ಅರುಣಾಚಲ ಪ್ರದೇಶ: ಹೆಲಿಕಾಪ್ಟರ್ನಲ್ಲಿದ್ದ ಎಲ್ಲಾ ಸೇನಾ ಸಿಬ್ಬಂದಿಗಳು ಮೃತ್ಯು
ಅಪಘಾತದ ತನಿಖೆಗಾಗಿ ತನಿಖಾ ನ್ಯಾಯಾಲಯ ಸ್ಥಾಪನೆ

Image Source : PTI
ಗುವಾಹಟಿ: ಐದನೇ ಶವ ಶನಿವಾರ ಪತ್ತೆಯಾದ ನಂತರ ಅರುಣಾಚಲ ಪ್ರದೇಶದ ಅಪ್ಪರ್ ಸಿಯಾಂಗ್ ಜಿಲ್ಲೆಯಲ್ಲಿ ಶುಕ್ರವಾರ ಪತನಗೊಂಡ ಹೆಲಿಕಾಪ್ಟರ್ನಲ್ಲಿದ್ದ ಎಲ್ಲಾ ಸೇನಾ ಸಿಬ್ಬಂದಿಗಳು ಸಾವನ್ನಪ್ಪಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.
ಹೆಲಿಕಾಪ್ಟರ್ ಪತನಕ್ಕೂ ಮೊದಲು ಏರ್ ಟ್ರಾಫಿಕ್ ಕಂಟ್ರೋಲ್ (ATC) 'ಮೇ ಡೇ' ಕರೆಯನ್ನು ಸ್ವೀಕರಿಸಿದೆ. ಈ ಕರೆಯು ತಾಂತ್ರಿಕ ಅಥವಾ ಯಾಂತ್ರಿಕ ವೈಫಲ್ಯವನ್ನು ಸೂಚಿಸುತ್ತದೆ. ಹವಾಮಾನವು ಸ್ಪಷ್ಟವಾಗಿತ್ತು ಹಾಗೂ ಪೈಲಟ್ಗಳಿಗೆ ಅನುಭವಿಯಾಗಿದ್ದರು ಎಂದು ಸೇನೆ ಹೇಳಿದೆ.
ಆದಾಗ್ಯೂ, ಕಡಿದಾದ ಇಳಿಜಾರುಗಳು ಮತ್ತು ದಟ್ಟ ಕಾಡಿನಿಂದಾಗಿ ಈ ಭೂಪ್ರದೇಶವು "ಅತ್ಯಂತ ಸವಾಲಾಗಿದೆ" ಎಂದು ಸೇನೆಯು ಹೇಳಿಕೆಯಲ್ಲಿ ತಿಳಿಸಿದೆ.
ಅಪಘಾತದ ತನಿಖೆಗಾಗಿ ತನಿಖಾ ನ್ಯಾಯಾಲಯವನ್ನು ಸ್ಥಾಪಿಸಲಾಗಿದೆ.
ಭಾರತೀಯ ಸೇನೆಯ ಏವಿಯೇಷನ್ ಅಡ್ವಾನ್ಸ್ ಲೈಟ್ ಹೆಲಿಕಾಪ್ಟರ್ (ವೆಪನ್ ಸಿಸ್ಟಮ್ಸ್ ಇಂಟಿಗ್ರೇಟೆಡ್) - ಶುಕ್ರವಾರ ಬೆಳಗ್ಗೆ ಮಿಗ್ಗಿಂಗ್ ಗ್ರಾಮದ ಬಳಿ ಅಪಘಾತಕ್ಕೀಡಾಗಿತ್ತು. ಶುಕ್ರವಾರ ನಾಲ್ಕು ಮೃತದೇಹಗಳು ಪತ್ತೆಯಾಗಿದ್ದು, ಐದನೆಯ ಮೃತದೇಹವನ್ನು ಹೊರತೆಗೆಯಲು ಪ್ರಯತ್ನಿಸುತ್ತಿರುವುದಾಗಿ ಸೇನೆ ತಿಳಿಸಿತ್ತು.







