ಮಾಣಿಕೊಳಲು ಮಸೀದಿ ಅಧ್ಯಕ್ಷರಾಗಿ ಇಬ್ರಾಹಿಂ

ಕುಂದಾಪುರ, ಅ.22: ಮಾಣಿಕೊಳಲು ಮಸೀದಿಯ 2022-25ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಯು ಶುಕ್ರವಾರ ಮಸೀದಿಯಲ್ಲಿ ನಡೆಯಿತು.
ಉಡುಪಿ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಅಬ್ದುಲ್ ಮುತ್ತಲಿ ನೂತನ ಪದಾಧಿಕಾರಿಗಳ ಪದಗ್ರಹಣ ನೆರವೇರಿಸಿ ಶುಭ ಹಾರೈಸಿದರು. ನೂತನ ಅಧ್ಯಕ್ಷ ರಾಗಿ ಇಬ್ರಾಹಿಂ ಮಾಣಿಕೊಳಲು, ಉಪಾಧ್ಯಕ್ಷರಾಗಿ ಸುಲೇಮಾನ್, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್, ಕೋಶಾಧಿಕಾರಿಯಾಗಿ ಮುನೀರ್, ಸದಸ್ಯ ರಾಗಿ ನೈನಾರ ಸಾಹೇಬ್ ರಶೀದ್, ಮಸೂದ್, ಅಶ್ರಫ್, ಅಯ್ಯುಬ್, ಅಮೀರ್ ಬಾಷ, ಖಾದರ್ ಗೋಪಾಡಿ ಆಯ್ಕೆಯಾದರು.
ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷರನ್ನು ಈ ಸಂದರ್ಭದಲ್ಲಿ ಸನ್ಮಾನಿಸ ಲಾಯಿತು. ಜಿಲ್ಲಾ ವಕ್ಫ್ ಅಧಿಕಾರಿ ಅಬೂಬಕ್ಕರ್ ಮತ್ತು ಖತೀಬ್ ಜುನೈದ್ ಅಹಸ್ನ, ಸಮಿತಿಯ ಸದಸ್ಯರಾದ ಅಬೂಬಕ್ಕರ್, ಆದಂ, ಆಸಿಫ್ ಕಟಪಾಡಿ ಉಪಸ್ಥಿತರಿದ್ದರು.
Next Story





