Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಹಸಿವಿನ ಸುಳಿಯಿಂದ ಹೊರಬಂದೀತೇ ಭಾರತ?

ಹಸಿವಿನ ಸುಳಿಯಿಂದ ಹೊರಬಂದೀತೇ ಭಾರತ?

ಜಾಗತಿಕ ಹಸಿವೆ ಸೂಚ್ಯಂಕದಲ್ಲಿ ಮತ್ತೆ ಕುಸಿದ ದೇಶದ ಸ್ಥಿತಿ

ವಿಕಾಸ್ ಪರಶುರಾಮ್ ಮೇಸ್ರಮ್ವಿಕಾಸ್ ಪರಶುರಾಮ್ ಮೇಸ್ರಮ್22 Oct 2022 10:45 AM IST
share
ಹಸಿವಿನ ಸುಳಿಯಿಂದ ಹೊರಬಂದೀತೇ ಭಾರತ?

ಯಾವುದೇ ಸೂಚ್ಯಂಕವು ಶೇ. 100 ನಿಖರವಲ್ಲ ಎನ್ನುವುದೂ ಸತ್ಯ. ಯಾವುದೇ ವೈಜ್ಞಾನಿಕ ವಿಧಾನಗಳನ್ನು ಅನುಸರಿಸಿದರೂ, ತಪ್ಪುಗಳು ಸಂಭವಿಸಲು ಅವಕಾಶಗಳಿರುತ್ತವೆ. ಆದರೆ, ಇಂಥ ಸೂಚ್ಯಂಕಗಳು ಮತ್ತು ಅಧ್ಯಯನಗಳು ನಮಗೊಂದು ಸ್ಪಷ್ಟ ಚಿತ್ರಣವನ್ನು ನೀಡುತ್ತವೆ ಹಾಗೂ ಅವುಗಳ ಆಧಾರದಲ್ಲಿ ನಮ್ಮ ಭವಿಷ್ಯದ ನೀತಿಗಳು ಮತ್ತು ಕಾರ್ಯಕ್ರಮಗಳನ್ನು ಸುಧಾರಿಸಬಹುದಾಗಿದೆ. ಪರಿಸ್ಥಿತಿ ಹೀಗಿರುವಾಗ, ಇಂಥ ಸೂಚ್ಯಂಕಗಳ ಮೇಲೆ ಪ್ರಭಾವ ಬೀರಲು ಯತ್ನಿಸುವುದನ್ನು ನಿಲ್ಲಿಸಿ ಸರಕಾರವು ತನ್ನ ಕಾರ್ಯವಿಧಾನವನ್ನು ಸುಧಾರಿಸಿಕೊಳ್ಳಬೇಕು. ಆಗ ಸಾಮಾನ್ಯ ಜನರ ಬದುಕು ಉತ್ತಮಗೊಳ್ಳಬಹುದು.

