ಟ್ವೆಂಟಿ-20 ವಿಶ್ವಕಪ್: ಭಾರತದ ಗೆಲುವಿಗೆ 160 ರನ್ ಗುರಿ ನೀಡಿದ ಪಾಕಿಸ್ತಾನ
ಶಾನ್ ಮಸೂದ್, ಇಫ್ತಿಕಾರ್ ಅಹ್ಮದ್ ಅರ್ಧಶತಕ, ಮಿಂಚಿದ ಅರ್ಷದೀಪ್, ಹಾರ್ದಿಕ್ ಪಾಂಡ್ಯ

Photo: ICC
ಮೆಲ್ಬೋರ್ನ್, ಅ.23: ಭಾರತದ ವೇಗಿಗಳಾದ ಅರ್ಷದೀಪ್ ಸಿಂಗ್ (3-32)ಹಾಗೂ ಹಾರ್ದಿಕ್ ಪಾಂಡ್ಯ (3-30)ಅವರ ಶಿಸ್ತುಬದ್ಧ ಬೌಲಿಂಗ್ ದಾಳಿಯ ಹೊರತಾಗಿಯೂ ಶಾನ್ ಮಸೂದ್(ಔಟಾಗದೆ 52, 42 ಎಸೆತ) ಹಾಗೂ ಇಫ್ತಿಕಾರ್ ಅಹ್ಮದ್(51 ರನ್,34 ಎಸೆತ) ಅರ್ಧಶತಕದ ಕೊಡುಗೆಯ ನೆರವಿನಿಂದ ಪಾಕಿಸ್ತಾನ ಕ್ರಿಕೆಟ್ ತಂಡ ಟ್ವೆಂಟಿ-20 ವಿಶ್ವಕಪ್ ಟೂರ್ನಿಯ ಸೂಪರ್-12 ಹಂತದ ಪಂದ್ಯದಲ್ಲಿ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿದೆ.
ರವಿವಾರ ನಡೆದ ಗ್ರೂಪ್-2ರ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಆರಂಭಿಕ ಬ್ಯಾಟರ್ ಗಳಾದ ಬಾಬರ್ ಆಝಂ(0) ಹಾಗೂ ಮುಹಮ್ಮದ್ ರಿಝ್ವಾನ್ (4 ರನ್)ವಿಕೆಟನ್ನು ಬೇಗನೆ ಕಳೆದುಕೊಂಡಿತು. ವೇಗಿ ಅರ್ಷದೀಪ್ ಈ ಇಬ್ಬರು ಬ್ಯಾಟರ್ ಗಳನ್ನು ಪೆವಿಲಿಯನ್ ಗೆ ಕಳುಹಿಸಿದರು.
ಅರ್ಧಶತಕದ ಕೊಡುಗೆ ನೀಡಿದ ಶಾನ್ ಮಸೂದ್(ಔಟಾಗದೆ 52, 42 ಎಸೆತ, 5 ಬೌಂಡರಿ) ಹಾಗೂ ಇಫ್ತಿಕಾರ್ ಅಹ್ಮದ್(51 ರನ್, 34 ಎಸೆತ, 2 ಬೌಂಡರಿ, 4 ಸಿಕ್ಸರ್)ತಂಡವು ಗೌರವಾರ್ಹ ಮೊತ್ತ ಗಳಿಸಲು ನೆರವಾದರು.
Next Story