Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಶ್ರೀಗಂಧ ನೀತಿ ಪರಿಷ್ಕರಣೆಗೆ ನಿರ್ಧಾರ

ಶ್ರೀಗಂಧ ನೀತಿ ಪರಿಷ್ಕರಣೆಗೆ ನಿರ್ಧಾರ

ಜಿ.ಮಹಾಂತೇಶ್ಜಿ.ಮಹಾಂತೇಶ್22 Oct 2022 8:51 AM IST
share
ಶ್ರೀಗಂಧ ನೀತಿ ಪರಿಷ್ಕರಣೆಗೆ ನಿರ್ಧಾರ

ಬೆಂಗಳೂರು: ಖಾಸಗಿ ಭೂ ಮಾಲಕರು, ಶ್ರೀಗಂಧ ಬೆಳೆಗಾರ-ಕಂಪೆನಿಗಳ(ಕಾರ್ಪೊರೇಟ್) ಜಂಟಿ ಉದ್ಯಮ ಸೇರಿದಂತೆ ರಾಜ್ಯದಲ್ಲಿ ಖಾಸಗಿ ಶ್ರೀಗಂಧದ ಕೃಷಿ ನೀತಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಶ್ರೀಗಂಧ ನೀತಿಯನ್ನು ಸರಕಾರವು ಪರಿಷ್ಕರಿಸಿದೆ.

ರಾಜ್ಯದಲ್ಲಿ ಶ್ರೀಗಂಧ ಮರದ ಸಂಪನ್ಮೂಲವು ಕಡಿಮೆಯಾಗುತ್ತಿದೆ ಎಂಬ ಕಾರಣವನ್ನು ಮುಂದಿರಿಸಿಕೊಂಡು ನಗರ ಪ್ರದೇಶಗಳ ಹತ್ತಿರದಲ್ಲಿರುವ ಭೂಮಾಲಕರು, ಕೃಷಿ ಕಾರ್ಮಿಕರು ಲಭ್ಯತೆ ಇಲ್ಲದಿರುವುದರಿಂದ ಕಾರ್ಪೊರೇಟ್ ಜಂಟಿ ಉದ್ಯಮದಲ್ಲಿ ಶ್ರೀಗಂಧ ಮರದ ಸಾಗುವಳಿ ಪ್ರದೇಶ ಹೆಚ್ಚಿಸಲು ಮುಂದಾಗಿರುವ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆಯು ಈ ಸಂಬಂಧ  ಸಚಿವ ಸಂಪುಟಕ್ಕೆ ಪ್ರಸ್ತಾವ ಸಲ್ಲಿಸಿದೆ. ಇದರ ಪ್ರತಿಯು ‘the-file.in’ಗೆ ಲಭ್ಯವಾಗಿದೆ.

ಸುಧಾರಿತ ಸಸಿಗಳ ಸ್ಟಾಕ್ ಉತ್ಪಾದನೆ, ಅರಣ್ಯ ಸಸ್ಯಕ್ಷೇತ್ರಗಳಲ್ಲಿ ಶ್ರೀಗಂಧ ಮರದ ಸಸಿಗಳ ಉತ್ಪಾದನೆ ಹೆಚ್ಚಳ, ಖಾಸಗಿ ಸಸ್ಯ ಕ್ಷೇತ್ರಗಳಲ್ಲಿ ಶ್ರೀಗಂಧದ ಸಸಿಗಳ ಉತ್ಪಾದನೆಗೆ ಪ್ರೋತ್ಸಾಹ, ಶ್ರೀಗಂಧ ಮರಗಳ ರಕ್ಷಣೆಯ ಕ್ರಮಗಳ ಸುಧಾರಣೆ, ಅರಣ್ಯ ಪ್ರದೇಶಗಳಲ್ಲಿ ಶ್ರೀಗಂಧದ ನೆಡುತೋಪುಗಳು, ಶ್ರೀಗಂಧ ತೋಟಗಳ ಗುರುತಿಸುವಿಕೆ, ರಕ್ಷಣೆ, ಖಾಸಗಿ ಭೂ ಮಾಲಕರು, ರೈತರಿಗಾಗಿ ಕಾರ್ಯನೀತಿ, ಸುಧಾರಿತ ಕೃಷಿ ಮಾದರಿ, ಶ್ರೀಗಂಧ ಬೆಳೆಗಾರ-ಕಂಪೆನಿಗಳ (ಕಾರ್ಪೊರೇಟ್) ಜಂಟಿ ಉದ್ಯಮ, ಶ್ರೀಗಂಧ ಬೆಳೆಗಾರರ ಸಹಕಾರ ಸಂಘದ ಮೂಲಕ ಕ್ಲಸ್ಟರ್ ಅಭಿವೃದ್ಧಿ, ಖಾಸಗಿ ಶ್ರೀಗಂಧ ಎಸ್ಟೇಟ್‌ಗಳಿಗೆ ನೆರವು ನೀಡಲು ಇಲಾಖೆಯು ಹೊಸ ನೀತಿಯಲ್ಲಿ ಪ್ರಸ್ತಾಪಿಸಿದೆ.