ವಿಶ್ವಗುರುವಾಗಲು ಹೊರಟಿರುವ ನಮ್ಮ ದೇಶವು ಈಗ ಮಾತ್ರ ಹಸಿವೆಯಿಂದ ಬಳಲುತ್ತಿದೆ. 2022ರ ಜಾಗತಿಕ ಹಸಿವೆ ಸೂಚ್ಯಂಕದಲ್ಲಿ ಅದರ ಸ್ಥಾನವು ಪಾಕಿಸ್ತಾನ, ಶ್ರೀಲಂಕಾ, ನೇಪಾಳ ಮತ್ತು ಬಾಂಗ್ಲಾದೇಶ ಮುಂತಾದ ನೆರೆದೇಶಗಳಿಗಿಂತಲೂ ಕೆಳಗೆ ಕುಸಿದಿದೆ. 121 ದೇಶಗಳನ್ನು ಒಳಗೊಂಡಿರುವ ಸೂಚ್ಯಂಕದಲ್ಲಿ ಭಾರತವು 107ನೇ ಸ್ಥಾನವನ್ನು ಪಡೆದರೆ, ಪಾಕಿಸ್ತಾನದ ಸ್ಥಾನ 99. ಈ ಪಟ್ಟಿಯಲ್ಲಿ ಶ್ರೀಲಂಕಾವು ದಕ್ಷಿಣ ಏಶ್ಯದಲ್ಲೇ ಅಗ್ರ ಸ್ಥಾನವನ್ನು ಪಡೆದಿದೆ. ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿರುವ ಶ್ರೀಲಂಕಾವು 64ನೇ ಸ್ಥಾನವನ್ನು ಪಡೆದಿದೆ. ಹಸಿವೆ ಸೂಚ್ಯಂಕದಲ್ಲಿ ಅಫ್ಘಾನಿಸ್ತಾನವನ್ನು ಹೊರತುಪಡಿಸಿ ಇತರ ಎಲ್ಲಾ ನೆರೆಯ ದೇಶಗಳು ಭಾರತಕ್ಕಿಂತ ಮೇಲಿವೆ. ಈ ಪಟ್ಟಿಯಲ್ಲಿ ಅಫ್ಘಾನಿಸ್ತಾನವು 109ನೇ ಸ್ಥಾನದಲ್ಲಿದೆ. ಭಾರತದ ನೆರೆಯ ದೇಶ ನೇಪಾಳ 81ನೇ ಸ್ಥಾನದಲ್ಲಿದ್ದರೆ, ಬಾಂಗ್ಲಾದೇಶ 84ನೇ ಸ್ಥಾನವನ್ನು ಪಡೆದಿದೆ. ಅಂದರೆ, ಈ ಎಲ್ಲಾ ದೇಶಗಳು ತಮ್ಮ ದೇಶದ ಜನರ ಹಸಿವೆಯನ್ನು ನಿಭಾಯಿಸುವಲ್ಲಿ ಭಾರತಕ್ಕಿಂತ ಚೆನ್ನಾಗಿ ಕೆಲಸ ಮಾಡಿವೆ.

2021ರ ಜಾಗತಿಕ ಹಸಿವೆ ಸೂಚ್ಯಂಕದಲ್ಲಿ, ಭಾರತವು 116 ದೇಶಗಳ ಪಟ್ಟಿಯಲ್ಲಿ 101ನೇ ಸ್ಥಾನದಲ್ಲಿತ್ತು. ಹಸಿವೆ ಸಮಸ್ಯೆ ಗಂಭೀರವಾಗಿದೆ ಎಂಬುದಾಗಿ ಪರಿಗಣಿಸಲಾದ 31 ದೇಶಗಳ ಪಟ್ಟಿಯಲ್ಲಿ ಭಾರತವೂ ಇತ್ತು. ಕಳೆದ ವರ್ಷದ ಜಾಗತಿಕ ಹಸಿವೆ ಸೂಚ್ಯಂಕ ಪಟ್ಟಿಯಲ್ಲೂ ಪಾಕಿಸ್ತಾನ, ನೇಪಾಳ, ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ ದೇಶಗಳು ಭಾರತಕ್ಕಿಂತ ಮುಂದಿದ್ದವು. ಆಗಲೂ ಭಾರತ ಸರಕಾರವು ಈ ವರದಿಗೆ ಆಕ್ಷೇಪ ವ್ಯಕ್ತಪಡಿಸಿತ್ತು ಹಾಗೂ ಸೂಚ್ಯಂಕದ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿತ್ತು.

