ಬೈಂದೂರು: ಅ.28-29ರಂದು 94ಸಿಸಿ ಅರ್ಜಿದಾರರ ಸಮಾವೇಶ
ಉಡುಪಿ, ಅ.23: ಅಖಿಲ ಭಾರತ ಕೃಷಿಕೂಲಿಕಾರರ ಸಂಘದ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯ ಬೈಂದೂರು, ಯಡ್ತರೆ, ಪಡುವರಿ, ತಗ್ಗರ್ಸೆ ನಾಲ್ಕು ಗ್ರಾಮಗಳ ಸರಕಾರಿ ಸ್ಥಳದಲ್ಲಿ ಮನೆ, ಕೃಷಿ ಅಭಿವೃದ್ಧಿ ಪಡಿಸಿ, ವಾಸವಾಗಿರುವ ಬಡ ರೃತ ಕೃಷಿ ಕೂಲಿಕಾರರು 94 ಸಿಸಿ ಕಲಂ ಅನ್ವಯ ಹಕ್ಕುಪತ್ರ ಕೋರಿ ಸಲ್ಲಿಸಿದ ಅರ್ಜಿದಾರರ ಸಮಾವೇಶವು ಸಿಐಟಿಯು ಬೈಂದೂರು ಕಚೇರಿಯಲ್ಲಿ ಆಯೋಜಿಸಲಾಗಿದೆ.
ಅ.28ರಂದು ಬೆಳಿಗ್ಗೆ 10 ಗಂಟೆಗೆ ಬೈಂದೂರು ಗ್ರಾಮದ, ಅ.29ರಂದು ಬೆಳಗ್ಗೆ 10 ಗಂಟೆಗೆ ಯಡ್ತರೆ ಗ್ರಾಮದ, ಅಪರಾಹ್ನ 3 ಗಂಟೆಗೆ ಪಡುವರಿ ಹಾಗೂ ತಗ್ಗರ್ಸೆ ಗ್ರಾಮಗಳ ಅರ್ಜಿದಾರರ ಬೃಹತ್ ಸಮಾವೇಶ ಏರ್ಪಡಿಸಲಾಗಿದೆ. 94ಸಿಸಿ ಅರ್ಜಿಗಳನ್ನು ಈ ಕೂಡಲೇ ವಿಲೇವಾರಿ ಮಾಡಲು ಸರಕಾರವನ್ನು ಒತ್ತಾಯಿಸುವ ಹೋರಾಟವನ್ನು ರೂಪಿಸಲಾಗುವುದು. 94 ಸಿಸಿ ಅಡಿಯಲ್ಲಿ ಹಕ್ಕುಪತ್ರ ಕೋರಿ ಸಲ್ಲಿಸಿದ ಅರ್ಜಿದಾರರು ಈ ಸಭೆಯಲ್ಲಿ ಭಾಗವಹಿಸಬೇಕು ಎಂದು ಅಖಿಲ ಭಾರತ ಕೃಷಿಕೂಲಿಕಾರರ ಸಂಘದ ಉಡುಪಿ ಜಿಲ್ಲಾ ಪ್ರಧಾನ ಕಾಯ9ದಶಿ9 ವೆಂಕಟೇಶ್ ಕೋಣಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.





