ಕಟ್ಟಡದ 4ನೇ ಮಹಡಿಯಿಂದ ಜಿಗಿದು ಗಂಭೀರವಾಗಿ ಗಾಯಗೊಂಡಿದ್ದ ದಂತ ವಿಜ್ಞಾನ ವಿದ್ಯಾರ್ಥಿನಿ ಮೃತ್ಯು
ವಿದ್ಯಾರ್ಥಿನಿಗೆ ಕಪಾಲಮೋಕ್ಷ ಮಾಡಿದ್ದ ಆರೋಪಿಯ ಬಂಧನ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಮೀರತ್ ನ ಖಾಸಗಿ ವೈದ್ಯಕೀಯ ಕಾಲೇಜಿನ ಎರಡನೇ ವರ್ಷದ ದಂತ ವಿಜ್ಞಾನ ವಿದ್ಯಾರ್ಥಿನಿ ಕಟ್ಟಡದ ನಾಲ್ಕನೇ ಮಹಡಿಯಿಂದ ಜಿಗಿದು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಎರಡು ದಿನಗಳ ಬಳಿಕ ಶುಕ್ರವಾರ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿದ್ಯಾರ್ಥಿನಿಯ ತಂದೆ ನೀಡಿದ ಪೊಲೀಸ್ ದೂರಿನ ಆಧಾರದ ಮೇಲೆ ಅದೇ ಬ್ಯಾಚ್ನ ವಿದ್ಯಾರ್ಥಿ ಸಿದ್ಧಾಂತ್ ಕುಮಾರ್ ಪನ್ವಾರ್ ನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಸ್ಥಳೀಯ ಜಾನಿ ಪೊಲೀಸ್ ಠಾಣೆಯ ಎಸ್ಎಚ್ಒ ರಾಜೇಶ್ ಕುಮಾರ್ ಕಾಂಬೋಜ್ ತಿಳಿಸಿದ್ದಾರೆ.
ವನಿಯಾ ಅಸಾದ್ (22 ವರ್ಷ) ಎಂಬ ವಿದ್ಯಾರ್ಥಿನಿ ಶುಕ್ರವಾರ ಮಧ್ಯಾಹ್ನ ಸುಭಾರ್ತಿ ವೈದ್ಯಕೀಯ ಕಾಲೇಜಿನ ಗ್ರಂಥಾಲಯ ಕಟ್ಟಡದ ನಾಲ್ಕನೇ ಮಹಡಿಯಿಂದ ಜಿಗಿದಿದ್ದಾರೆ ಮತ್ತು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದರು. ಅಲ್ಲಿ ಅವರು ಶುಕ್ರವಾರ ಮಧ್ಯಾಹ್ನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಕಾಂಬೋಜ್ ತಿಳಿಸಿದ್ದಾರೆ.
ಆರೋಪಿಯು ಸಾರ್ವಜನಿಕವಾಗಿ ಅಸಾದ್ಗೆ ಕಪಾಳಮೋಕ್ಷ ಮಾಡಿರುವುದು ತನಿಖೆಯ ವೇಳೆ ಪೊಲೀಸರಿಗೆ ತಿಳಿದು ಬಂದಿದ್ದು, ಇದರಿಂದ ಆಕೆ ಅಸಮಾಧಾನಗೊಂಡಿದ್ದಳು ಎಂದು ಎಸ್ಎಚ್ಒ ತಿಳಿಸಿದ್ದಾರೆ.







