ಮಂಗಳೂರು : ಅ.29ರಂದು ನೇರ ಉದ್ಯೋಗ ಸಂದರ್ಶನ

ಮಂಗಳೂರು, ಅ.21: ನಗರದ ಲಾಲ್‌ಬಾಗ್‌ನಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಅ.29ರ ಬೆಳಗ್ಗೆ 10ರಿಂದ 1.30ರವರೆಗೆ ವಿವಿಧ ಖಾಸಗಿ ಕಂಪೆನಿಗಳಿಂದ ನೇರ ಸಂದರ್ಶನ ನಡೆಯಲಿದೆ.
ಅವತಾರ್ ಹೋಟೆಲ್ ಮತ್ತು ಕನ್‌ವೆನ್ಷನ್, ಫಿನ್ ಪವರ್ ಏರ್‌ಕಾನ್ ಸಿಸ್ಟಮ್ಸ್ ಪ್ರೈ.ಲಿ. ಸುವರ್ಣ ಕರ್ನಾಟಕ(ಎನ್‌ಜಿಒ), ಮುತೂಟ್ ಫೈನಾನ್ಸ್, ಈಶ ಮೋಟಾರ್ಸ್ ಹಾಗೂ ಯುರೇಖಾ ಪೋರ್ಬ್ಸ್ ಖಾಸಗಿ ಕಂಪೆನಿಗಳು ಭಾಗವಹಿಸಲಿವೆ.
ಎಸೆಸೆಲ್ಸಿ, ಪಿಯುಸಿ, ಐಟಿಐ, ಡಿಪ್ಲೊಮಾ ಫೈರ್ ಮತ್ತು ಸೇಪ್ಟಿ ಹಾಗೂ ಹೊಟೇಲ್ ಪದವಿ ಸಹಿತ ಇತರ ಪದವಿ ತೇರ್ಗಡೆಯಾದ ಅಭ್ಯರ್ಥಿಗಳು ಸ್ವ-ವಿವರವುಳ್ಳ ಬಯೋಡೇಟಾದೊಂದಿಗೆ ನೇರ ಸಂದರ್ಶನದಲ್ಲಿ ಹಾಜರಾಗಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story