ಟಾಯ್ಲೆಟ್ ಚೊಂಬಿನಲ್ಲಿ, ಹಾಸ್ಟೆಲ್ ದಿಂಬಿನಲ್ಲೂ ಲಂಚ: ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ
''ಸಿದ್ದರಾಮಯ್ಯ ಕೈಯಲ್ಲಿ ಮಿಂಚಿದ್ದ ವಾಚು ಕೊಂಡು ತಂದಿದ್ದೋ, ಕದ್ದು ತಂದಿದ್ದೋ?''

ಸೇ ಸಿಎಂ ಎಂದು ಪ್ರಶ್ನಿಸುವ ಮುನ್ನ ಕಾಂಗ್ರೆಸಿಗರು ಒಂದು ಪ್ರಶ್ನೆಗೆ ಉತ್ತರಿಸಲಿ.
ಸಿದ್ದರಾಮಯ್ಯ ಅವರ ಕೈಯಲ್ಲಿ ಒಂದು ಕಾಲದಲ್ಲಿ ಮಿಂಚಿದ್ದ ವಾಚು ಕೊಂಡು ತಂದಿದ್ದೋ, ಕದ್ದು ತಂದಿದ್ದೋ ?#WatchPe ಸಿದ್ದರಾಮಯ್ಯ ನಿಮಲ್ಲಿ ಉತ್ತರವಿದೆಯೇ?
ಬೆಂಗಳೂರು, ಅ.19: ‘ಆತ್ಮೀಯ ರಾಜ್ಯ ಕಾಂಗ್ರೆಸ್ ನಾಯಕರೆ, ಒಂದೇ ವಾಕ್ಯದಲ್ಲಿ ಉತ್ತರಿಸಿ.ಸಿದ್ದರಾಮಯ್ಯ ಅವಧಿಯಲ್ಲಿ ಸಚಿವರಾಗಿದ್ದ ಆಂಜನೇಯ ಅವರ ‘ವಿಜಯ ಬ್ಯಾಂಕ್’ ಖಾತೆಯಲ್ಲಿ ಠೇವಣಿಯಾಗಿದ್ದು ಯಾರ ಹಣ? ಆಯ್ಕೆ:1-ಸಿದ್ದರಾಮಯ್ಯ, 2-ಅಂದಿನ ಕಾಂಗ್ರೆಸ್ ಸಿಎಂ, 3-ಇಂದಿನ ವಿಪಕ್ಷ ನಾಯಕ. ಬ್ಯಾಂಕ್ ಪೇ ಮೂಲಕ ಸಿದ್ದರಾಮಯ್ಯಗೆ ಎಷ್ಟು ಸಂದಾಯವಾಗಿದೆ' ಎಂದು ಬಿಜೆಪಿ ಪ್ರಶ್ನಿಸಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ, ‘ಈಗ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ್ ಇಂಧನ ಸಚಿವರಾಗಿದ್ದಾಗ ಸೋಲಾರ್ ಹಗರಣದಲ್ಲಿ ‘ಲಕ್ಷ್ಮಿ ಭಾಗ್ಯ’ ಪಡೆದಿದ್ದು ಯಾರು? ಸಂಬಂಧಿಕರೇ ಸೋಲಾರ್ ಉತ್ಪಾದಕರಾಗಿದ್ದು ಯಾರ ಕೃಪೆಯಿಂದ? ಈ ಹಗರಣದಲ್ಲಿ ‘ಲಕ್ಷ್ಮಿ ಪೇ’ ಯಿಂದ ಎಷ್ಟು ಲಂಚ, ‘ಪೇ ಡಿಕೆ’ ಆಗಿದೆ? ಮೌನವೇಕೆ, ‘ಸೇ ಡಿಕೆ’ ಎಂದು ಪ್ರಶ್ನಿಸಿದೆ.
‘ಟಾಯ್ಲೆಟ್ ಚೊಂಬಿನಲ್ಲಿ ಲಂಚ, ಹಾಸ್ಟೆಲ್ ದಿಂಬಿನಲ್ಲಿ ಲಂಚ. ಸಿದ್ದರಾಮಯ್ಯ ಅವರೇ, ಪರಿಶಿಷ್ಟರ ಹಾಗೂ ಹಿಂದುಳಿದ ವರ್ಗಗಳ ಹಾಸ್ಟೆಲ್ ಅನುದಾನವನ್ನು ಕಬಳಿಸಿದವರು ನಿಮ್ಮ ಸಂಪುಟದಲ್ಲಿ ಸಚಿವರಾಗಿದ್ದಿದ್ದು ಮರೆತು ಹೋಯಿತೇ? ‘ಪಿಲ್ಲೊ ಪೇ’ ಹಗರಣದ ಸೂತ್ರಧಾರರು ನೀವೇ ಅಲ್ವೇ ಸಿದ್ದರಾಮಯ್ಯ?' ಎಂದು ಬಿಜೆಪಿ ಟೀಕಿಸಿದೆ.
