ಸಂಚಾರಿ ರಂಗತಂಡಕ್ಕೆ ಕಲಾವಿದರಿಂದ ಅರ್ಜಿ ಆಹ್ವಾನ

ಉಡುಪಿ, ಅ.19: ಕಾರ್ಕಳ ಯಕ್ಷರಂಗಾಯಣದ ಸಂಚಾರಿ ರಂಗ ತಂಡಕ್ಕೆ ಆಸಕ್ತ ಕಲಾವಿದರಿಂದ ಅರ್ಜಿ ಆಹ್ವಾನಿಸಲಾಗಿದೆ.
ರಂಗಭೂಮಿಯಲ್ಲಿ ಅನುಭವ ಹೊಂದಿರುವ, ತಾಳ-ಲಯ- ಸಂಗೀತ- ಕುಣಿತದ ಬಗ್ಗೆ ಜ್ಞಾನ ಹೊಂದಿರುವ, ಕನ್ನಡ ಭಾಷೆಯನ್ನು ಸ್ಪಷ್ಟವಾಗಿ ಓದಲು- ಉಚ್ಚರಿಸಲು ಬರುವ ೧೮ರಿಂದ ೩೦ ವರ್ಷದೊಳಗಿನ ಕಲಾವಿದರು ಅರ್ಜಿ ಸಲ್ಲಿಸಲು ಅಕ್ಟೋಬರ್ ೨೫ ಕೊನೆಯ ದಿನ.
ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ವಿಶೇಷ ಕರ್ತವ್ಯಾಧಿಕಾರಿ, ಯಕ್ಷರಂಗಾಯಣ, ಕೋಟಿಚೆನ್ನಯ ಥೀಂ ಪಾರ್ಕ್, ಕಾರ್ಕಳ, ಉಡುಪಿ ಅನ್ನು ಸಂಪರ್ಕಿಸಬಹುದು ಎಂದು ಯಕ್ಷರಂಗಾಯಣದ ನಿರ್ದೇಶಕರ ಪತ್ರಿಕಾ ಪ್ರಕಟಣೆ ತಿಳಿಸಿದೆ.
Next Story





