ವಿರಾಜಪೇಟೆ: ಬೊಳ್ಳುಮಾಡು ಗ್ರಾಮದಲ್ಲಿ ಪುರಾತನ ದೇವಾಲಯ ಪತ್ತೆ

ಮಡಿಕೇರಿ ಅ.22 : ವಿರಾಜಪೇಟೆ ತಾಲೂಕಿನ ಬೊಳ್ಳುಮಾಡು ಗ್ರಾಮದಲ್ಲಿ ಮಣ್ಣು ಮತ್ತು ಕಾಡಿನಿಂದ ಮುಚ್ಚಲ್ಪಟ್ಟಿದ್ದ ಅತ್ಯಂತ ಪುರಾತನವಾದ ದೇವಾಲಯವೊಂದು ಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.
ಕಾಡು ಮುಚ್ಚಿದ್ದ ಪ್ರದೇಶವನ್ನು ಸ್ವಚ್ಛಗೊಳಿಸುವ ಸಂದರ್ಭ ಪುರಾತನ ದೇಗುಲದ ಕುರುಹುಗಳು ಪತ್ತೆಯಾಗಿದೆ. ಗ್ರಾಮಸ್ಥರು ಅದನ್ನು ಪರಿಶೀಲಿಸಿ, ಮತ್ತಷ್ಟು ಮಾಹಿತಿಗಾಗಿ ಶೋಧಿಸಿದಾಗ ಶಿವಲಿಂಗ, ಭಗ್ನವಾದ ದೇಗುಲದ ಭಾಗಗಳು, ಪುರಾತನ ಆಯುಧ, ಸುಂದರ ಶಿಲ್ಪಗಳು ದೊರಕಿವೆ.
ಪ್ರಾಚ್ಯ ವಸ್ತು ಇಲಾಖಾ ಅಧಿಕಾರಿ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪುರಾತನ ದೇವಸ್ಥಾನದ ಬಗ್ಗೆ ಸಂಶೋಧನೆಗಳು ನಡೆದಲ್ಲಿ ಕೊಡಗಿನ ಚರಿತ್ರೆಯ ಮತ್ತಷ್ಟು ಮಾಹಿತಿಗಳು ದೊರಕುವ ಸಾಧ್ಯತೆಗಳಿದೆ ಎಂದು ಗ್ರಾಮಸ್ಥರು ಅಭಿಪ್ರಾಯಪಟ್ಟಿದ್ದಾರೆ.











