ಇಟಲಿಯ: ಪ್ರಪ್ರಥಮ ಮಹಿಳಾ ಪ್ರಧಾನಿಯಾಗಿ ಜಾರ್ಜಿಯಾ ಮೆಲೋನಿ ಪ್ರಮಾಣ ವಚನ

Giorgia Meloni(PHOTO: PTI)
ರೋಮ್, ಅ.22: ಜಾರ್ಜಿಯಾ ಮೆಲೋನಿ ಅವರು ಶನಿವಾರದಂದು ಇಟಲಿಯ ಮೊದಲ ಮಹಿಳಾ ಪ್ರಧಾನಮಂತ್ರಿಯಾಗಿ ತಮ್ಮ ಸಚಿವ ಸಂಪುಟದೊಂದಿಗೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಮುಖ್ಯಸ್ಥೆಯಾಗಿರುವ ಮೆಲೋನಿ ಅಧ್ಯಕ್ಷತೆಯ ‘ನ್ಯಾಷನಲಿಸ್ಟ್ ಬ್ರದರ್ಸ್ ಆಫ್ ಇಟಲಿ’ ಪಕ್ಷ ಕಳೆದ ತಿಂಗಳು ನಡೆದಿದ್ದ ಸಾರ್ವತ್ರಿಕ ಚುನಾವಣೆಯಲ್ಲಿ ಮೈತ್ರಿಕೂಟದ ಇತರ ಪಕ್ಷಗಳಾದ ಫೋರ್ಝಾ ಇಟಾಲಿಯಾ(ಮಾಜಿ ಪ್ರೀಮಿಯರ್ ಸಿಲ್ವಿಯೊ ಬೆರ್ಲುಸ್ಕೋನಿ ನೇತೃತ್ವದ ಪಕ್ಷ) ಮತ್ತು ಲೀಗ್ ಪಕ್ಷದೊಂದಿಗೆ ಭರ್ಜರಿ ಬಹುಮತ ಪಡೆದಿದೆ. ಆರ್ಥಿಕ ಹಿಂಜರಿತ, ಹೆಚ್ಚುತ್ತಿರುವ ಇಂಧನ ವೆಚ್ಚ ಸಹಿತ ಹಲವು ಸವಾಲುಗಳು ನೂತನ ಸರಕಾರದ ಎದುರಿಗಿವೆ.
Next Story





