Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಡ್ರೋನ್ ಬಳಸಲು ರಶ್ಯಕ್ಕೆ ಇರಾನ್ ಮಿಲಿಟರಿ...

ಡ್ರೋನ್ ಬಳಸಲು ರಶ್ಯಕ್ಕೆ ಇರಾನ್ ಮಿಲಿಟರಿ ತಜ್ಞರ ತರಬೇತಿ: ಅಮೆರಿಕ ಗುಪ್ತಚರ ಇಲಾಖೆ ವರದಿ

ವಾರ್ತಾಭಾರತಿವಾರ್ತಾಭಾರತಿ19 Oct 2022 9:57 PM IST
share
ಡ್ರೋನ್ ಬಳಸಲು ರಶ್ಯಕ್ಕೆ ಇರಾನ್ ಮಿಲಿಟರಿ ತಜ್ಞರ ತರಬೇತಿ: ಅಮೆರಿಕ ಗುಪ್ತಚರ ಇಲಾಖೆ ವರದಿ

ಟೆಹ್ರಾನ್, ಅ.19: ಇರಾನ್ ನಲ್ಲಿ ನಿರ್ಮಿಸಲಾದ ಡ್ರೋನ್(drone) ಗಳ ಬಳಕೆ ಬಗ್ಗೆ ರಶ್ಯ ಯೋಧರಿಗೆ ತರಬೇತಿ ನೀಡಲು ಇರಾನ್ ನ  ಸೇನಾ ತಜ್ಞರನ್ನು ಕ್ರಿಮಿಯಾಕ್ಕೆ ರವಾನಿಸಲಾಗಿದೆ ಎಂದು ಅಮೆರಿಕದ ಗುಪ್ತಚರ ಅಧಿಕಾರಿಗಳನ್ನು ಉಲ್ಲೇಖಿಸಿ ಸಿಎನ್ಎನ್(CNN) ವರದಿ ಮಾಡಿದೆ. 

ಈ ಡ್ರೋನ್ ಗಳನ್ನು ಬಳಸಿ ರಶ್ಯ ಉಕ್ರೇನ್(Russia Ukraine) ಮೇಲೆ ದಾಳಿ ನಡೆಸಿ ವ್ಯಾಪಕ ಹಾನಿ ಎಸಗಿದೆ. ರಶ್ಯದ ವಶದಲ್ಲಿರುವ ಕ್ರಿಮಿಯಾ ಪ್ರಾಂತದಿಂದ ಉಕ್ರೇನ ನ್ ನಗರಗಳು ಹಾಗೂ ಇಂಧನ ಮೂಲಸೌಕರ್ಯಗಳನ್ನು ಗುರಿಯಾಗಿಸಿ ಡ್ರೋನ್ ಗಳ ಮೂಲಕ ದಾಳಿ ಎಸಗಲಾಗುತ್ತಿದೆ ಎಂದು ವರದಿ ಹೇಳಿದೆ.

ಇರಾನ್ ಮತ್ತು ರಶ್ಯಗಳು ಹೆಚ್ಚು ನಿಕಟವಾಗುತ್ತಿರುವ ಸೂಚನೆ ಇದಾಗಿದ್ದು ಈ ಸಂಬಂಧ ತೀವ್ರ ಆತಂಕಕಾರಿಯಾಗಿದೆ. ಇದನ್ನು ಗಾಢ ಬೆದರಿಕೆ ಎಂದು ಪರಿಗಣಿಸಬೇಕಾಗಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ಪ್ರಧಾನ ಸಹಾಯಕ ವಕ್ತಾರ ವೇದಾಂತ್ ಪಟೇಲ್(Vedant Patel) ಹೇಳಿದ್ದಾರೆ.

ಆರಂಭದಲ್ಲಿ ರಶ್ಯದ ಯೋಧರಿಗೆ ಇರಾನ್ನಲ್ಲೇ ತರಬೇತಿ ನೀಡಲಾಗಿದೆ. ಆದರೆ ಆಗಸ್ಟ್ನಲ್ಲಿ ಉಕ್ರೇನ್ ಎದುರಿನ ಯುದ್ಧದಲ್ಲಿ ಡ್ರೋನ್ ಬಳಸುವಾಗ ಅವರಿಗೆ ಸಮಸ್ಯೆ ಎದುರಾದ ಬಳಿಕ  ಹಲವು ತಜ್ಞರು ಕ್ರಿಮಿಯಾಕ್ಕೆ ತೆರಳಿ ಅಲ್ಲಿ ಪ್ರಾತ್ಯಕ್ಷಿಕೆ ಸಹಿತ ತರಬೇತಿ ಒದಗಿಸಿದ್ದಾರೆ.

