ಅ.24ರಂದು ಮಂಗಳೂರಿನಲ್ಲಿ ಚೋಯ್ಸ್ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ನ 6ನೇ ಮಳಿಗೆ ಶುಭಾರಂಭ

ಮಂಗಳೂರು, ಅ.22: ಚೋಯ್ಸ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಸಂಸ್ಥೆಯ 6ನೇ ಆಭರಣ ಮಳಿಗೆ ನಗರದ ಹಂಪನಕಟ್ಟೆಯ ಆಲ್ಫಾ ಟವರ್‌ನಲ್ಲಿ ಅ.24ರಂದು ಬೆಳಗ್ಗೆ 10:30ಕ್ಕೆ ಶುಭಾರಂಭಗೊಳ್ಳಲಿದೆ.
ಉದ್ಘಾಟನಾ ಸಮಾರಂಭದಲ್ಲಿ ಸೈಯದ್ ಕೆ.ಎಸ್.ಆಟಕೋಯ ತಂಙಳ್ ಕುಂಬೋಳ್, ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನಂನ ಶ್ರೀ ಗುರುದೇವಾನಂದ ಸ್ವಾಮೀಜಿ, ಮಿಲಾಗ್ರಿಸ್ ಚರ್ಚ್‌ನ ಧರ್ಮಗುರು ವಂ.ಥಾಮಸ್ ಡಿ ಕ್ಯಾಸ್ಟ್ರೊ ಭಾಗವಹಿಸುವರು.
ಸಮಾರಂಭದಲ್ಲಿ ಸೈಯದ್ ಅಥಾವುಲ್ಲಾ ತಂಙಳ್ ಮಂಜೇಶ್ವರ, ಸೈಯದ್ ಝೈನುಲ್ ಆಬಿದ್ ಜಿಫ್ರಿ ತಂಙಳ್ ಬೆಳ್ತಂಗಡಿ, ಸೈಯದ್ ಪೂಕುಂಞಿ ತಂಙಳ್‌ಉದ್ಯಾವರ, ಉಡುಪಿ ಮತ್ತು ಚಿಕ್ಕಮಗಳೂರು ಖಾಝಿ ಅಬ್ದುಲ್ ಹಮೀದ್ ಮುಸ್ಲಿಯಾರ್, ಮಂಗಳೂರು ಖಾಝಿ ಅಲ್ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ಉಪಸ್ಥಿತರಿರುವರು.
ಮುಖ್ಯ ಅತಿಥಿಗಳಾಗಿ ಶಾಸಕ ವೇದವ್ಯಾಸ ಕಾಮತ್, ಕೆಪಿಸಿಸಿ ಉಪಾಧ್ಯಕ್ಷ ಐವನ್ ಡಿಸೋಜ, ಮಂಗಳೂರು ಮಹಾನಗರ ಪಾಲಿಕೆ ಸದಸ್ಯ ಎ.ಸಿ.ವಿನಯರಾಜ್, ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿ ಕುಮಾರ್, ಎಸ್‌ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಇಲ್ಯಾಸ್ ಮುಹಮ್ಮದ್ ತುಂಬೆ, ಜೆಡಿಎಸ್ ಕಾರ್ಯದರ್ಶಿ ಹೈದರ್ ಪರ್ತಿಪ್ಪಾಡಿ, ಮಾಜಿ ಮೇಯರ್ ಕೆ.ಇ.ಅಶ್ರಫ್, ಅಲ್ಫಾ ಟವರ್‌ನ ಮಾಲಕ ಲುತ್ಫುಲ್ಲಾ ಖಾಝಿ ಭಾಗವಹಿಸಲಿದ್ದಾರೆ ಎಂದು ಚೋಯ್ಸ್ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ನ ಪಾಲುದಾರರಾದ ಮುಹಮ್ಮದ್ ಅಶ್ರಫ್ ಹಾಗೂ ಶಹೀರ್ ಬಿ.ಎಂ. ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಶುಭಾರಂಭದ ವಿಶೇಷ ಕೂಡುಗೆ
ಚೋಯ್ಸ್ ಗೋಲ್ಡ್‌ನ 8ನೇ ವರ್ಷಾಚರಣೆ ಹಾಗೂ ನೂತನ ಮಳಿಗೆ ಶುಭಾರಂಭದ ಪ್ರಯುಕ್ತ ಎಲ್ಲ ಖರೀದಿಯ ಮೇಲೆ ಬಂಪರ್ ಡ್ರಾ ಬಹುಮಾನ ಪಡೆಯುವ ಅವಕಾಶ. ಬಂಪರ್ ಬಹುಮಾನವಾಗಿ ಡೈಮೆಂಡ್ ನೆಕ್ಲೆಸ್ ಗೆಲ್ಲುವ ಸುರ್ವಣಾವಕಾಶ. ಮಜೂರಿ ಇಲ್ಲದೆ ಚಿನ್ನದ ಖರೀದಿ. ಮಳಿಗೆಯನ್ನು ಸಂದರ್ಶಿಸಿ ಗೋಲ್ಡ್ ಕಾಯಿನ್ ಅಥವಾ ವಿಶೇಷ ಬಹುಮಾನ ಗೆಲ್ಲುವ ಅವಕಾಶ ಇದೆ.







