ಭಟ್ಕಳ: ಅಗತ್ಯ ವಸ್ತುಗಳ ಬೆಲೆ ಏರಿಕೆ, ಯುವಜನರ ನಿರೂದ್ಯೋಗ ಸಮಸ್ಯೆ ಕುರಿತು ಜನಜಾಗೃತಿ ಜಾಥಾ

ಭಟ್ಕಳ: ದೇಶದ ಜನತೆ ಎದುರಿಸುತ್ತಿರುವ ಅಗತ್ಯ ವಸ್ತುಗಳ ಬೆಲೆ ಏರಿಕೆ ಮತ್ತು ದೇಶದ ಯುವಜನತೆಯ ನಿರುದ್ಯೋಗದಂತಹ ಮೂಲಭೂತ ಸಮಸ್ಯೆಗಳ ಪರಿಹಾರಕ್ಕಾಗಿ ದೇಶಾದ್ಯಂತ ಹಕ್ಕೊತ್ತಾಯದ ಅಭಿಯಾನ ವನ್ನು ಹಮ್ಮಿಕೊಂಡಿದ್ದು ಕಲಬುರ್ಗಿಯಿಂದ ಆರಂಭಗೊಂಡ ಜನಜಾಗೃತಿ ಜಾಥಾ ಗುರುವಾರ ಭಟ್ಕಳ ತಲುಪಿತು.
ದೇಶದಲ್ಲಿ ಹಣದುಬ್ಬರ ಮತ್ತು ನಿರುದ್ಯೋಗ ಬಿಕಟ್ಟು ನಿಭಾಯಿಸುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದ್ದು, ತಕ್ಷಣ ಪರಿಹಾರ ಕ್ರಮಗಳು ತೆಗೆದುಕೊಳ್ಳಬೇಕು. ನಿರುದ್ಯೋಗಿ ಯುವಕರಿಗೆ ನಿರುದ್ಯೋಗ ಭತ್ಯೆ (ಸ್ಟೈಪೆಂಡ್) ನೀಡಬೇಕು. ಸಂವಿಧಾನದ ಪರಿಚ್ಛೇದ 21 ರ ಅಡಿಯಲ್ಲಿ ಜೀವನೋಪಾಯದ ಹಕ್ಕನ್ನು ಮೂಲಭೂತ ಹಕ್ಕನಾಗಿ ಮಾಡಬೇಕು. ಅಗತ್ಯ ವಸ್ತುಗಳ ಮೇಲಿನ ಉSಖಿ ಯನ್ನು ಹಿಂಪಡೆಯಬೇಕು. ಬಡವರಿಗೆ ಅವರ ಖರೀದಿ ಸಾಮರ್ಥ್ಯವನ್ನು ಸಕ್ರಿಯಗೊಳಿಸಲು ಹಣ ನೀಡಬೇಕು. ಎಲ್ಲಾ ಬಿಪಿಎಲ್ ಕಾರ್ಡ್ ಕುಟುಂಬಗಳಿಗೆ ಉಚಿತ ಸಿಲಿಂಡರ್ ಮತ್ತು ಸಬ್ಸಿಡಿ ರಿಫಿಲ್ ಸಿಲಿಂಡರ್ ಗಳು ನೀಡಬೇಕು ಎಂಬ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಕೊಂಡು ರಾಜ್ಯದ ಕಲಬುರ್ಗಿಯಿಂದ ಮಂಗಳೂರು ತನಕ ಜಾಥಾ ನಡೆಸಲಾಗುತ್ತಿದೆ.
ಜಾಥಾವನ್ನು ಉದ್ದೇಶಿಸಿ ಮಾತನಾಡಿದ ರಾಜ್ಯಾಧ್ಯಕ್ಷ ನ್ಯಾಯಾವಾದಿ ತಾಹೀರ್ ಹುಸೇನ್, ಇಂದು ನಮ್ಮ ದೇಶ ದಲ್ಲಿ ಹಲವಾರು ಸಮಸ್ಯೆಗಳು ತಲೆದುರಿವೆ, ಅದರಲ್ಲಿ ಬಹುಮುಖ್ಯವಾಗಿ ಬೆಲೆ ಏರಿಕೆ ಮತ್ತು ನಿರುದ್ಯೋಗವಾಗಿದೆ, ಇದರಿಂದ ದೇಶದ ಬಡ ಮತ್ತು ಮಧ್ಯಮ ವರ್ಗದ ಜನರ ಬದುಕು ಚಿಂತಾಜನಕವಾಗಿದೆ, ಬಡಜನರು ಬಳಸುವ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿದೆ, ಆದಾಯ ಪಾತಾಳಕ್ಕೆ ಕುಸಿದಿದೆ ಎಂದರು.
