ಗೂಡುದೀಪ, ಭಾಷಣ, ಚಿತ್ರಕಲಾ ಸ್ಪರ್ಧೆಗೆ ಆಹ್ವಾನ
ಫೈಲ್ ಫೋಟೊ
ಮಂಗಳೂರು, ಅ.19: ವಿಧಾನ ಪರಿಷತ್ ಮಾಜಿ ಸದಸ್ಯ, ಕೆಪಿಸಿಸಿ ಉಪಾಧ್ಯಕ್ಷ ಐವನ್ ಡಿಸೋಜರ ನೇತೃತ್ವದಲ್ಲಿ ದೀಪಾವಳಿ ಪ್ರಯುಕ್ತ ಅ. 26ರಂದು ಅಪರಾಹ್ನ 3ಕ್ಕೆ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಗೂಡುದೀಪ, ಭಾಷಣ, ಚಿತ್ರಕಲಾ ಸ್ಪರ್ಧೆ ನಡೆಯಲಿದೆ.
ಗೂಡುದೀಪ ಸ್ಪರ್ಧೆಯು ಆಧುನಿಕ ಮತ್ತು ಸಾಂಪ್ರದಾಯಿಕ ಎಂಬ 2 ವಿಭಾಗಗಳಲ್ಲಿ ನಡೆಯಲಿದೆ. ಪ್ರತಿ ವಿಭಾಗದಲ್ಲೂ ಪ್ರಥಮ/ದ್ವಿತೀಯ/ತೃತೀಯ ಬಹುಮಾನಗಳನ್ನು ನೀಡಲಾಗುವುದು. ಭಾಗವಹಿಸಿದ ಎಲ್ಲರಿಗೂ ಸಮಧಾನಕರ ಬಹುಮಾನಗಳನ್ನು ನೀಡಲಾಗುವುದು.
‘ದೀಪಾವಳಿ ಹಬ್ಬದ ಔಚಿತ್ಯತೆ ಮತ್ತು ಸೌಹರ್ದತೆ’ ಬಗ್ಗೆ ಎರಡು ವಿಭಾಗಗಳಲ್ಲಿ ಭಾಷಣ ಸ್ಪರ್ಧೆ ನಡೆಯಲಿದೆ. 6-10ನೇ ತರಗತಿಯವರೆಗೆ ಮತ್ತು 11ನೇ ತರಗತಿಯಿಂದ ಮೇಲ್ಪಟ್ಟ ವಿದ್ಯಾರ್ಥಿಗಳು ಭಾಗವಹಿಸಬಹುದು. ಸ್ಪರ್ಧೆಯಲ್ಲಿ ಕನ್ನಡ/ತುಳು/ ಇಂಗ್ಲಿಷ್ ಭಾಷೆಗಳನ್ನು ಬಳಸಬಹುದು. ಭಾಷಣ ಸ್ಪರ್ಧೆಯ ಅವಧಿ 4 ನಿಮಿಷಗಳಾಗಿರುತ್ತದೆ.
ಪ್ರಾಥಮಿಕ, ಪ್ರೌಢ, ಕಾಲೇಜು ವಿಭಾಗಳಲ್ಲಿ ನಡೆಯುವ ಚಿತ್ರಕಲಾ ಸ್ಪರ್ಧೆಗೆ ‘ದೀಪಾವಳಿಯ ವೈಶಿಷ್ಟತೆ’ಯ ಕಲ್ಪನೆಯ ವಿಷಯವಾಗಿದೆ.
ಭಾಷಣ/ಚಿತ್ರಕಲಾ ಸ್ಪರ್ಧೆಗೆ ಸತೀಶ್ ಪೆಂಗಲ್ (9036719916), ಆನಂದ ಸೋನ್ಸ್ (9901184656), ಅನಿಲ್ ತೋರಸ್ (9343561281), ಮೀನಾ ಟೆಲ್ಲಿಸ್ (7022436831) ಹಾಗೂ ಗೂಡುದೀಪ ಸ್ಪರ್ಧೆಗೆ ಮಹೇಶ್ ಕುಮಾರ್(9743597991) ಅವರನ್ನು ಅ.24ರೊಳಗೆ ಸಂಪರ್ಕಿಸಿ ಹೆಸರು ನೋಂದಾಯಿಸಬೇಕು ಎಂದು ಪ್ರಕಟನೆ ತಿಳಿಸಿದೆ.