ಕಲ್ಲಾಪು: ‘ಯುನಿಟಿ ಬುರ್ಖಾ-ಯುನಿಟಿ ಫ್ಯಾಶನ್’ ಶುಭಾರಂಭ

ಮಂಗಳೂರು, ಅ.21: ರಾ.ಹೆ.66ರ ತೊಕ್ಕೊಟ್ಟು ಸಮೀಪದ ಕಲ್ಲಾಪು ಯುನಿಟಿ ಹಾಲ್ ಗ್ರೌಂಡ್‌ನ ಕಟ್ಟಡದಲ್ಲಿ ತೆರೆಯಲಾದ ‘ಯುನಿಟಿ ಬುರ್ಖಾ’ (ಶ್ವಾಲ್ ಮತ್ತು ನಖಾಬ್) ಹಾಗೂ ‘ಯುನಿಟಿ ಫ್ಯಾಶನ್’ (ವಿಮೆನ್ಸ್ ವೇರ್) ಮಳಿಗೆಯು ಶುಕ್ರವಾರ ಶುಭಾರಂಭಗೊಂಡಿತು.
ಉಳ್ಳಾಲ ದರ್ಗಾದ ಅಧ್ಯಕ್ಷ ಅಬ್ದುಲ್ ರಶೀದ್ ಹಾಜಿ ಮಳಿಗೆಯನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಉದ್ಯಮ ರಂಗದಲ್ಲಿ ಪಳಗಿದ ಮಹನೀಯರೇ ಬುರ್ಖಾ ಸಹಿತ ಮಹಿಳೆಯರ ಉಡುಪುಗಳ ಈ ಮಳಿಗೆಯನ್ನು ತೆರೆದಿದ್ದಾರೆ. ಇಲ್ಲಿ ಕೈಗೆಟಕುವ ದರದಲ್ಲಿ ಗ್ರಾಹಕರಿಗೆ ವಸ್ತ್ರಗಳು ಸಿಗುವಂತೆ ಮಾಡಲಿದ್ದಾರೆ ಎಂಬ ವಿಶ್ವಾಸವಿದೆ. ಇಲ್ಲಿನ ಸಿಬ್ಬಂದಿ ವರ್ಗವು ಒಂದೇ ಕುಟುಂಬದ ಸದಸ್ಯರಂತೆ ಗ್ರಾಹಕರ ಜೊತೆ ಬೆರೆತು ಮಳಿಗೆಯ ಶ್ರೇಯಸ್ಸಿನಲ್ಲಿ ಪ್ರಮುಖ ಪಾತ್ರವಹಿಸಬೇಕು ಎಂದು ಕರೆ ನೀಡಿದರು.
ಜಾತ್ಯತೀತ ಜನತಾದಳದ ರಾಜ್ಯ ಕಾರ್ಯದರ್ಶಿ ಹೈದರ್ ಪರ್ತಿಪ್ಪಾಡಿ ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಲೆಕ್ಕಪರಿಶೋಧಕ ಯು.ಎಚ್.ಅಹ್ಮದ್, ನಾಸಿರ್ ಸಾಮಣಿಗೆ, ಬಶೀರ್ ಬೈಕಂಪಾಡಿ, ‘ಯುನಿಟಿ ಬುರ್ಖಾ- ಯುನಿಟಿ ಫ್ಯಾಶನ್’ನ ಪಾಲುದಾರರಾದ ಬಾವಾ ಹಾಜಿ, ಮೋನು ಹಾಜಿ, ತಯ್ಯೂಬ್ ಹಾಜಿ, ಫೈಝಲ್ ಹಾಜಿ, ಹರ್ಷದ್, ಝಾಹಿರ್ ಉಪಸ್ಥಿತರಿದ್ದರು.