Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಬ್ರಿಟನ್: 28ರೊಳಗೆ ನೂತನ ಪ್ರಧಾನಿ...

ಬ್ರಿಟನ್: 28ರೊಳಗೆ ನೂತನ ಪ್ರಧಾನಿ ಆಯ್ಕೆ‌

ವಾರ್ತಾಭಾರತಿವಾರ್ತಾಭಾರತಿ20 Oct 2022 11:03 PM IST
share
ಬ್ರಿಟನ್: 28ರೊಳಗೆ ನೂತನ ಪ್ರಧಾನಿ ಆಯ್ಕೆ‌

ಲಂಡನ್, ಅ.20: ನಿರ್ಗಮಿತ ಪ್ರಧಾನಿ ಲಿಝ್ ಟ್ರಸ್(Liz Truss) ಅವರ ಸ್ಥಾನಕ್ಕೆ ಅಕ್ಟೋಬರ್ 28ರೊಳಗೆ ಚುನಾವಣೆ ನಡೆದು ನೂತನ ಪ್ರಧಾನಿಯನ್ನು ಆಯ್ಕೆ ಮಾಡಲಾಗುವುದು ಎಂದು ಕನ್ಸರ್ವೇಟಿವ್ ಪಕ್ಷ(Conservative Party)ದ ಪ್ರಭಾವೀ ಅಧಿಕಾರಿ ಗುರುವಾರ ಹೇಳಿದ್ದಾರೆ.

ಅಕ್ಟೋಬರ್ 28ರ ಶುಕ್ರವಾರದ ಒಳಗೆ ಮತದಾನವನ್ನು ನಡೆಸಲು ಮತ್ತು ನಾಯಕತ್ವದ ಚುನಾವಣೆ ನಡೆಸಲು ಸಾಧ್ಯವಾಗುತ್ತದೆ. ಆದ್ದರಿಂದ ಅಕ್ಟೋಬರ್ 31ರಂದು ನಡೆಯುವ ವಾರ್ಷಿಕ ಆರ್ಥಿಕ ಕಾರ್ಯನೀತಿಯ ಹೇಳಿಕೆ ಬಿಡುಗಡೆಗೂ ಮುನ್ನ ನಾವು ಹೊಸ ನಾಯಕನನ್ನು ಹೊಂದಬೇಕು ಎಂದು ಪ್ರಭಾವೀ  `ಹಿಂದಿನ ಸಾಲಿನ ಸದಸ್ಯರ 1922ರ ಸಮಿತಿ'ಯ ಅಧ್ಯಕ್ಷ ಗ್ರಹಾಂ ಬ್ರಾಡಿ ಹೇಳಿದ್ದಾರೆ. 

ಶೀಘ್ರ ನೂತನ ಪ್ರಧಾನಿ ಆಯ್ಕೆಗೆ ಅಮೆರಿಕ, ಫ್ರಾನ್ಸ್ ಕರೆ(America, France call for the election of a new prime minister soon)

ಬ್ರಿಟನ್ನ ನೂತನ ಪ್ರಧಾನಿಯಾಗಿ ಯಾರೇ ಆಯ್ಕೆಯಾದರೂ ಅವರೊಂದಿಗೆ ಅಮೆರಿಕ ನಿಕಟ ಸಂಬಂಧವನ್ನು ಹೊಂದಿರುತ್ತದೆ ಎಂದು ಅಮೆರಿಕದ ಶ್ವೇತಭವನದ ಉನ್ನತ ಅಧಿಕಾರಿ ರಾನ್ ಕ್ಲೇನ್ ಗುರುವಾರ ಹೇಳಿದ್ದಾರೆ.

ಬ್ರಿಟನ್ ಸಾಧ್ಯವಾದಷ್ಟು ಬೇಗ ಸ್ಥಿರತೆಯನ್ನು ಕಂಡುಕೊಳ್ಳುವುದು ಮುಖ್ಯವಾಗಿದೆ. ವೈಯಕ್ತಿಕ ನೆಲೆಯಲ್ಲಿ ಹೇಳುವುದಾದರೆ ಒಬ್ಬ ಸಹೋದ್ಯೋಗಿ ನಿರ್ಗಮಿಸುವುದು ಅತ್ಯಂತ ಬೇಸರದ ವಿಷಯ  ಎಂದು ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮಾಕ್ರನ್ ಪ್ರತಿಕ್ರಿಯಿಸಿದ್ದಾರೆ.

ಬ್ರಿಟನ್ನ ರಾಜಕೀಯ ಮತ್ತು ಆರ್ಥಿಕ ಸ್ಥಿರತೆಗಾಗಿ ಟ್ರಸ್ ಸ್ಥಾನದಲ್ಲಿ ನೂತನ ಪ್ರಧಾನಿಯನ್ನು ಆದಷ್ಟು ಬೇಗ ನೇಮಕ ಮಾಡಬೇಕು ಎಂದು ಐರ್ಲ್ಯಾಂಡ್ ಪ್ರಧಾನಿ ಮೈಕೆಲ್ ಮಾರ್ಟಿನ್ ಹೇಳಿದ್ದಾರೆ.

