ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಮಾಡುವುದು ಸಮಾಜದ ಕರ್ತವ್ಯ : ಡಾ. ಎನ್ ವಿನಯ ಹೆಗ್ಡೆ
ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಸಮಾಜ ಕಲ್ಯಾಣ ಕಾರ್ಯಕ್ರಮ
ಮಂಗಳೂರು, ಅ.22; ಸಮಾಜದಲ್ಲಿ ಆರ್ಥಿಕ ವಾಗಿ ಹಿಂದುಳಿದವರಿಗೆ ಸಹಾಯ ಮಾಡುವುದು ಸಮಾಜದ ಕರ್ತವ್ಯ ಎಂದು ದೇರಳಕಟ್ಟೆಯ ನಿಟ್ಟೆ ಎಜುಕೇಷನ್ ಟ್ರಸ್ಟ್ ನ ಅಧ್ಯಕ್ಷ ಡಾ ಎನ್. ವಿನಯ್ ಹೆಗ್ಡೆ ಹೇಳಿದ್ದಾರೆ.
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಇಂದು ಮಂಗಳೂರಿನ ಸಿ.ವಿ.ನಾಯಕ್ ಹಾಲ್‌ನಲ್ಲಿ ಆಯೋಜಿಸಲಾದ ಸಮಾಜ ಕಲ್ಯಾಾಣ ಸಹಾಯಧನ ವಿತರಣೆ, ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಅಭಿನಂದನಾ ಕಾರ್ಯಕ್ರಮ ಉದ್ಘಾಾಟಿಸಿ ಅವರು ಮಾತನಾಡಿದರು.
ಜಾಗತಿಕ ಬಂಟರ ಸಂಘಗಳ ಒಕ್ಕೂಟ ನಡೆಸುತ್ತಿರುವ ಸಾಮಾಜಿಕ ಕಾರ್ಯ ದೇವರು ಮೆಚ್ಚುವಂತಹ ಕೆಲಸ. ಒಕ್ಕೂಟದ ಕೆಲಸಗಳಿಗೆ ಪೂರ್ಣ ಸಹಕಾರ ನೀಡಲಾಗುವುದು ಎಂದು ವಿನಯ್ ಹೆಗ್ಡೆ ಹೇಳಿದರು.
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಾಗತಿಕ ಬಂಟ ಪ್ರತಿಷ್ಠಾನದ ಸ್ಥಾಾಪಕಾಧ್ಯಕ್ಷ ಡಾ ಬಿ.ಆರ್.ಶೆಟ್ಟಿ, ಎ.ಜೆ.ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ ಎ.ಜೆ.ಶೆಟ್ಟಿ, ಶ್ರೀದೇವಿ ವಿದ್ಯಾಾಸಂಸ್ಥೆಗಳ ಅಧ್ಯಕ್ಷ ಎ.ಸದಾನಂದ ಶೆಟ್ಟಿ, ಕರಾವಳಿ ಅಭಿವೃದ್ಧಿ ಪ್ರಾಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ತೇಜಸ್ವಿನಿ ಆಸ್ಪತ್ರೆಯ ಅಧ್ಯಕ್ಷ ಡಾ ಎಂ.ಶಾಂತಾರಾಮ ಶೆಟ್ಟಿ, ರೆಡ್‌ಕ್ರಾಸ್ ಚೇರ್‌ಮೆನ್ ಸಿಎ ಶಾಂತಾರಾಮ ಶೆಟ್ಟಿ, ಪುತ್ತೂರಿನ ರೈ ಎಸ್ಟೇಟ್ ಆ್ಯಂಡ್ ಡೆವಲಪರ್‌ಸ್‌ನ ಸಿಎಂಡಿ ಅಶೋಕ್ ರೈ, ಯುವ ಮುಖಂಡ ಮಿಥುನ್ ರೈ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಗೌರವ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ ಪ್ರಾಾಸ್ತಾಾವಿಕವಾಗಿ ಮಾತನಾಡಿ ವರದಿ ಮಂಡಿಸಿದರು. ಒಕ್ಕೂಟವು ಕಳೆದ 3 ವರ್ಷಗಳಲ್ಲಿ ಸುಮಾರು 15 ಕೋ.ರೂ. ಆರ್ಥಿಕ ಸಹಾಯ ನೀಡಿದೆ ಎಂದರು.
ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಕೋಶಾಧಿಕಾರಿ ಉಳ್ತೂರು ಮೋಹನದಾಸ ಶೆಟ್ಟಿ, ಜತೆ ಕಾರ್ಯದರ್ಶಿ ಪ್ರವೀಣ ಭೋಜ ಶೆಟ್ಟಿ ಉಪಸ್ಥಿತರಿದ್ದರು. ನಿತೇಶ್ ಶೆಟ್ಟಿ ಮತ್ತು ಡಾ ಪ್ರಿಯಾ ಹರೀಶ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
50.67 ಲ.ರೂ.ವಿತರಣೆ
ವೈದ್ಯಕೀಯ ವೆಚ್ಚಕ್ಕಾಗಿ 78 ಮಂದಿಗೆ 10.02 ಲ..ರೂ, 19 ಮಂದಿಗೆ ವಿವಾಹಕ್ಕೆ 3.05 ಲ.ರೂ., ಮನೆ ನಿರ್ಮಾಣಕ್ಕೆ 43 ಮಂದಿಗೆ 22 ಲ.ರೂ, 362 ವಿದ್ಯಾಾರ್ಥಿಗಳಿಗೆ 16 ಲ.ರೂ. ವಿದ್ಯಾಾರ್ಥಿವೇತನ, 27 ವಿದ್ಯಾಾರ್ಥಿಗಳಿಗೆ ಪ್ರತಿಭಾ ಪುರಸ್ಕಾಾರ, ಶೇ. 97 ಕ್ಕೂ ಮಿಕ್ಕಿ ಅಂಕ ಗಳಿಸಿದ 27 ವಿದ್ಯಾರ್ಥಿಗಳಿಗೆ ಗೌರವ ಧನ ನೀಡಲಾಯಿತು. ಇತರ ಸಮುದಾಯದ 15 ಮಂದಿಗೆ 3.60 ಲ.ರೂ. ಸೇರಿದಂತೆ ಒಟ್ಟು 50.67 ಲ.ರೂ. ಆರ್ಥಿಕ ನೆರವು ವಿತರಿಸಲಾಯಿತು.
ಸಾಧಕರಿಗೆ ಸಮ್ಮಾನ
ಕಿವುಡರ ಕ್ರಿಕೆಟ್‌ನ ರಾಜ್ಯ ತಂಡದ ನಾಯಕ ಪೃಥ್ವಿರಾಜ್ ಶೆಟ್ಟಿ, ಮುಖ್ಯಮಂತ್ರಿ ಪ್ರಶಸ್ತಿ ವಿಜೇತ ವಾಣಿಜ್ಯ ತೆರಿಗೆ ಅಧಿಕಾರಿ ಪ್ರತಾಪ ಚಂದ್ರ ಶೆಟ್ಟಿ, ಪಿಎಚ್‌ಡಿ ಪದವಿ ಪಡೆದ ಪೊಲೀಸ್ ಹೆಡ್‌ಕಾನ್‌ಸ್ಟೆಬಲ್ ಸಂತೋಷ್ ಶೆಟ್ಟಿ, ಕ್ರೀಡಾಪಟುಗಳಾದ ಅದ್ವಿತ್ ಡಿ.ಶೆಟ್ಟಿ ಬಜಾಲ್, ತಸ್ಮಯ್ ಎಂ. ಶೆಟ್ಟಿ ಕೊಡಿಯಾಲಬೈಲ್, ಸ್ವಾತಿ ಎಂ.ಶೆಟ್ಟಿ ವಳಕಾಡು ಮತ್ತು ಸ್ವಾಾತಿ ಶೆಟ್ಟಿ ಅಜೆಕಾರು ಅವರನ್ನು ಸಮ್ಮಾನಿಸಲಾಯಿತು.