ಮಣಿಪಾಲ: ಅ.20ರಂದು ಅಣು ವಿಜ್ಞಾನಿ ಡಾ.ಅನಿಲ್ ಕಾಕೋಡ್ಕರ್ ಉಪನ್ಯಾಸ

ಉಡುಪಿ, ಅ.19: ದೇಶದ ಅಗ್ರಗಣ್ಯ ಅಣು ವಿಜ್ಞಾನಿ, ಭಾರತ ಅಣು ಶಕ್ತಿ ಆಯೋಗದ ಮಾಜಿ ಅದ್ಯಕ್ಷ, ಹೋಮಿಭಾಭಾ ನೇಷನಲ್ ಇನ್‌ಸ್ಟಿಟ್ಯೂಟ್ ನ ಕುಲಪತಿ ಹಾಗೂ ರಾಜೀವ್‌ಗಾಂಧಿ ವಿಜ್ಞಾನ ಮತ್ತು ತಂತ್ರಜ್ಞಾನ ಆಯೋಗದ ಅಧ್ಯಕ್ಷ ಡಾ.ಅನಿಲ್ ಕಾಕೋಡ್ಕರ್ ಅವರು ಅ.20ರಂದು ಮಣಿಪಾಲದಲ್ಲಿ ಉಪನ್ಯಾಸ ವೊಂದನ್ನು ನೀಡಲಿದ್ದಾರೆ.
ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಆಶ್ರಯದಲ್ಲಿ ಅವರು ನಾಳೆ ಅಪರಾಹ್ನ 3 ಗಂಟೆಗೆ ಎಂಐಟಿ ಗ್ರಂಥಾಲಯ ಸಭಾಂಗಣದಲ್ಲಿ ‘ಇಂಗಾಲದ ಡೈ ಆಕ್ಸೈಡ್ ಹೊರಸೂಸುವಿಕೆಯ ಶೂನ್ಯ ಸಾಧನೆಯಲ್ಲಿ ಅಣು ಶಕ್ತಿಯ ಪ್ರಸ್ತುತತೆ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
Next Story





