆಮಾರಿಗೆ ಸುದ್ದಿಗಳನ್ನು ನೀಡುವಲ್ಲಿ ವಿಶೇಷ ಮುತುವರ್ಜಿ ವಹಿಸಬೇಕಾಗುತ್ತದೆ ಎಂದರು. 

ಬದಲಾಗುತ್ತಿರುವ ಇಂದಿನ ವಾತಾವರಣದಲ್ಲಿ ಸುದ್ದಿ ಮಾಧ್ಯಮಗಳು ಹಾಗೂ ಪತ್ರಕರ್ತರು ಸಾರ್ವಜನಿಕರ ವಿಶ್ವಾಸವನ್ನು ಉಳಿಸಿಕೊಂಡು ಕೆಲಸ ಮಾಡುವುದಕ್ಕೆ ಆದ್ಯತೆ ನೀಡಬೇಕು. ವೃತ್ತಿಗೆ ಬದ್ಧತೆಯನ್ನು ಹೊಂದಿ, ನಾವು ನೀಡುವ ಪತ್ರಿಕೋದ್ಯಮ ಪಾರದರ್ಶಕ, ವಿಶ್ವಾಸಾರ್ಹ ಹಾಗೂ ಯಾವುದೇ ಭಯ ಅಥವಾ ಪಕ್ಷಪಾತವಿಲ್ಲದ್ದು ಎಂಬುದನ್ನು ಅವರಿಗೆ ಮನವರಿಕೆ ಮಾಡಬೇಕಾಗುತ್ತದೆ ಎಂದವರು ನುಡಿದರು.

ಮಾಹೆ ವಿವಿಯ ಸಹ ಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್, ಎಂಐಸಿಯ ಸ್ಥಾಪಕ ನಿರ್ದೇಶಕರಾಗಿದ್ದ ಎಂ.ವಿ. ಕಾಮತ್ ಅವರ ಬಗ್ಗೆ ಮಾತನಾಡಿದರು. ಮಾಹೆ ರಿಜಿಸ್ಟ್ರಾರ್ ಡಾ.ನಾರಾಯಣ ಸಭಾಹಿತ್ ಉಪಸ್ಥಿತರಿದ್ದರು.

ಎಂಐಸಿ ನಿರ್ದೇಶಕಿ ಡಾ. ಪದ್ಮಾ ರಾಣಿ  ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಡಾ.ಮಂಜುಳಾ ಪರಿಚಯಿಸಿದರು. ಎಂಐಸಿಯ ಕಾರ್ಪೊರೇಟ್ ಕಮ್ಯೂನಿಕೇಶನ್ ವಿಭಾಗದ ಮುಖ್ಯಸ್ಥ ಡಾ.ಪದ್ಮಕುಮಾರ್ ವಂದಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X