ಇರಾನ್ 2 ವಿಧದ ಡ್ರೋನ್ ಗಳನ್ನು ಒದಗಿಸಿದೆ. ಶಹೆಡ್ಸ್ ಎಂಬ ಡ್ರೋನ್ 1000 ಮೈಲುಗಳ ವ್ಯಾಪ್ತಿಯನ್ನು ಹೊಂದಿದ್ದರೆ, ಮೊಹಜೆರ್-6 ಡ್ರೋನ್ ಕ್ಷಿಪಣಿಗಳನ್ನು ಹೊತ್ತೊಯ್ಯುವ ಜತೆಗೆ ಕಣ್ಗಾವಲಿಗೂ ಬಳಸಬಹುದಾಗಿದೆ ಎಂದು ಅಮೆರಿಕ ಗುಪ್ತಚರ ಇಲಾಖೆಯ ಮೂಲಗಳು ಹೇಳಿವೆ. 

ಈ ಮಧ್ಯೆ, ಈ ವಿಷಯದ ಬಗ್ಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯಲ್ಲಿ ಚರ್ಚೆ ನಡೆಸಲು ಅಮೆರಿಕ, ಫ್ರಾನ್ಸ್ ಮತ್ತು ಬ್ರಿಟನ್ ಯೋಜಿಸುತ್ತಿವೆ. ಇರಾನ್ ನಿರ್ಮಿತ ಡ್ರೋನ್ಗಳನ್ನು ರಶ್ಯಕ್ಕೆ ವರ್ಗಾಯಿಸುವುದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯ ಸಂಖ್ಯೆ 2231ರ ಉಲ್ಲಂಘನೆಯಾಗಿದೆ ಎಂದು ಈ ದೇಶಗಳು ಪ್ರತಿಪಾದಿಸಿವೆ.

ರಶ್ಯಕ್ಕೆ ಇನ್ನಷ್ಟು ಮಿಲಿಟರಿ ನೆರವು: ಇರಾನ್  (More military aid to Russia: Iran)

 ರಶ್ಯಕ್ಕೆ ಇನ್ನಷ್ಟು ಡ್ರೋನ್ ಗಳು, ಕ್ಷಿಪಣಿಗಳನ್ನು ಒದಗಿಸುವುದಾಗಿ ಇರಾನ್ ಭರವಸೆ ನೀಡಿದೆ. ಈ ಕುರಿತ ಒಪ್ಪಂದಕ್ಕೆ ಅಕ್ಟೋಬರ್ 6ರಂದು ಸಹಿ ಹಾಕಲಾಗಿದೆ ಎಂದು ಇರಾನ್ನ ಅಧಿಕಾರಿಗಳು ಹಾಗೂ ರಾಜತಾಂತ್ರಿಕರನ್ನು ಉಲ್ಲೇಖಿಸಿ `ರಾಯ್ಟರ್ಸ್' (Reuters)ವರದಿ ಮಾಡಿದೆ.

ಇರಾನ್ ನ ಪ್ರಥಮ ಉಪಾಧ್ಯಕ್ಷ ಮುಹಮ್ಮದ್ ಮೊಖ್ಬೆರ್, ರೆವೊಲ್ಯುಷನರಿ ಗಾರ್ಡ್ಸ್(Muhammad Mokhber, Revolutionary Guards) ಇಬ್ಬರು ಹಿರಿಯ ಅಧಿಕಾರಿಗಳು ಹಾಗೂ ರಾಷ್ಟ್ರೀಯ ಭದ್ರತಾ ಸಮಿತಿಯ ಅಧಿಕಾರಿಯನ್ನೊಳಗೊಂಡ ಇರಾನ್ನ ನಿಯೋಗ ಅಕ್ಟೋಬರ್ 6ರಂದು ಮಾಸ್ಕೋಗೆ ಭೇಟಿ ನೀಡಿ ಈ ಬಗ್ಗೆ ಚರ್ಚೆ ನಡೆಸಿದೆ. ಇರಾನ್ನ ಈ ನಡೆ ಅಮೆರಿಕ ಹಾಗೂ ಇತರ ಪಾಶ್ಚಿಮಾತ್ಯ ಶಕ್ತಿಗಳನ್ನು ಕೆರಳಿಸುವ ನಿರೀಕ್ಷೆಯಿದೆ ಎಂದು ವರದಿ ಹೇಳಿದೆ. 

ಇನ್ನಷ್ಟು ಡ್ರೋನ್ ಗಳು ಹಾಗೂ ಅಧಿಕ ನಿಖರತೆಯ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಒದಗಿಸುವಂತೆ ರಶ್ಯನ್ನರು ಕೋರಿದ್ದಾರೆ ಎಂದು ಇರಾನ್ನ ರಾಜತಾಂತ್ರಿಕ ಮೂಲಗಳು ಹೇಳಿವೆ. ಶಸ್ತ್ರಾಸ್ತ್ರ ಪೂರೈಕೆ ಬಗ್ಗೆ ಉಭಯ ದೇಶಗಳ ಮಧ್ಯೆ ಒಪ್ಪಂದ ನಡೆದಿರುವುದನ್ನು ಪಾಶ್ಚಿಮಾತ್ಯ ದೇಶಗಳ ಮೂಲಗಳೂ ದೃಢಪಡಿಸಿವೆ.

