ಸಾಮಾಜಿಕ ಜಾಲತಾಣದಲ್ಲಿ ನಿಂದನೆ: ಕಮಿಷನರ್ಗೆ ದೂರು ನೀಡಿದ ಪ್ರತಿಭಾ ಕುಳಾಯಿ

ಪ್ರತಿಭಾ ಕುಳಾಯಿ
ಸುರತ್ಕಲ್, ಅ.21: ಟೋಲ್ ಗೇಟ್ ಹೋರಾಟದ ಸಂದರ್ಭದ ಭಾವಚಿತ್ರ, ವೀಡಿಯೊಗಳನ್ನು ಬಳಸಿಕೊಂಡು ನನ್ನ ಘನತೆಗೆ ಕುಂದು ಬರುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ವ್ಯಕ್ತಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸುರತ್ಕಲ್ ಹೋರಾಟ ಸಮಿತಿಯ ಸದಸ್ಯೆ ಹಾಗೂ ಕಾಂಗ್ರೆಸ್ ಕಾರ್ಯಕರ್ತೆ ಪ್ರತಿಭಾ ಕುಳಾಯಿ ಪೊಲೀಸ್ ಕಮಿಷನರ್ ಶಶಿಕುಮಾರ್ ಅವರಿಗೆ ದೂರು ನೀಡಿದ್ದಾರೆ.
ಟೋಲ್ ಗೇಟ್ ಹೋರಾಟದ ಸಂದರ್ಭ ಟಿವಿ, ಪತ್ರಿಕೆ, ಮಾಧ್ಯಮಗಳು ತೆಗೆದಿದ್ದ ಫೋಟೊ ವೀಡಿಯೊಗಳನ್ನು ಬಳಸಿಕೊಂಡು ಕೆಲ ಅಪರಿಚಿತರು ನನ್ನನ್ನು ಅಸಹ್ಯ ರೀತಿಯಲ್ಲಿ ತೃಜೋವಧೆಯಲ್ಲಿ ತೊಡಗಿದ್ದಾರೆ. ಕೆ.ಆರ್. ಶೆಟ್ಟಿ ಎಂಬಾತ ಅ.18ರಂದು ನಡೆಸಿದ ಪ್ರತಿಭಟನೆಯ ವೇಳೆಯ ಫೋಟೊ ಹಂಚಿಕೊಂಡಿದ್ದು, "ಇದಕ್ಕೆ ಒಂದು ಒಳ್ಳೆ ಟೈಟಲ್ ಕೊಡಿ ಫ್ರೆಂಡ್ಸ್" ಎಂದು ಬರೆದು ತೇಜೋವಧೆ ಮಾಡಿದ್ದಾರೆ.
ಅಲ್ಲದೆ, ಶ್ಯಾಮ ಸುದರ್ಶನ ಭಟ್ ಎಂಬಾತ "ಮಲಗಿ ಮಾಡಿ ಒಳ್ಳೆ ಅಬ್ಯಾಸ ಉಂಟು ಮರ್ರೆ" ಎಂದು ನನ್ನ ಭಾವಚಿತ್ರದೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಈ ಕುರಿತು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೆಂದು ಪ್ರತಿಭಾ ಕುಳಾಯಿ ನೀಡಿದ ದೂರಿನಲ್ಲಿ ಆಗ್ರಹಿಸಿದ್ದಾರೆ.