ಜಾಗತಿಕ ಹಸಿವೆ ಸೂಚ್ಯಂಕವೆನ್ನುವುದು ಜಾಗತಿಕ, ಪ್ರಾದೇಶಿಕ ಮತ್ತು ರಾಷ್ಟ್ರೀಯ ಮಟ್ಟಗಳಲ್ಲಿ ಹಸಿವೆಯನ್ನು ಅಳೆಯುವ ಮತ್ತು ಅದರ ಮೇಲೆ ನಿಗಾ ಇಡುವ ಸಮಗ್ರ ವಿಧಾನವಾಗಿದೆ. ಜಾಗತಿಕ ಹಸಿವೆ ಸೂಚ್ಯಂಕವನ್ನು ನಾಲ್ಕು ಸೂಚಕಗಳ ವೌಲ್ಯಗಳ ಆಧಾರದಲ್ಲಿ ಲೆಕ್ಕ ಹಾಕಲಾಗುತ್ತದೆ. ಮೊದಲನೆಯದು, ದೇಶವೊಂದರ ಜನರು ಯಾವ ಪ್ರಮಾಣದಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಅಂದರೆ, ದೇಶದ ಒಟ್ಟು ಜನಸಂಖ್ಯೆಯಲ್ಲಿ ಎಷ್ಟು ಮಂದಿ ಅಗತ್ಯವಿರುವುದಕ್ಕಿಂತಲೂ ಕಡಿಮೆ ಆಹಾರವನ್ನು ಸೇವಿಸಿ ಬದುಕುತ್ತಿದ್ದಾರೆ? ಎರಡನೆಯದು, ಮಕ್ಕಳ ಆರೋಗ್ಯ ಸ್ಥಿತಿಗತಿ. ಅಂದರೆ, ಐದು ವರ್ಷಕ್ಕಿಂತ ಕೆಳಗಿನ ಎಷ್ಟು ಮಕ್ಕಳು ತಮ್ಮ ಎತ್ತರಕ್ಕೆ ಅನುಗುಣವಾದ ತೂಕವನ್ನು ಹೊಂದಿಲ್ಲ? ಮೂರನೆಯದು, ಮಕ್ಕಳ ಬೆಳವಣಿಗೆ ಕುಂಠಿತ. ಅಂದರೆ, 5 ವರ್ಷಕ್ಕಿಂತ ಕೆಳಗಿನ ಎಷ್ಟು ಮಕ್ಕಳು ಪ್ರಾಯಕ್ಕೆ ಅನುಗುಣವಾಗಿ ಎತ್ತರವನ್ನು ಹೊಂದಿಲ್ಲ? ನಾಲ್ಕನೆಯದು, ಶಿಶು ಮರಣ. ಅಂದರೆ, 5 ವರ್ಷಕ್ಕಿಂತ ಕೆಳಗಿನ ಎಷ್ಟು ಮಕ್ಕಳು 5 ವರ್ಷ ತುಂಬುವ ಮೊದಲೇ ಮೃತಪಟ್ಟಿದ್ದಾರೆ?

ಸರಳವಾಗಿ ಹೇಳಬೇಕೆಂದರೆ, ಜಾಗತಿಕ ಹಸಿವೆ ಸೂಚ್ಯಂಕವನ್ನು ಅಳೆಯಲು ಆಹಾರದ ಕೊರತೆ, ಗಂಭೀರ ಶಿಶು ಅಪೌಷ್ಟಿಕತೆ, ಬೆಳವಣಿಗೆ ಕುಂಠಿತ ಮತ್ತು ಶಿಶು ಮರಣಕ್ಕೆ ಸಂಬಂಧಿಸಿದ ಅಂಕಿಅಂಶಗಳನ್ನು ಬಳಸಲಾಗುತ್ತದೆ. ಈ ನಾಲ್ಕು ಮಾನದಂಡಗಳು 100 ಅಂಕಗಳನ್ನು ಹೊಂದಿವೆ. ಇದನ್ನು ಆಧರಿಸಿ ದೇಶವೊಂದರ ಹಸಿವೆಯ ಮಟ್ಟವನ್ನು ನಿರ್ಧರಿಸಲಾಗುತ್ತದೆ. ಅಂದರೆ, ಈ ನಾಲ್ಕು ಮಾನದಂಡಗಳಲ್ಲಿ ದೇಶವೊಂದು ಸೊನ್ನೆ ಅಂಕವನ್ನು ಪಡೆದರೆ ಆ ದೇಶವು ಅತ್ಯುತ್ತಮ ಸ್ಥಿತಿಯಲ್ಲಿದೆ ಎಂದರ್ಥ. ಒಂದು ವೇಳೆ, ದೇಶವು 100 ಅಂಕಗಳನ್ನು ಪಡೆದರೆ ಅದರ ಪರಿಸ್ಥಿತಿ ಭಯಾನಕವಾಗಿದೆ ಎಂದರ್ಥ. ಇವುಗಳಲ್ಲಿ ಭಾರತದ ಅಂಕ 29.1. ಇದು ಕಳವಳಕ್ಕೆ ಕಾರಣವಾಗುತ್ತದೆ ಹಾಗೂ 'ಗಂಭೀರ' ವಿಭಾಗದಲ್ಲಿ ಬರುತ್ತದೆ.

