ಬ್ರಿಟನ್ ಗೆ ಇಂತಹ ಅವಮಾನವನ್ನು ಇದುವರೆಗೆ ನೋಡಿಲ್ಲ: ರಶ್ಯ

Photo : Maria Zakharova /twitter
ಮಾಸ್ಕೋ, ಅ.20: ಬ್ರಿಟನ್ ಪ್ರಧಾನಿಯೊಬ್ಬರು ಈ ರೀತಿ ಅವಮಾನ ಹೊಂದಿರುವನ್ನು ಇದುವರೆಗೆ ನೋಡಿಲ್ಲ ಎಂದು ರಶ್ಯ ಪ್ರತಿಕ್ರಿಯಿಸಿದೆ.
ಬೋರಿಸ್ ಜಾನ್ಸನ್(Boris Johnson) ರಾಜೀನಾಮೆಯ ಬಳಿಕ ನೂತನ ಪ್ರಧಾನಿಯನ್ನು ದೇಶದ ಜನತೆ ಆಯ್ಕೆ ಮಾಡಿರಲಿಲ್ಲ. ಕನ್ಸರ್ವೇಟಿವ್ ಪಕ್ಷದವರು ಮಾಡಿದ್ದಾರೆ. ಆದ್ದರಿಂದಲೇ ಬ್ರಿಟನ್ ಈ ರೀತಿಯ ಅವಮಾನಕ್ಕೆ ಸಾಕ್ಷಿಯಾಗಿದೆ. ಈ ಆಯ್ಕೆ ಪ್ರಜಾಪ್ರಭುತ್ವ ಪ್ರಕ್ರಿಯೆಗೆ ವಿರುದ್ಧವಾಗಿದೆ ಎಂದು ರಶ್ಯದ ವಿದೇಶಾಂಗ ಇಲಾಖೆಯ ವಕ್ತಾರೆ ಮರಿಯಾ ಝಕರೋವಾ(Maria Zakharova) ಹೇಳಿದ್ದಾರೆ.
ಬ್ರಿಟನ್ನಲ್ಲಿ ಸರಕಾರ ಬದಲಾವಣೆಯನ್ನು ಕನ್ಸರ್ವೇಟಿವ್ ಪಕ್ಷದ ಕೆಲ ಗಣ್ಯರು ನಡೆಸಿದ್ದಾರೆ. ದೇಶದ ಜನತೆ ಟ್ರಸ್ರನ್ನು ಆಯ್ಕೆ ಮಾಡಿರಲಿಲ್ಲ . ಟ್ರಸ್ ನಾಯಕತ್ವದಲ್ಲಿ ರಶ್ಯ-ಬ್ರಿಟನ್ ದ್ವಿಪಕ್ಷೀಯ ಸಂಬಂಧದಲ್ಲಿ ಸುಧಾರಣೆಯಾಗುವ ವಿಶ್ವಾಸವಿಲ್ಲ ಎಂದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಈ ಹಿಂದೆಯೇ ಪ್ರತಿಕ್ರಿಯಿಸಿದ್ದರು.
Next Story