ಅ.23ಕ್ಕೆ ಕಮಲಾಬಾಯಿ ಹೈಸ್ಕೂಲ್‌ನಲ್ಲಿ ತ್ರಿವೇಣಿ ಸಂಗಮ

ಉಡುಪಿ, ಅ.20: ಇದೇ ಅ.23ರ ರವಿವಾರ ಬೆಳಗ್ಗೆ 10ಕ್ಕೆ ಕಡಿಯಾಳಿಯ ಯು. ಯು.ಕಮಲಾ ಬಾಯಿ ಪ್ರೌಢಶಾಲೆಯಲ್ಲಿ ಶಾಲಾ ನಿವೃತ್ತ ಅಧ್ಯಾಪಕರು, ಹಳೆ ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗದವರ ‘ತ್ರಿವೇಣಿ ಸಂಗಮ’ ವಿಶೇಷ ಕಾರ್ಯಕ್ರಮ ನಡೆಯಲಿದೆ.
ಕಮಲಾಬಾಯಿ ಹೈಸ್ಕೂಲ್ ಪ್ರಾರಂಭದ ಅಂದರೆ 1965ರಿಂದ 2021ರ ವರೆಗಿನ ಎಲ್ಲಾ ಹಳೆಯ ವಿದ್ಯಾರ್ಥಿಗಳ ಪುರ್ನಮಿಲನ ಕಾರ್ಯಕ್ರಮ ಇದಾಗಿರುತ್ತದೆ. ಅಂದಿನ ಕಾರ್ಯಕ್ರಮದಲ್ಲಿ ಶಾಲಾ ಗತವೈಭವದ ನೆನಪು ಮರುಕಳಿಸಲಿದೆ. ಈ ಕಾರ್ಯಕ್ರಮದಲ್ಲಿ ಶಾಲೆಯಲ್ಲಿ ಸೇವೆ ಸಲ್ಲಿಸಿದ ಎಲ್ಲರನ್ನು ಗೌರವಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಶಾಲೆಯಲ್ಲಿ ಪ್ರಥಮ ಸ್ಥಾನ ಬಂದ ಎಲ್ಲಾ ಹಳೆ ವಿದ್ಯಾರ್ಥಿಗಳಿಗೆ ಮತ್ತು ನಿವೃತ್ತ ಅಧ್ಯಾಪಕರಿಗೆ, ಶಾಲಾ ಬ್ಯಾಂಡ್ ಮೂಲಕ ಸ್ವಾಗತ, ಶಾಲಾ ಮೈದಾನ ದಲ್ಲಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಡಾ. ವಿಜಯೇಂದ್ರ ವಸಂತ ನೇತೃತ್ವದಲ್ಲಿ ಅಸೆಂಬ್ಲಿ, ಶಾಲೆಯಲ್ಲಿ ಸೇವೆ ಸಲ್ಲಿಸಿ ನಿಧನ ಹೊಂದಿದ ಶಾಲಾ ನಿವೃತ್ತ ಮುಖ್ಯೋಪಾಧ್ಯಾಯರು ಮತ್ತು ನಿವೃತ್ತ ಅಧ್ಯಾಪಕರಿಗೆ ಭಾವಪೂರ್ಣ ನುಡಿ ನಮನ, 1982/1983ರ ಬ್ಯಾಚಿನ ಹಳೆ ವಿದ್ಯಾರ್ಥಿನಿಯರಿಂದ ಗ್ರಾಮ ದೇವತೆ ಕಡಿಯಾಳಿ ಮಹಿಷ ಮರ್ದಿನಿಯ ಪ್ರಾರ್ಥನೆ, ಸಭಾ ಕಾರ್ಯಕ್ರಮ ದಲ್ಲಿ ಎಲ್ಲಾ ನಿವೃತ್ತರಿಗೆ ಸನ್ಮಾನ ಜರುಗಲಿದೆ. ಸೆಲ್ಫಿ ವಿಥ್ ಮೈ ಫೇವರೆಟ್ ಟೀಚರ್ ಇದಕ್ಕೂ ಅವಕಾಶ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.







