ಅಷ್ಟಮಠಗಳಿಗೆ ಲಿಖಿತ ಸಂವಿಧಾನ; ವಿಚಾರಣೆ ಮುಂದುವರಿಕೆ

ಉಡುಪಿ, ಅ.19: ಉಡುಪಿಯ ಅಷ್ಟಮಠಗಳಿಗೆ ಲಿಖಿತ ಸಂವಿಧಾನ ಬೇಕು ಎಂದು ಪೇಜಾವರ ಮಠದ ಪೀಠ ಪರಿತ್ಯಕ್ತ ವಿಶ್ವವಿಜಯ ಹೂಡಿದ ದಾವೆಯ ವಾದ-ಪ್ರತಿವಾದ ಬುಧವಾರ ಉಡುಪಿಯ ಪ್ರದಾನ ಸತ್ರ ನ್ಯಾಯಾಲಯದಲ್ಲಿ ನಡೆದಿದೆ.
ಮೂರು ದಶಕಗಳ ಹಿಂದೆ ಪೇಜಾವರ ಮಠದ ಪೀಠ ತ್ಯಾಗ ಮಾಡಿದ್ದ ವಿಶ್ವವಿಜಯತೀರ್ಥರು 2017ರಲ್ಲಿ ಅಷ್ಟಮಠಗಳ ಹತ್ತುಮಂದಿ ಯತಿಗಳ ವಿರುದ್ಧ ಪ್ರಧಾನ ಮತ್ತು ಸತ್ರ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ಅವರೀಗ ಐದೂವರೆ ವರ್ಷಗಳ ಬಳಿಕ ತಮ್ಮ ಪರವಾಗಿ ವಾದ ಮಾಡುತಿದ್ದ ವಕೀಲಸರನ್ನು ಬದಲಿಸಿ ಬೆಂಗಳೂರಿನ ವಕೀಲರಾದ ಪ್ರಸಾದ್ ಎಸ್.ಟಿ ಅವರನ್ನು ನೇಮಿಸಿದ್ದಾರೆ.
ನ್ಯಾಯದಾನ ವಿಳಂಬವಾಗುತ್ತಿರುವುದರಿಂದ ವಕೀಲರನ್ನು ಬದಲಿಸಿದ್ದು, ಇಂದಿನ ವಾದ-ಪ್ರಕ್ರಿಯೆಯಿಂದ ಶೀಘ್ರ ನ್ಯಾಯ ಸಿಗುವ ವಿಶ್ವಾಸ ಮೂಡಿದೆ ಎಂದು ವಿಶ್ವವಿಜಯ ತಿಳಿಸಿದ್ದಾರೆ.
Next Story