 ಭಾರತದ ಮಕ್ಕಳಲ್ಲಿ ಅಪೌಷ್ಟಿಕತೆ ಗಂಭೀರ ಪ್ರಮಾಣದಲ್ಲಿದೆ. 2014ರಲ್ಲಿ ಅಪೌಷ್ಟಿಕತೆಯ ಪ್ರಮಾಣ ಶೇ. 15.1 ಇದ್ದರೆ, ಈ ಬಾರಿ ಅದು ಶೇ. 19.3 ಆಗಿದೆ. ಅಂದರೆ, ಭಾರತ ಇಷ್ಟರಮಟ್ಟಿಗೆ ಹಿಂದಕ್ಕೆ ಚಲಿಸಿದೆ. ಇನ್ನೊಂದೆಡೆ, ಒಟ್ಟಾರೆ ಅಪೌಷ್ಟಿಕತೆಯ ದರವನ್ನು ಗಮನಿಸಿದರೆ, ಅದು ಕೂಡ ಗಣನೀಯವಾಗಿ ಏರಿದೆ. ಇದು ಭಾರತೀಯ ಜನರು ಎಷ್ಟರ ಮಟ್ಟಿಗೆ ಆಹಾರದ ಕೊರತೆಯನ್ನು ಎದುರಿಸುತ್ತಿದ್ದಾರೆ ಎನ್ನುವುದನ್ನು ತೋರಿಸುತ್ತಿದೆ.

ಜಾಗತಿಕ ಹಸಿವೆ ಸೂಚ್ಯಂಕದ ಪ್ರಕಾರ, ಭಾರತದ ಅಪೌಷ್ಟಿಕತೆಯು 2018 ಮತ್ತು 2020ರ ನಡುವಿನ ಅವಧಿಯಲ್ಲಿ ಶೇ. 14.6 ಆಗಿತ್ತು. 2019 ಮತ್ತು 2021ರ ನಡುವಿನ ಅವಧಿಯಲ್ಲಿ ಅದು ಶೇ.16.3ಕ್ಕೆ ಏರಿದೆ.

ಸೂಚ್ಯಂಕದ ಪ್ರಕಾರ, ಜಾಗತಿಕ ಮಟ್ಟದಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಒಟ್ಟು 82.8 ಕೋಟಿ ಜನರ ಪೈಕಿ 22.4 ಕೋಟಿ ಮಂದಿ ಭಾರತದಲ್ಲೇ ಇದ್ದಾರೆ. ಅದೇ ವೇಳೆ, ಈ ಸೂಚ್ಯಂಕದಲ್ಲಿ ಭಾರತದ ಪಾಲಿಗೆ ಒಂದು ಶುಭ ಸುದ್ದಿಯೂ ಇದೆ. ಈ ಸೂಚ್ಯಂಕವನ್ನು ನಿರ್ಧರಿಸುವ ಎರಡು ಮಾನದಂಡಗಳಲ್ಲಿ ಭಾರತ ಖಂಡಿತವಾಗಿಯೂ ಸುಧಾರಿಸಿದೆ.

ಇತರ ಮಾನದಂಡಗಳ ಪೈಕಿ, ಶಿಶು ಬೆಳವಣಿಗೆ ಕುಂಠಿತ ವಿಭಾಗದಲ್ಲಿ 2022ರಲ್ಲಿ ಭಾರತದ ಅಂಕ ಶೇ.35.5. 2014ರಲ್ಲಿ ಅದು ಶೇ.38.7 ಆಗಿತ್ತು. ಜೊತೆಗೆ, ಶಿಶು ಮರಣ ದರವೂ ಶೇ. 4.6ದಿಂದ ಶೇ.3.3ಕ್ಕೆ ಇಳಿದಿದೆ.

