ಗಾಂಜಾ ಸೇವನೆ ಪ್ರಕರಣ : ನಾಲ್ವರು ವಶಕ್ಕೆ

ಕುಂದಾಪುರ, ಅ.22: ಗಾಂಜಾ ಸೇವನೆಗೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಕುಂದಾಪುರ ಗ್ರಾಮಾಂತರ ಪೊಲೀಸರು ಅ.21ರಂದು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಸ್ರೂರು ಬಸ್ ನಿಲ್ದಾಣದ ಬಳಿ ಆಕಾಶ್ (23), ಬಸ್ರೂರು ಶಾರದಾ ಕಾಲೇಜಿನ ಬಳಿ ಗೌತಮ ಬುದ್ಧ (26), ಕಟ್ಬೆಲ್ತೂರು ಗ್ರಾಮದ ರಿಕ್ಷಾ ನಿಲ್ದಾಣದ ಬಳಿ ಪ್ರವೀಣ್ (26), ಕಾವ್ರಾಡಿ ಗ್ರಾಮದ ದೂಪದಕಟ್ಟೆ ಬಳಿ ಎಂ.ಜಿ ನಿದೀಶ್ (20) ಎಂಬವರನ್ನು ವಶಕ್ಕೆ ಪಡೆದು ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಲಾಗಿದ್ದು, ವರದಿಯಲ್ಲಿ ಆರೋಪಿಗಳು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
Next Story





