ಅ. 22ರಂದು ಯಕ್ಷಗಾನ ಕಲಾರಂಗದ 34ನೇ ಮನೆ ಉದ್ಘಾಟನೆ
ಸಾಂದರ್ಭಿಕ ಚಿತ್ರ
ಉಡುಪಿ, ಅ.20: ಹೆಗ್ಗುಂಜೆ ಗ್ರಾಮದ ಯಕ್ಷಗಾನ ಮದ್ದಲೆವಾದಕ ನೀರ್ಜೆಡ್ಡು ವಿಜಯ ನಾಯ್ಕ್ ಇವರಿಗೆ ಯಕ್ಷಗಾನ ಕಲಾರಂಗದ ಮೂಲಕ ಮಣಿಪಾಲದ ಡಾ. ಎಸ್. ಕಾಮತ್ ಕುಟುಂಬ ಉಡುಪಿಯ ಗುರುಸ್ಮತಿ ಟ್ರಸ್ಟ್ ಪ್ರಾಯೋಜಕತ್ವದಲ್ಲಿ ನಿರ್ಮಿಸಿದ ನೂತನ ಮನೆ ‘ಕುಸುಮ್ ವಿಹಾರ್’ ಇದರ ಉದ್ಘಾಟನೆ ಅ.22ರ ಶನಿವಾರ ನಡೆಯಲಿದೆ
ನಿವೃತ್ತ ಮುಖ್ಯ ಶಿಕ್ಷಕ ಶತಾಯುಷಿ ಎನ್. ರಾಮದಾಸ್ ಕಾಮತ್ ಇವರು ಅ.22ರ 5:00ಕ್ಕೆ ನೂತನ ಮನೆಯನ್ನು ಉದ್ಘಾಟಿಸುವರು. ಇದು ಯಕ್ಷಗಾನ ಕಲಾರಂಗ ಸಂಸ್ಥೆ ದಾನಿಗಳ ನೆರನಿಂದ ಈವರೆಗೆ ನಿರ್ಮಿಸಿಕೊಡುತ್ತಿರುವ 34ನೇ ಮನೆಯಾಗಿದೆ. ಹಾಗೂ ಕಲಾವಿದರಿಗೆ ನಿರ್ಮಿಸಿದ 6ನೇ ಮನೆಯಾಗಿದೆ ಎಂದು ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story