ಬ್ರಿಟನ್ ವಿಮಾನದತ್ತ ಹಾರಿಬಂದ ರಶ್ಯದ ಕ್ಷಿಪಣಿ: ವರದಿ

ಲಂಡನ್, ಅ.20: ಕಪ್ಪು ಸಮುದ್ರದ ಮೇಲೆ ಅಂತರಾಷ್ಟ್ರೀಯ ವಾಯುಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ಬ್ರಿಟನ್ನ ಗಸ್ತು ವಿಮಾನದ ಸನಿಹಕ್ಕೆ ರಶ್ಯದ ಯುದ್ಧವಿಮಾನವೊಂದು ಸೆಪ್ಟಂಬರ್ 29ರಂದು ಕ್ಷಿಪಣಿಯನ್ನು ಉಡಾಯಿಸಿದೆ ಎಂದು ಬ್ರಿಟನ್ನ ರಕ್ಷಣಾ ಸಚಿವ ಬೆನ್ ವ್ಯಾಲೇಸ್(Ben Wallace) ಗುರುವಾರ ಹೇಳಿದ್ದಾರೆ.
ಈ ಬಗ್ಗೆ ರಶ್ಯದ ರಕ್ಷಣಾ ಸಚಿವರು ಅಕ್ಟೋಬರ್ 10ರಂದು ನೀಡಿರುವ ಉತ್ತರದಲ್ಲಿ, ವಿಮಾನದಲ್ಲಿ ಕಂಡು ಬಂದ ತಾಂತ್ರಿಕ ದೋಷದ ಕಾರಣ ಈ ಘಟನೆ ನಡೆದಿರುವುದಾಗಿ ಉಲ್ಲೇಖಿಸಿದ್ದಾರೆ. ಇದೀಗ ಬ್ರಿಟನ್ನ ಗಸ್ತು ವಿಮಾನಗಳಿಗೆ ಯುದ್ಧವಿಮಾನದ ಬೆಂಬಲ ಒದಗಿಸಲಾಗಿದೆ ಎಂದು ವ್ಯಾಲೇಸ್ ಹೇಳಿದ್ದಾರೆ.
Next Story