ಪರಮಾಣು ಸ್ಥಾವರದ  50 ಸಿಬ್ಬಂದಿಗಳು ರಶ್ಯ ವಶದಲ್ಲಿ: ಉಕ್ರೇನ್ (50 nuclear plant workers in Russian custody: Ukraine)


ರಶ್ಯ ಆಕ್ರಮಿತ ದಕ್ಷಿಣ ಉಕ್ರೇನ್ನ  ಝಪೋರಿಝಿಯಾ ಪರಮಾಣು ಸ್ಥಾವರದ 50 ಸಿಬಂದಿಗಳು ರಶ್ಯದ ವಶದಲ್ಲಿದ್ದಾರೆ ಎಂದು ಉಕ್ರೇನ್ನ ಪರಮಾಣು ಇಂಧನ ಸಂಸ್ಥೆ ಬುಧವಾರ ಹೇಳಿದೆ. 

ಫೆಬ್ರವರಿಯಲ್ಲಿ ಪರಮಾಣು ಸ್ಥಾವರದ ಪ್ರದೇಶವನ್ನು ವಶಕ್ಕೆ ಪಡೆದಂದಿನಿಂದ ಸ್ಥಾವರದ 150ಕ್ಕೂ ಅಧಿಕ ಸಿಬಂದಿಗಳನ್ನು ರಶ್ಯ ವಶಕ್ಕೆ ಪಡೆದಿದ್ದು ಬಳಿಕ ಇವರಲ್ಲಿ ಕೆಲವರನ್ನು ಬಿಡುಗಡೆಗೊಳಿಸಿದೆ. ಇನ್ನೂ ಸುಮಾರು 50ರಷ್ಟು ಸಿಬಂದಿಗಳು ರಶ್ಯದ ವಶದಲ್ಲಿದ್ದಾರೆ ಎಂದು  ಉಕ್ರೇನ್ನ ʼನ್ಯಾಷನಲ್ ನ್ಯೂಕ್ಲಿಯರ್ ಎನರ್ಜಿ ಜನರೇಟಿಂಗ್ ಕಂಪೆನಿ'ಯ ವಕ್ತಾರರು ಬುಧವಾರ ಹೇಳಿದ್ದಾರೆ.

ಉಕ್ರೇನ್ ಪ್ರತಿದಾಳಿ ಖೆರ್ಸಾನ್ನಿಂದ ರಶ್ಯ ಅಧಿಕಾರಿಗಳ ಪಲಾಯನ

ಯುದ್ಧದ ಆರಂಭದ ದಿನದಿಂದಲೂ ರಶ್ಯ ಸೇನೆಯ ವಶದಲ್ಲಿದ್ದ ದಕ್ಷಿಣದ ಖೆರ್ಸಾನ್ ನಗರದಲ್ಲಿ ಉಕ್ರೇನ್ ಸೇನೆ ಪ್ರತಿದಾಳಿ ಆರಂಭಿಸಿದ್ದು ನಿರ್ಣಾಯಕ ಮುನ್ನಡೆ ಸಾಧಿಸಿದೆ. ರಶ್ಯದ ಅಧಿಕಾರಿಗಳು ನಗರದಿಂದ ಪಲಾಯನ ಮಾಡುತ್ತಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷರ ಕಚೇರಿ ಹೇಳಿದೆ. 

ಉಕ್ರೇನ್ ಸೇನೆ ಶೀಘ್ರವೇ ಖೆರ್ಸಾನ್ ನಗರವನ್ನು ಮರು ಸ್ವಾಧೀನ ಮಾಡಿಕೊಳ್ಳಲಿದೆ ಎಂದು ಅಧಿಕಾರಿಗಳು ಹೇಳಿದ್ದು  ಮಂಗಳವಾರ ರಾತ್ರಿ ಮಿಕೊಲಾಯಿವ್ ವಲಯದಲ್ಲಿ 13 ಇರಾನ್ ನಿರ್ಮಿತ ಡ್ರೋನ್ಗಳನ್ನು ಹೊಡೆದುರುಳಿಸಲಾಗಿದೆ ಎಂದಿದ್ದಾರೆ. ಖೆರ್ಸಾನ್ ನಗರವನ್ನು ಉಳಿಸಿಕೊಳ್ಳಲು ರಶ್ಯ ಸೇನೆ ಜೀವಪಣಕ್ಕಿಟ್ಟು ಹೋರಾಡಲಿದೆ ಎಂದು ಇಲ್ಲಿ ರಶ್ಯ ನಿಯೋಜಿಸಿದ ಆಡಳಿತಾಧಿಕಾರಿ ಪ್ರತಿಕ್ರಿಯಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X