ಭ್ರಷ್ಟಾಚಾರ ಪ್ರಕರಣ: ಅರಣ್ಯ ಕೈಗಾರಿಕಾ ನಿಗಮ ಅಧಿಕಾರಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್

ಸಾಂದರ್ಭಿಕ ಚಿತ್ರ
ಬೆಂಗಳೂರು, ಅ.19: ಭ್ರಷ್ಟಾಚಾರ ಪ್ರಕರಣದಡಿ ಕರ್ನಾಟಕ ಅರಣ್ಯ ಕೈಗಾರಿಕಾ ನಿಗಮ ನಿಯಮಿತ(ಕೆಎಸ್ಎಫ್ಐಸಿ) ಸಹಾಯಕ ವ್ಯವಸ್ಥಾಪಕ ಅಧಿಕಾರಿ ಬಿ.ಸಿ.ಶಾಂತಕುಮಾರ್ ಗೆ 3 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿ ಜಾರಿ ನಿರ್ದೇಶನಾಲಯ(ಈ.ಡಿ) ವಿಶೇಷ ಕೋರ್ಟ್ ಆದೇಶ ಹೊರಡಿಸಿದೆ.
ಕೆಎಸ್ಎಫ್ಐಸಿ ಸಹಾಯಕ ವ್ಯವಸ್ಥಾಪಕ ಶಾಂತಕುಮಾರ್ ವಿರುದ್ಧ ಈ.ಡಿ. ಅಧಿಕಾರಿಗಳು ಕೇಸ್ ದಾಖಲಿಸಿದ್ದರು. ಭ್ರಷ್ಟಾಚಾರ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶಾಂತಕುಮಾರ್ಗೆ ಮೂರು ವರ್ಷ ಕಾರಾಗೃಹ ಶಿಕ್ಷೆ ವಿಧಿಸಿ ಜಾರಿ ನಿರ್ದೇಶನಾಲಯ ವಿಶೇಷ ಕೋರ್ಟ್ ಆದೇಶ ಹೊರಡಿಸಿದೆ.
ಆರಂಭದಲ್ಲಿ ಶಾಂತಕುಮಾರ್ ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಜಾರಿ ನಿರ್ದೇಶನಾಲಯ ಪ್ರತ್ಯೇಕವಾಗಿ ಪ್ರಕರಣ ದಾಖಲಿಸಿಕೊಂಡಿತ್ತು. ಈ.ಡಿ. ಪರ ವಿಶೇಷ ಅಭಿಯೋಜಕ ರಾಜೇಶ್ ರೈ ವಾದ ಮಂಡಿಸಿದ್ದರು.
Next Story





