‘ಮೀನುಗಾರರಿಗೆ ತಕ್ಷಣ ಬಾಕಿ ಉಳಿದ ಸೀಮೆಎಣ್ಣೆ ಬಿಡುಗಡೆ ಮಾಡಿ’

ಉಡುಪಿ, ಅ.20: ರಾಜ್ಯದ ಕರಾವಳಿ ಜಿಲ್ಲೆಗಳ ಮೀನುಗಾರರಿಗೆ ಮೀನುಗಾರಿಕೆಗಾಗಿ ಕೇಂದ್ರದಿಂದ ಬರಲು ಬಾಕಿ ಇರುವ ಸೀಮೆಎಣ್ಣೆಯನ್ನು ತಕ್ಷಣವೇ ಬಿಡುಗಡೆಗೊಳಿಸುವಂತೆ ಶಿವಮೊಗ್ಗ ಸಂಸದ್ ಸದಸ್ಯ ಬಿ.ವೈ. ರಾಘವೇಂದ್ರ, ಕೇಂದ್ರ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಇಲಾಖೆಯ ಜಂಟಿ ಕಾರ್ಯದರ್ಶಿ ನವನೀತ್ ಕೊಠಾರಿ ಅವರನ್ನು ಒತ್ತಾಯಿಸಿದ್ದಾರೆ.
ಗುರುವಾರ ಹೊಸದಿಲ್ಲಿಯಲ್ಲಿ ನವನೀತ್ ಕೊಠಾರಿ ಅವರನ್ನು ಭೇಟಿ ಮಾಡಿದ ರಾಘವೇಂದ್ರ ಅವರು, ಕೇಂದ್ರ ಸರ್ಕಾರ ಈಗಾಗಲೇ ರಾಜ್ಯಕ್ಕೆ ೨೪೭೨ ಕಿ.ಲೀ. ಸೀಮೆಎಣ್ಣೆಯನ್ನು ಮಂಜೂರು ಮಾಡಿದ್ದು, ಬಾಕಿ ಉಳಿದಿರುವ ೨೧೬೧೮ ಕಿ.ಲೀ. ಸೀಮೆಎಣ್ಣೆಯನ್ನು ಸಹ ಕೂಡಲೇ ಬಿಡುಗಡೆ ಮಾಡಲು ಮನವಿ ಮಾಡಿದರು.
ಸಂಸದರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಇಲಾಖೆಯ ಜಂಟಿ ಕಾರ್ಯದರ್ಶಿಗಳು ಒಂದು ವಾರದ ಒಳಗಾಗಿ ಮಂಜೂರಾತಿ ಆದೇಶವನ್ನು ಹೊರಡಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಸಂಸದ ಕಚೇರಿಯ ಪ್ರಕಟಣೆ ಯಲ್ಲಿ ತಿಳಿಸಲಾಗಿದೆ.
Next Story