ಜಾಗತಿಕ ಹಸಿವೆ ಸೂಚ್ಯಂಕ ಪಟ್ಟಿಯಲ್ಲಿ, 5ಕ್ಕಿಂತ ಕಡಿಮೆ ಅಂಕಗಳನ್ನು ಪಡೆದಿರುವ 17 ದೇಶಗಳಿವೆ. ಚೀನಾ, ಟರ್ಕಿ, ಕುವೈತ್, ಬೆಲಾರುಸ್, ಉರುಗ್ವೆ ಮತ್ತು ಚಿಲಿ- ಅವುಗಳ ಪೈಕಿ ಕೆಲವು. ಮುಸ್ಲಿಮ್ ಬಹುಸಂಖ್ಯಾತ ದೇಶಗಳ ಪೈಕಿ, ಯುಎಇ 18ನೇ ಸ್ಥಾನದಲ್ಲಿದ್ದರೆ, ಉಝ್ಬೆಕಿಸ್ತಾನ 21ನೇ, ಕಝಖ್‌ಸ್ತಾನ 24ನೇ, ಟ್ಯುನೀಶಿಯ 26ನೇ, ಇರಾನ್ 29ನೇ ಮತ್ತು ಸೌದಿ ಅರೇಬಿಯ 30ನೇ ಸ್ಥಾನಗಳಲ್ಲಿವೆ.

ಮೋದಿ ಸರಕಾರದ ಆಳ್ವಿಕೆಯಲ್ಲಿ, ಜಾಗತಿಕ ಹಸಿವೆ ಸೂಚ್ಯಂಕದಲ್ಲಿ ಭಾರತದ ಸ್ಥಾನ ನಿರಂತರವಾಗಿ ಕುಸಿಯುತ್ತಿದೆ. 2014ರಲ್ಲಿ ಮೋದಿ ಸರಕಾರ ಅಧಿಕಾರಕ್ಕೆ ಬಂದಾಗ ಸೂಚ್ಯಂಕ ಪಟ್ಟಿಯಲ್ಲಿ ಭಾರತದ ಸ್ಥಾನ 55 ಆಗಿತ್ತು. ಆದರೆ ಈಗ ಅದು ಪ್ರತೀ ವರ್ಷ ಕುಸಿಯುತ್ತಾ ಹೋಗುತ್ತಿದೆ. ಆದರೆ, ಈ ನಡುವೆ ನಮ್ಮನ್ನು ಆಳುವವರು 5 ಟ್ರಿಲಿಯ ಡಾಲರ್‌ನ ಭ್ರಮೆಯನ್ನು ಜನರಲ್ಲಿ ತುಂಬಿಸುತ್ತಿದ್ದಾರೆ.

ಇತ್ತೀಚೆಗೆ, ಭಾರತವು ಬ್ರಿಟನನ್ನು ಹಿಂದಿಕ್ಕಿ, ಒಟ್ಟು ದೇಶಿ ಉತ್ಪನ್ನ (ಜಿಡಿಪಿ)ದ ಆಧಾರದಲ್ಲಿ ಜಗತ್ತಿನ ಐದನೇ ಅತಿ ದೊಡ್ಡ ಆರ್ಥಿಕತೆ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿತು. ಅಂತರ್‌ರಾಷ್ಟ್ರೀಯ ಹಣಕಾಸು ನಿಧಿ (ಐಎಮ್‌ಎಫ್)ಯ ಇತ್ತೀಚಿನ ವರದಿಯ ಪ್ರಕಾರ, 2022ರಲ್ಲಿ ಭಾರತದ ಆರ್ಥಿಕತೆಯು ಶೇ. 6.8 ದರದಲ್ಲಿ ಬೆಳೆಯಲಿದೆ. ಆದರೆ, 2023ರಲ್ಲಿ ಬೆಳವಣಿಗೆ ದರವು ಶೇ. 6.1ಕ್ಕೆ ಕುಸಿಯಲಿದೆ ಎಂಬ ಎಚ್ಚರಿಕೆಯನ್ನೂ ಅದು ನೀಡಿದೆ.

ಅದೇ ವೇಳೆ, ಜಗತ್ತಿನ ಎಲ್ಲಾ ಪ್ರಮುಖ ಆರ್ಥಿಕತೆಗಳ ಪೈಕಿ ಭಾರತವು ಬೃಹತ್ ಆರ್ಥಿಕತೆಯಾಗಿದೆ ಎಂಬುದಾಗಿಯೂ ವರದಿ ತಿಳಿಸಿದೆ. ಜಗತ್ತಿನ ಎಲ್ಲಾ ಮಹತ್ವದ ಆರ್ಥಿಕತೆಗಳ ಪೈಕಿ ಭಾರತದ ಆರ್ಥಿಕತೆಯು ವೇಗವಾಗಿ ಬೆಳೆಯಲಿದೆ ಎಂದಿದೆ.