ಜನಸಾಮಾನ್ಯರ ಈ ಸಮಸ್ಯೆಗಳ ಬಗ್ಗೆ ದ್ವನಿ ಎತ್ತಲು, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಅಕ್ಟೋಬರ್ 15 ರಿಂದ 31, 2022 ರ ತನಕ ಒಂದು ರಾಷ್ಟೀಯ ಅಭಿಯಾನ ಹಮ್ಮಿಕೊಂಡಿದೆ. "ದೇಶದೆಲ್ಲಡೆ ಹಾಹಾಕಾರ - ನಿರುದ್ಯೋಗ ಮತ್ತು ಬೆಲೆ ಏರಿಕೆಗೆ ಎಂದು ಪರಿಹಾರ" ಎಂಬ ಘೋಷವಾಕ್ಯದೊಂದಿಗೆ ನಡೆಯುವ ಈ ಅಭಿಯಾನದ ಮೂಲಕ ಜನ ಜಾಗೃತಿ ಮೂಡಿಸಿ ಸರಕಾರಕ್ಕೆ ಜನರು ಎದುರಿಸುತ್ತಿರುವ ಸಂಕಷ್ಟದ ಸ್ಥಿತಿಯನ್ನು ಮನದಟ್ಟು ಮಾಡುವ ಒಂದು ಪ್ರಯತ್ನವಾಗಿದೆ. ಈ ಅಭಿಯಾನದ ಅಂಗವಾಗಿ "ಜನ ಜಾಗೃತಿ ಜಾಥಾ" ವು ಕಲಬುರಗಿ ಯಿಂದ ಮಂಗಳೂರು ವರೆಗೆ ಸಂಚರಿಸುತ್ತಿದ್ದು ಬೈಕ್ ರ್ಯಾಲಿ, ಸಾರ್ವಜನಿಕ ಸಭೆ, ಪತ್ರಿಕಾ ಘೋಷ್ಠಿ, ಬೀದಿ ನಾಟಕ ಮುಂತಾದ ಕಾರ್ಯಕ್ರಮಗಳು ಈ ಸಂಧರ್ಭ ದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಶ್ರೀಕಾಂತ್ ಸಾಲ್ಯಾನ್, ಪ್ರಧಾನ ಕಾರ್ಯದರ್ಶಿ ಹಬೀಬುಲ್ಲಾ, ರಾಜ್ಯ ಮಾಧ್ಯಮ ಕಾರ್ಯದರ್ಶಿ ಅಝೀಝ್ ಜಾಗಿರ್ದಾರ್, ಉ.ಕ. ಜಿಲ್ಲಾಧ್ಯಕ್ಷ ಫಾರೂಖ್ ಮಾಸ್ಟರ್, ಖಮರುದ್ದೀನ್ ಮಷಾಯಿಖ್, ಮುಖಂಡರಾದ ಅಬ್ದುಲ್ ಜಬ್ಬಾರ್ ಅಸದಿ, ಅಬ್ದುಲ್ ಮಾಜೀದ್ ಕೋಲಾ ಮುಂತಾದವರು ಇದ್ದರು.
ಉ.ಕ ಜಿಲ್ಲೆಯ ಹೊನ್ನಾವರದ ಪರೇಶ್ ಮೇಸ್ತಾ ಸಾವನ್ನು ಕೊಲೆ ಎಂದು ಬಿಂಬಿಸಿ ಅದನ್ನು ಮುಸ್ಲಿಮರ ತಲೆಗೆ ಕಟ್ಟಲು ಬಿಜೆಪಿ ನಡೆಸಿದ ಪ್ರಯತ್ನ ವಿಫಲಗೊಂಡಿದ್ದು ರಾಜ್ಯದಲ್ಲಿ ನಡೆದ ಯುವಕರ ಕೊಲೆ ಮತ್ತು ಸಾವುಗಳನ್ನು ಬಿಜೆಪಿ ಎನ್ಕ್ಯಾಶ್ ಮಾಡಿಕೊಂಡಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯಾಧ್ಯಕ್ಷ ನ್ಯಾಯಾವಾದಿ ತಾಹೀರ್ ಹುಸೇನ್ ಹೇಳಿದರು.