ಅದೇ ರೀತಿ ಶ್ರಿಗಂಧ ಮರದ ಕಟಾವು, ಸಾಗಣೆ, ಮಾರಾಟ, ಮರ ಕಡಿಯುವ ಮತ್ತು ಸಾಗಣೆ ಪ್ರಕ್ರಿಯೆಗಳ ಸರಳೀಕರಣಕ್ಕಾಗಿ ಆನ್ಲೈನ್ ವ್ಯವಸ್ಥೆ, ಶ್ರೀಗಂಧ ಮರದ ವರ್ಗೀಕರಣದ ಸರಳೀಕರಣ, ಶ್ರೀಗಂಧ ಮರವನ್ನು ಪರಿವರ್ತಿಸುವ ವಿಷಯದಲ್ಲಿ ಸಾಮರ್ಥ್ಯ ವರ್ಧನೆ, ಉತ್ತೇಜನ, ಇ-ಮಾರ್ಕೆಟಿಂಗ್ ಮೂಲಕ ಕುಶಲ ಕಲಾವಿದರು ತಯಾರಿಸಿದ ಶ್ರೀಗಂಧ ಕರಕುಶಲ ವಸ್ತುಗಳ ಮಾರಾಟ, ಉದ್ದೇಶಿತ ಸಾಂಸ್ಥಿಕ ಮತ್ತು ಮಾನಿಟರಿಂಗ್ ಇತ್ಯಾದಿಗಳನ್ನೂ ನೂತನ ನೀತಿಯಲ್ಲಿ ಸೇರ್ಪಡೆಗೊಳಿಸಲಾಗಿದೆ.

ಶ್ರೀಗಂಧದ ಕುರಿತ ನೀತಿಯನ್ನು ರಾಜ್ಯದಲ್ಲಿ ಖಾಸಗಿ ಶ್ರೀಗಂಧದ ಕೃಷಿಗೆ ಅನುಕೂಲವಾಗುವಂತೆ ಪರಿಷ್ಕರಿಸಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಶ್ರೀಗಂಧದ ಮರಗಳ ಕಟಾವು, ಸಾಗಣೆ ಮತ್ತು ಮಾರಾಟ ಮುಂತಾದ ಪ್ರಕ್ರಿಯೆಗಳಿಗೆ ಕರ್ನಾಟಕ ಅರಣ್ಯ ನಿಯಮಗಳು 1969ರಲ್ಲಿನ ನಿಬಂಧನೆಗಳನ್ನು ಸರಳೀಕರಣಗೊಳಿಸಿ ಅವಶ್ಯ ತಿದ್ದುಪಡಿಗಳನ್ನು ತರಲು ಈ ಟಿಪ್ಪಣಿಯಲ್ಲಿ  ಪ್ರಸ್ತಾಪಿಸಲಾಗಿದೆ ಎಂದು ಇಲಾಖೆಯು ತಿಳಿಸಿದೆ.

ಟಿಪ್ಪು ಸುಲ್ತಾನ್ ಆಡಳಿತ ಸಮಯದಲ್ಲಿ ಶ್ರೀಗಂಧ ಮರವನ್ನು ರಾಯಲ್ ಟ್ರೀ ಎಂದು ಘೋಷಿಸಲಾಗಿತ್ತು. ಟಿಪ್ಪು ಅವಧಿಯಲ್ಲಿ ಬಜೆಟ್‌ನಲ್ಲಿ ಶ್ರಿಗಂಧವನ್ನು ಆರ್ಥಿಕತೆಯ ಪ್ರಮುಖ ಮೂಲವಾಗಿ ಪರಿಗಣಿಸಲಾಗಿತ್ತು. ವಾಣಿಜ್ಯ ಮಹತ್ವ ಹೊಂದಿರುವ ಶ್ರೀಗಂಧವು 16 ಪ್ರಭೇದಗಳನ್ನು ಒಳಗೊಂಡಿದೆ. ಜಗತ್ತಿನ ಒಟ್ಟು ಶ್ರೀಗಂಧ ಉತ್ಪಾದನೆಯ ಪೈಕಿ ಶೇ.85ರಷ್ಟು ಭಾರತ ದೇಶದಲ್ಲಿ ಉತ್ಪಾದನೆಯಾಗುತ್ತಿದೆ.

ಮಾರುಕಟ್ಟೆ ದರದ ಪ್ರಲೋಭನೆಯಿಂದಾಗಿ ಶ್ರೀಗಂಧ ಕಳ್ಳಸಾಗಣೆಯಿಂದಾಗಿ ಶ್ರೀಗಂಧ ಮರಗಳು ವಿನಾಶದ ಅಂಚಿಗೆ ಬಂದಿವೆ. ಕಳೆದ 25 ವರ್ಷಗಳಿಂದ ಶ್ರೀಗಂಧದ ಉತ್ಪಾದನೆಯು ಪೂರ್ಣ ಪ್ರಮಾಣದಲ್ಲಿ ಕುಂಠಿತವಾಗಿದೆ.

share
ಜಿ.ಮಹಾಂತೇಶ್
ಜಿ.ಮಹಾಂತೇಶ್
Next Story
X