ತನ್ನದು ಐದು ಟ್ರಿಲಿಯ ಡಾಲರ್ ಆರ್ಥಿಕತೆ ಎಂಬುದಾಗಿ ಸರಕಾರವು ಈಗಾಗಲೇ ಹೇಳಿದೆ. ಹಾಗಾಗಿ, ಹಲವು ಸಮಯದಿಂದ ತನ್ನ ವೈಫಲ್ಯಗಳನ್ನು ತೋರಿಸುವ ಪ್ರತಿಯೊಂದು ಅಧ್ಯಯನವನ್ನು ಸರಕಾರ ತಿರಸ್ಕರಿಸುತ್ತಾ ಬಂದಿದೆ. ಅವುಗಳು ದೇಶದ ಹೆಸರನ್ನು ಕೆಡಿಸುವ ಉದ್ದೇಶದ ಅಂತರ್‌ರಾಷ್ಟ್ರೀಯ ಪಿತೂರಿಗಳು ಎಂಬುದಾಗಿ ಬಣ್ಣಿಸುತ್ತಾ ಬಂದಿದೆ. ಭಿನ್ನಾಭಿಪ್ರಾಯವನ್ನು ಸಹಿಸದ ಕಾಯಿಲೆಯು ಯಾವ ಪ್ರಮಾಣಕ್ಕೆ ಬೆಳೆದಿದೆಯೆಂದರೆ, ನಿಷ್ಪಕ್ಷಪಾತ ಅಂತರ್‌ರಾಷ್ಟ್ರೀಯ ಸಂಘಟನೆಗಳು ಮತ್ತು ಸಂಸ್ಥೆಗಳನ್ನೂ ಸಂಶಯಿಸಲು ಆರಂಭಿಸಿದೆ.

ಆದಾಗ್ಯೂ, ಯಾವುದೇ ಸೂಚ್ಯಂಕವು ಶೇ. 100 ನಿಖರವಲ್ಲ ಎನ್ನುವುದೂ ಸತ್ಯ. ಯಾವುದೇ ವೈಜ್ಞಾನಿಕ ವಿಧಾನಗಳನ್ನು ಅನುಸರಿಸಿದರೂ, ತಪ್ಪುಗಳು ಸಂಭವಿಸಲು ಅವಕಾಶಗಳಿರುತ್ತವೆ. ಆದರೆ, ಇಂಥ ಸೂಚ್ಯಂಕಗಳು ಮತ್ತು ಅಧ್ಯಯನಗಳು ನಮಗೊಂದು ಸ್ಪಷ್ಟ ಚಿತ್ರಣವನ್ನು ನೀಡುತ್ತವೆ ಹಾಗೂ ಅವುಗಳ ಆಧಾರದಲ್ಲಿ ನಮ್ಮ ಭವಿಷ್ಯದ ನೀತಿಗಳು ಮತ್ತು ಕಾರ್ಯಕ್ರಮಗಳನ್ನು ಸುಧಾರಿಸಬಹುದಾಗಿದೆ. ಪರಿಸ್ಥಿತಿ ಹೀಗಿರುವಾಗ, ಇಂಥ ಸೂಚ್ಯಂಕಗಳ ಮೇಲೆ ಪ್ರಭಾವ ಬೀರಲು ಯತ್ನಿಸುವುದನ್ನು ನಿಲ್ಲಿಸಿ ಸರಕಾರವು ತನ್ನ ಕಾರ್ಯವಿಧಾನವನ್ನು ಸುಧಾರಿಸಿಕೊಳ್ಳಬೇಕು. ಆಗ ಸಾಮಾನ್ಯ ಜನರ ಬದುಕು ಉತ್ತಮಗೊಳ್ಳಬಹುದು.

ಕೃಪೆ: countercurrents.org

share
ವಿಕಾಸ್ ಪರಶುರಾಮ್ ಮೇಸ್ರಮ್
ವಿಕಾಸ್ ಪರಶುರಾಮ್ ಮೇಸ್ರಮ್
Next Story
X