ಮಹಾರಾಷ್ಟ್ರ ಎಟಿಎಸ್ ನಿಂದ ರಾಯಗಢದಲ್ಲಿ ನಾಲ್ವರು ಪಿಎಫ್ಐ ಕಾರ್ಯಕರ್ತರ ಬಂಧನ
![ಮಹಾರಾಷ್ಟ್ರ ಎಟಿಎಸ್ ನಿಂದ ರಾಯಗಢದಲ್ಲಿ ನಾಲ್ವರು ಪಿಎಫ್ಐ ಕಾರ್ಯಕರ್ತರ ಬಂಧನ ಮಹಾರಾಷ್ಟ್ರ ಎಟಿಎಸ್ ನಿಂದ ರಾಯಗಢದಲ್ಲಿ ನಾಲ್ವರು ಪಿಎಫ್ಐ ಕಾರ್ಯಕರ್ತರ ಬಂಧನ](https://www.varthabharati.in/sites/default/files/images/articles/2022/10/20/353664-1666279928.jpg)
ಫೈಲ್ ಫೋಟೊ
ಮುಂಬೈ,ಅ.20: ನೆರೆಯ ರಾಯಗಡ ಜಿಲ್ಲೆಯ ಪನ್ವೇಲ್ (Panvel)ನಲ್ಲಿ ನಿಷೇಧಿತ ಪಿಎಫ್ಐ ಸಂಘಟನೆಯ ನಾಲ್ವರು ಕಾರ್ಯಕರ್ತರನ್ನು ಮಹಾರಾಷ್ಟ್ರ ಭತೋತ್ಪಾದನೆ ನಿಗ್ರಹ ದಳ (ಎಟಿಎಸ್)(Suppression Squad)ವು ಬಂಧಿಸಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದರು.
ಬಂಧಿತರಲ್ಲಿ ಪಿಎಫ್ಐನ ರಾಜ್ಯ ವಿಸ್ತರಣಾ ಸಮಿತಿಯ ಸ್ಥಳೀಯ ಸದಸ್ಯ, ಸ್ಥಳೀಯ ಘಟಕದ ಕಾರ್ಯದರ್ಶಿ ಮತ್ತು ಇತರ ಇಬ್ಬರು ಕಾರ್ಯಕರ್ತರು ಸೇರಿದ್ದಾರೆ ಎಂದರು.
ಸಂಘಟನೆಯನ್ನು ನಿಷೇಧಿಸಲಾಗಿದ್ದರೂ ಪನ್ವೇಲ್ ನಲ್ಲಿ ಪಿಎಫ್ಐನ ಇಬ್ಬರು ಪದಾಧಿಕಾರಿಗಳು ಮತ್ತು ಕೆಲವು ಕಾರ್ಯಕರ್ತರ ಸಭೆಯ ಕುರಿತು ಲಭಿಸಿದ್ದ ನಿರ್ದಿಷ್ಟ ಮಾಹಿತಿಯ ಮೇರೆಗೆ ಎಟಿಎಸ್ ತಂಡವು ಶೋಧ ಕಾರ್ಯಾಚರಣೆ ನಡೆಸಿ ನಾಲ್ವರು ಪಿಎಫ್ಐ ಕಾರ್ಯಕರ್ತರನ್ನು ಬಂಧಿಸಿದೆ ಎಂದು ಅಧಿಕಾರಿ ತಿಳಿಸಿದರು.
ಮುಂಬೈನ ಕಾಲಾಚೌಕಿಯಲ್ಲಿನ ಎಟಿಎಸ್ ಘಟಕದಲ್ಲಿ ಪ್ರಕರಣ ದಾಖಲಾಗಿದ್ದು,ವಿಚಾರಣೆಯ ಬಳಿಕ ನಾಲ್ವರನ್ನು ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಯಡಿ ಬಂಧಿಸಲಾಗಿದೆ. ಮುಂದಿನ ತನಿಖೆ ನಡೆಯುತ್ತಿದೆ ಎಂದರು.
Next Story