ಉಚ್ಚಿಲ ಉರೂಸ್ ಧ್ವಜಾರೋಹಣ, ಪೋಸ್ಟರ್ ಬಿಡುಗಡೆ

ಉಳ್ಳಾಲ: ಉಚ್ಚಿಲ ಮಸೀದಿಯಲ್ಲಿ ಅಸ್ಸಯ್ಯದ್ ಶರೀಫುಲ್ ಅರಬಿ ವಲಿಯುಲ್ಲಾಹಿ ಅವರ ಹೆಸರಿನಲ್ಲಿ ಜನವರಿಯಲ್ಲಿ ನಡೆಯಲಿರುವ ಉರೂಸ್ ಕಾರ್ಯಕ್ರಮದ ಧ್ವಜಾರೋಹಣ ಹಾಗೂ ಪೋಸ್ಟರ್ ಬಿಡುಗಡೆ ಸಮಾರಂಭ ಉಚ್ಚಿಲ ಮಸೀದಿ ವಠಾರದಲ್ಲಿ ಶುಕ್ರವಾರ ನಡೆಯಿತು.
ಮೌಲಾನಾ ಇಬ್ರಾಹಿಂ ಫೈಝಿ ಉದ್ಯಾವರ ದುಆ ನೆರವೇರಿಸಿದರು.
ಉಚ್ಚಿಲ ಮಸೀದಿ ಹಾಗೂ ಉರೂಸ್ ಕಮಿಟಿ ಅಧ್ಯಕ್ಷ ಇಸ್ಮಾಯಿಲ್ ಹಾಜಿ ಧ್ವಜಾರೋಹಣ ನೆರವೇರಿಸಿದರು. ಉರೂಸ್ ಕಮಿಟಿ ಗೌರವಾಧ್ಯಕ್ಷ ಮಜೀದ್ ಹಾಜಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮಸೀದಿಯ ಮಾಜಿ ಅಧ್ಯಕ್ಷರಾದ ಯು, ಬಿ ಮಹಮ್ಮದ್ ಹಾಜಿ ಮತ್ತು ಅಬ್ಬಾಸ್ ಹಾಜಿ ಪೇರಿಬೈಲ್, ಯು ಅಬ್ದುಲ್ ಸಲಾಂ, ಜಮಾಅತ್ ಉಪಾಧ್ಯಕ್ಷರಾದ ಹಮೀದ್ ಹಾಜಿ, ಎಂ, ಪಿ ಮಹಮ್ಮದ್ ಗುಡ್ಡೆ, ಕಾರ್ಯದರ್ಶಿ ಅಬ್ಬಾಸ್ ಯು. ಎಂ., ಜೊತೆ ಕಾರ್ಯದರ್ಶಿ ಮೊಹಸಿನ್ ರಹ್ಮಾನ್, ಕೋಶಾಧಿಕಾರಿ ಅಬೂಬಕ್ಕರ್ ಹಾಜಿ ಮತ್ತಿತರರು ಉಪಸ್ಥಿತರಿದ್ದರು.
ಉರೂಸ್ ಕಮಿಟಿ ಪ್ರಧಾನ ಕಾರ್ಯದರ್ಶಿ ಸಲಾಂ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಹಸೈನಾರ್ ಹಾಜಿ ವಂದಿಸಿದರು.