ಮತ್ತೆ ಪ್ರಧಾನಿ ಗಾದಿ ಮೇಲೆ ಕಣ್ಣಿಟ್ಟಿರುವ ಜಾನ್ಸನ್(Johnson is eyeing the Prime Minister again)

ಗುರುವಾರ ರಾಜೀನಾಮೆ ನೀಡಿರುವ ಲಿಝ್ ಟ್ರಸ್ರ ಸ್ಥಾನಕ್ಕೆ ಕನ್ಸರ್ವೇಟಿವ್ ಪಕ್ಷದ ನಾಯಕತ್ವ ಸ್ಪರ್ಧೆಯಲ್ಲಿ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಕಾಣಿಸಿಕೊಳ್ಳಬಹುದು ಎಂದು `ದಿ ಟೈಮ್ಸ್' ವರದಿ ಮಾಡಿದೆ. ರಾಷ್ಟ್ರೀಯ ಹಿತಾಸಕ್ತಿಯ ಹೆಸರಲ್ಲಿ ಜಾನ್ಸನ್ ಮತ್ತೆ ಪ್ರಧಾನಿ ಅಭ್ಯರ್ಥಿಯಾಗುವ ಸಾಧ್ಯತೆಯನ್ನು ತಳ್ಳಿಹಾಕಲಾಗದು ಎಂದು `ಟೈಮ್ಸ್'ನ ರಾಜಕೀಯ ಸಂಪಾದಕ ಸ್ಟೀವನ್ ಸ್ವಿನ್ಫಾರ್ಡ್ ಟ್ವೀಟ್ ಮಾಡಿದ್ದಾರೆ.

ತಕ್ಷಣ ಚುನಾವಣೆಗೆ ವಿಪಕ್ಷಗಳ ಆಗ್ರಹ(Opposition demands for immediate elections)

ಪ್ರಧಾನಿ ಲಿಝ್ ಟ್ರಸ್ ರಾಜೀನಾಮೆ ನೀಡಿರುವುದರಿಂದ ಬ್ರಿಟನ್ನಲ್ಲಿ ತಕ್ಷಣ ಸಾರ್ವತ್ರಿಕ ಚುನಾವಣೆ ನಡೆಸಬೇಕು ಎಂದು ಬ್ರಿಟನ್ನ ವಿಪಕ್ಷ ಮುಖಂಡ ಕೆಯರ್ ಸ್ಟಾö್ಯಮರ್ ಆಗ್ರಹಿಸಿದ್ದಾರೆ.

ತಾವು ಇತ್ತೀಚೆಗೆ ಎದುರಿಸಿದ ಅವಮಾನ, ಮುಖಭಂಗಗಳನ್ನು ಮರೆಸಿಬಿಡುವ ರೀತಿಯಲ್ಲಿ ಟೋರಿಗಳು(ಕನ್ಸರ್ವೇಟಿವ್ ಪಕ್ಷದ ಸದಸ್ಯರು) ಮತ್ತೆ ತಮ್ಮ ಬೆರಳುಗಳನ್ನು ಒತ್ತುವ ಮೂಲಕ ಬ್ರಿಟನ್ ಜನರ ಒಪ್ಪಿಗೆಯಿಲ್ಲದೆ  ಉನ್ನತ ಹುದ್ದೆಯಲ್ಲಿ  ಅಭ್ಯರ್ಥಿಯನ್ನು ಕೂರಿಸಲು ಸಾಧ್ಯವಿಲ್ಲ. ನಮಗೆ ಈಗ ಸಾರ್ವತ್ರಿಕ ಚುನಾವಣೆಯ ಅಗತ್ಯವಿದೆ ಎಂದು ಲೇಬರ್ ಪಕ್ಷದ ಮುಖಂಡ ಸ್ಟ್ಯಾಮರ್ ಹೇಳಿದ್ದಾರೆ.

ತಮಗೆ ಅಧಿಕಾರ ನಡೆಸಲು ಜನಾದೇಶವಿಲ್ಲ ಎಂದು ಕನ್ಸರ್ವೇಟಿವ್ ಪಕ್ಷ ತೋರಿಸಿಕೊಟ್ಟಿದೆ. 12 ವರ್ಷದ ಟೋರಿ ವೈಫಲ್ಯದ ಬಳಿಕ ಬ್ರಿಟನ್ ಜನರು ಗೊಂದಲದ ಆಡಳಿತಕ್ಕಿಂತಲೂ ಉತ್ತಮವಾದುದಕ್ಕೆ ಅರ್ಹರಾಗಿದ್ದಾರೆ. ಇದೀಗ ಅವರು (ಆಡಳಿತ ಪಕ್ಷ) ದೇಶದ ಅರ್ಥವ್ಯವಸ್ಥೆಯನ್ನು ಪಾತಾಳಕ್ಕೆ ಇಳಿಸಿದ್ದು ಜನತೆ ಬೆಲೆ ಏರಿಕೆಯಿಂದ ತತ್ತರಿಸಿದ್ದಾರೆ. ಅವರು ಮಾಡಿರುವ ಹಾನಿಯನ್ನು ಸರಿಪಡಿಸಲು ಹಲವು ವರ್ಷಗಳು ಬೇಕಾಗಬಹುದು. ದೇಶ ಎದುರಿಸುತ್ತಿರುವ ಎಲ್ಲಾ ಬಿಕ್ಕಟ್ಟಿನ ಮೂಲ ಪ್ರಧಾನಿಯ ಕಚೇರಿ, ಆದರೆ ಅದಕ್ಕೆ ಬೆಲೆ ತೆರುತ್ತಿರುವವರು ಜನಸಾಮಾನ್ಯರು ಎಂದು ಸ್ಟಾö್ಯಮರ್ ಟೀಕಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X