ಉಡುಪಿ: ಭರತಮುನಿ ಜಯಂತ್ಯುತ್ಸವ

ಉಡುಪಿ, ಅ.20: ಪರ್ಯಾಯ ಶ್ರೀಕೃಷ್ಣಾಪುರ ಮಠದ ಆಶ್ರಯದಲ್ಲಿ ಉಡುಪಿಯ ರಾಧಾಕೃಷ್ಣ ನೃತ್ಯನಿಕೇತನದ ವತಿಯಿಂದ ಆಚರಿಸಲಾದ ಭರತ ಮುನಿ ಜಯಂತ್ಯುತ್ಸವವನ್ನು ರಾಜಾಂಗಣದಲ್ಲಿ ಪರ್ಯಾಯ ಶ್ರೀ ವಿದ್ಯಾಸಾಗರ ತೀರ್ಥರು ಉದ್ಘಾಟಿಸಿದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಖ್ಯಾತ ಲೇಖಕ ಹಾಗೂ ಕನ್ನಡ ಉಪನ್ಯಾಸಕ ರವಿಚಂದ್ರ ಬಾಯರಿ ವಹಿಸಿದ್ದರು. ಅತಿಥಿಯಾಗಿ ಕಿರುತೆರೆ ಮತ್ತು ಚಲನಚಿತ್ರ ಕಲಾವಿದರಾದ ಕಾರ್ತಿಕ್ ಸಾಮಗ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಭರತ ಪ್ರಶಸ್ತಿಯನ್ನು ಬೆಂಗಳೂರಿನ ನೃತ್ಯಗುರು ವಿದುಷಿ ಶುಭದಾ ಸುಧೀರ್, ವಿದುಷಿ ಡಾ. ಸುಪರ್ಣ ವೆಂಕಟೇಶ್, ಉಡುಪಿಯ ವಿದುಷಿ ಡಾ.ಚೇತನಾ ಆಚಾರ್ಯ, ಪರ್ಕಳ ಭಾರತಿ ಸಂಗೀತ ವಿದ್ಯಾಲಯದ ವಿದುಷಿ ಉಮಾಶಂಕರಿ ಹಾಗೂ ಯಕ್ಷಗಾನ ಕಲಾವಿದ ಜಗನ್ನಾಥ ಆಚಾರ್ಯ ಎಳ್ಳಂಪಳ್ಳಿ ಇವರಿಗೆ ನೀಡಿ ಗೌರವಿಸಲಾಯಿತು.
ಶ್ರೀವಿದ್ಯಾಸಾಗರ ತೀರ್ಥರು ಪ್ರಶಸ್ತಿ ಪ್ರದಾನ ಮಾಡಿದರು. ತೀರ್ಥಹಳ್ಳಿಯ ವಿದುಷಿ ಅರುಂಧತಿ ಪಿ ವಿ ಭಟ್ ಮತ್ತು ಪುತ್ತೂರಿನ ವಿದ್ವಾನ್ ಮಂಜುನಾಥ್ ಇವರು ನೃತ್ಯಾರಾಧನಾ ಪ್ರಶಸ್ತಿ ಸ್ವೀಕರಿಸಿದರು. ಕಲಾರ್ಪಣ ಪ್ರಶಸ್ತಿಯನ್ನು ಸುರತ್ಕಲಿನ ಸ್ವರ್ಣಾ ಶೆಟ್ಟಿ ಇವರು ಸ್ವೀಕರಿಸಿದರು.
ಗುರು ರಾಧಾಕೃಷ್ಣಾನುಗ್ರಹ ಪ್ರಶಸ್ತಿಯನ್ನು ಸಂಸ್ಥೆಯ ಭರತನಾಟ್ಯ ವಿದ್ವತ್ ಪದವಿ ಪಡೆದ ವಿದ್ಯಾರ್ಥಿಗಳಾದ ವಿದುಷಿ ಅಮೃತ ಪ್ರಸಾದ್, ವಿದುಷಿ ಪ್ರಣತಿ ಆಚಾರ್ಯ, ವಿದುಷಿ ಶರಣ್ಯ ರಾವ್, ವಿದುಷಿ ಸುಶ್ಮಿತಾ ಗಿರಿರಾಜ್, ವಿದುಷಿ ವಿನಿತಾ ರಾಜ್ ಕಿಶೋರ್ ಸ್ವೀಕರಿಸಿದರು.
ಸಂಸ್ಥೆಯ ಗುರು ನೃತ್ಯ ವಿದುಷಿ ವೀಣಾ ಮುರಳೀಧರ ಸಾಮಗ ಅತಿಥಿಗಳನ್ನು ಸ್ವಾಗತಿಸಿದರು.ಅಶ್ವಥ್ ಭಾರದ್ವಾಜ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಸಂಚಾಲಕ ಮುರಳೀಧರ ಸಾಮಗ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ನಂತರ ಭರತನಾಟ್ಯ, ಕೂಚಿಪುಡಿ ನೃತ್ಯ ರೂಪಕಗಳಾದ ಕೃಷ್ಣಂ ವಂದೇ ಜಗದ್ಗುರುಂ, ಒನಕೆ ಓಬವ್ವ ಸಂಸ್ಥೆಯ ಶಿಷ್ಯವೃಂದದಿಂದ ಪ್ರಸ್ತುತಗೊಂಡಿತು.