ಅವರು ಗುರುವಾರ ಭಟ್ಕಳದಲ್ಲಿ ನಡೆದ ಜನಜಾಗೃತಿ ಜಾಥಾದಲ್ಲಿ ಪಾಲ್ಗೊಂಡು ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಕೋಮುಗಲಭೆಗಳನ್ನು ಸೃಷ್ಟಿಸುತ್ತಿದೆ ಎಂದು ಆರೋಪಿಸಿದ ಅವರು ಭ್ರಷ್ಟಾಚಾರ ಪರಮಾವಧಿಗೆ ತಲುಪಿದೆ. ನಮ್ಮ ಮುಖ್ಯಮಂತ್ರಿಯನ್ನು ಇನ್ನೊಂದು ರಾಜ್ಯಕ್ಕೆ ಹೋದಾಗ ಭ್ರಷ್ಟ ಮುಖ್ಯಮಂತ್ರಿ ಎಂದು ಜನ ಸ್ವಾಗತಿಸುವಂತಹ ಸ್ಥಿತಿ ನಿರ್ಮಾಣಗೊಂಡಿದೆ. ಇದು ಅತ್ಯಂತ ನಾಚಿಕೆಗೇಡು, ಬಿಜೆಪಿ ಅತ್ಯಂತ ನೀಚತನದ ರಾಜಕಾರಣಕ್ಕೆ ಇಳಿದಿದ್ದು ಸಾವುಗಳನ್ನು ಕೊಲೆಗಳು ಎಂದು ಬಿಂಬಿಸಿ ಆ ಮೂಲಕ ತಮ್ಮ ಪಕ್ಷವನ್ನು ಬಲಪಡಿಸಿಕೊಳ್ಳಲು ಹಣಿಸುತ್ತಿದ್ದಾರೆ ಎಂದರು.
ಪರೇಶ್ ಮೇಸ್ತಾನ ಕುಟುಂಬಕ್ಕೆ ನ್ಯಾಯಾ ಕೊಡಿಸುತ್ತೇನೆಂದು ಹೇಳಿದ ಬಿಜೆಪಿಗರು ಅವರ ಕುಟುಂಬವನ್ನು ವಂಚಿಸಿವೆ. ಸಾವನ್ನು ಕೊಲೆಯನ್ನು ಎಂದು ಬಿಂಬಿಸಿದವರ ಕುರಿತು ತನಿಖೆಯಾಗಬೇಕು, ಇವರ ಷಡ್ಯಂತ್ರ ಹೊರಬರಬೇಕು ಎಂದು ಆಗ್ರಹಿಸಿದರು. ಸರ್ಕಾರದಲ್ಲಿದ್ದುಕೊಂಡು ಒಂದು ಜವಾಬ್ದಾರಿತ ಸ್ಥಾನದಲ್ಲಿದ್ದು ಮಂತ್ರಿಗಳು, ಶಾಸಕರು ತಮ್ಮ ಅಧಿಕಾರವನ್ನು ದುರೂಪಯೋಗ ಪಡೆಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಸಾರ್ವಜನಿಕರು ಎಚ್ಚೆತ್ತುಕೊಂಡು ಪಾಠವನ್ನು ಕಲಿಸಲಿದ್ದಾರೆ ಎಂದ ಅವರು, ರಾಜಕೀಯ ಪಕ್ಷಗಳ ಷಡ್ಯಂತ್ರಗಳಿಗೆ ಬಲಿಯಾಗದೆ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು, ಪರೇಶ್ ಮೇಸ್ತಾನ ಕುಟುಂಬಕ್ಕೆ ನ್ಯಾಯಾ ಒದಗಿಸಿಕೊಡಬೇಕು ಎಂದು ಅವರು ಆಗ್ರಹಿಸಿದರು.






.jpeg)
.jpeg)

