ಟಾಯ್ಲೆಟ್ ಸೀಟ್ ಕದ್ದ ಆರೋಪ: ದಲಿತ ವ್ಯಕ್ತಿಯ ಮುಖಕ್ಕೆ ಮಸಿ ಬಳಿದು ತಲೆ ಬೋಳಿಸಿದ ಬಿಜೆಪಿ ನಾಯಕ, ಬೆಂಬಲಿಗರು

SO THE SANGHI MOB WILL CHEER FOR FLOGGING OF DALITS TOO? Video: UP Dalit Man Accused Of Theft Thrashed, Head Shaved, Face Blackenedhttps://t.co/lDM2cqlDpU
— Subhashini Ali (@SubhashiniAli) October 23, 2022ಬಹ್ರೈಚ್: ಟಾಯ್ಲೆಟ್ ಸೀಟ್ ಕದ್ದ ಆರೋಪದ ಮೇಲೆ ದಲಿತ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸಿ, ಮುಖಕ್ಕೆ ಮಸಿ ಬಳಿದು, ತಲೆ ಬೋಳಿಸಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಬಹ್ರೈಚ್ನಲ್ಲಿ ನಡೆದಿದೆ.
ಸ್ಥಳೀಯ ಬಿಜೆಪಿ ನಾಯಕ ರಾಧೇಶ್ಯಾಮ್ ಮಿಶ್ರಾ ಹಾಗೂ ಆತನ ಇಬ್ಬರು ಬೆಂಬಲಿಗರು ಮಂಗಳವಾರ ರಾಜೇಶ್ ಕುಮಾರ್ ನನ್ನು ಕಂಬಕ್ಕೆ ಕಟ್ಟಿ, ಮುಖಕ್ಕೆ ಕಪ್ಪು ಮಸಿ ಬಳಿದು ಥಳಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲೆಯ ಹಾರ್ಡಿ ಪ್ರದೇಶದ ಮನೆಯೊಂದರಿಂದ ಶೌಚಾಲಯದ ಸೀಟನ್ನು ಕದ್ದಿದ್ದಾನೆ ಎಂದು ಆರೋಪಿಸಲಾಗಿದೆ.
30ರ ಹರೆಯದ ದಿನಗೂಲಿ ಕಾರ್ಮಿಕ ರಾಜೇಶ್ ಕುಮಾರ್ ಮೇಲೆ ಗುಂಪೊಂದು ಹಲ್ಲೆ ನಡೆಸಿ, ಮುಖ ಕ್ಕೆ ಮಸಿ ಬಳಿದು, ತಲೆ ಬೋಳಿಸುತ್ತಿರುವ ದೃಶ್ಯಗಳು ವೈರಲ್ ಆಗಿವೆ.
ಆರೋಪಿ ಮಿಶ್ರಾ ಪರಾರಿಯಾಗಿದ್ದಾನೆ, ಆದರೆ ಆತನ ಇಬ್ಬರು ಸಹಚರರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳೀಯ ಬಿಜೆಪಿ ನಾಯಕ ಹಾಗೂ ಅವರ ಬೆಂಬಲಿಗರು ಜಾತಿ ನಿಂದನೆ ಮಾಡಿದ್ದಾರೆ ಎಂದು ಕುಮಾರ್ ಆರೋಪಿಸಿದ್ದಾರೆ.
SO THE SANGHI MOB WILL CHEER FOR FLOGGING OF DALITS TOO? Video: UP Dalit Man Accused Of Theft Thrashed, Head Shaved, Face Blackenedhttps://t.co/lDM2cqlDpU
— Subhashini Ali (@SubhashiniAli) October 23, 2022