‘ಗಾಳಿಯಲ್ಲಿ ಗುಂಡು ಹೊಡೆದಂತೆ, ಕೇವಲ ಸಾಕ್ಷ್ಯ ರಹಿತ ಆರೋಪ ಮಾಡಿದ್ದೇ ಸಿದ್ದರಾಮಯ್ಯ ಸಾಧನೆ. ಸಿದ್ದರಾಮಯ್ಯ ಅವರೇ, ಯಾವ ಕಾರಣಕ್ಕಾಗಿ ನಿಮಗೆ ದುಬಾರಿ ವಾಚ್ ಉಡುಗೊರೆಯಾಗಿ ಸಿಕ್ಕಿದ್ದು? ನೀವು ‘ವಾಚ್ ಪೇ’ ಮೂಲಕ ಪಡೆದ ಲಂಚವೆಷ್ಟು?' ಎಂದು ಬಿಜೆಪಿ ಪ್ರಶ್ನಿಸಿದೆ.
ಲೋಕಾಯುಕ್ತಕ್ಕೆ ಮೊಳೆ ಹೊಡೆದು, ಎಸಿಬಿಯನ್ನು ಯನ್ನು ‘ಆಕ್ಟಿವ್ ಕಲೆಕ್ಷನ್ ಬ್ಯುರೋ’ ರೀತಿ ಬಳಸಿಕೊಂಡಿದ್ದೇ ಸಿದ್ದರಾಮಯ್ಯ ಸಾಧನೆ. ಸಿದ್ದರಾಮಯ್ಯ ಅವರಿಗೆ ಅಂದು ತನಿಖೆ ಮಾಡಿಸುವ ತಾಕತ್ತು ಇರಲಿಲ್ಲವೇ ಅಥವಾ ತನಿಖೆಯಾದರೆ ಜೈಲಿಗೆ ಹೋಗಬೇಕಾದೀತು ಎಂಬ ಭಯ ಕಾಡಿತ್ತೇ? ಪಂಚೆ ಮಾತ್ರ ಶುಭ್ರ, ಮೈಯೆಲ್ಲಾ ಭ್ರಷ್ಟಾಚಾರದ ಕೊಳೆ ಎಂದು ಬಿಜೆಪಿ ಟೀಕಿಸಿದೆ.
ಹುದ್ದೆಗಾಗಿ ಅರ್ಜಿ ಸಲ್ಲಿಸದವರನ್ನು ಲಂಚ ಪಡೆದು ನೇಮಕಾತಿ ಮಾಡಿದ್ದು ಕಾಂಗ್ರೆಸ್. ರೈತರಿಗೆ ಮೋಸ ಮಾಡಿ ಸೋಲಾರ್ ಹಗರಣ ಮಾಡಿದ್ದು ಕಾಂಗ್ರೆಸ್. ಬಿಡಿಎಯನ್ನು ಭ್ರಷ್ಟರ ಅಂಗಳ ಮಾಡಿದ್ದು ಕಾಂಗ್ರೆಸ್. ಇದನ್ನು ಹಿರಿಯ ಯುವನಾಯಕ ರಾಹುಲ್ ಗಾಂಧಿ ಅವರ ಗಮನಕ್ಕೆ ಏಕೆ ತಂದಿಲ್ಲ ಭ್ರಷ್ಟರಾಮಯ್ಯ ಎಂದು ಬಿಜೆಪಿ ಪ್ರಶ್ನಿಸಿದೆ.
'ಸೇ ಸಿಎಂ ಎಂದು ಪ್ರಶ್ನಿಸುವ ಮುನ್ನ ಕಾಂಗ್ರೆಸಿಗರು ಒಂದು ಪ್ರಶ್ನೆಗೆ ಉತ್ತರಿಸಲಿ. ಸಿದ್ದರಾಮಯ್ಯ ಅವರ ಕೈಯಲ್ಲಿ ಒಂದು ಕಾಲದಲ್ಲಿ ಮಿಂಚಿದ್ದ ವಾಚು ಕೊಂಡು ತಂದಿದ್ದೋ, ಕದ್ದು ತಂದಿದ್ದೋ ? #WatchPe ಸಿದ್ದರಾಮಯ್ಯ ನಿಮಲ್ಲಿ ಉತ್ತರವಿದೆಯೇ?'' ಎಂದು ಬಿಜೆಪಿ ಪ್ರಶ್ನಿಸಿದೆ.
ಸೇ ಸಿಎಂ ಎಂದು ಪ್ರಶ್ನಿಸುವ ಮುನ್ನ ಕಾಂಗ್ರೆಸಿಗರು ಒಂದು ಪ್ರಶ್ನೆಗೆ ಉತ್ತರಿಸಲಿ.
— BJP Karnataka (@BJP4Karnataka) October 19, 2022
ಸಿದ್ದರಾಮಯ್ಯ ಅವರ ಕೈಯಲ್ಲಿ ಒಂದು ಕಾಲದಲ್ಲಿ ಮಿಂಚಿದ್ದ ವಾಚು ಕೊಂಡು ತಂದಿದ್ದೋ, ಕದ್ದು ತಂದಿದ್ದೋ ?#WatchPe ಸಿದ್ದರಾಮಯ್ಯ ನಿಮಲ್ಲಿ ಉತ್ತರವಿದೆಯೇ?







