ಡಾ.ಗಣನಾಥ ಎಕ್ಕಾರಿಗೆ ‘ಹಂಸಜ್ಯೋತಿ ಸಮ್ಮಾನ್’ ಪ್ರಶಸ್ತಿ

ಉಡುಪಿ : ಬೆಂಗಳೂರಿನ ಪ್ರತಿಷ್ಠಿತ ಹಂಸಜ್ಯೋತಿ ಟ್ರಸ್ಟ್ ಪ್ರತೀವರ್ಷ ನೀಡುವ ಹಂಸಜ್ಯೋತಿ ಸಮ್ಮಾನ್-2022 ಪ್ರಶಸಿಯನ್ನು ರಾಜ್ಯ ನಿವೃತ್ತ ಎನ್ನೆಸ್ಸೆಸ್ ಅಧಿಕಾರಿ, ವಿದ್ವಾಂಸ ಡಾ.ಗಣನಾಥ ಎಕ್ಕಾರು ಅವರಿಗೆ ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಜೀವಮಾನ ಸಾಧನೆಯ ಸೇವೆಯನ್ನು ಪರಿಗಣಿಸಿ ನೀಡಲಾಯಿತು.
ಬೆಂಗಳೂರಿನ ಶೇಷಾದ್ರಿಪುರಂ ಪದವಿ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಹಂಸ ಅಶ್ವಯುಜ ಸಾಂಸ್ಕೃತಿಕ ಸಂಭ್ರಮದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕರ್ನಾಟಕ ಅಬಕಾರಿ ಇಲಾಖೆಯ ಆಯುಕ್ತ ಡಾ.ಬಿ.ಆರ್.ಹಿರೇಮಠ, ಹಾಫ್ ಕಾಮ್ಸ್ ತೋಟಗಾರಿಕಾ ಇಲಾಖೆಯ ನಿರ್ದೇಶಕ ಎಂ.ವಿಜಯ ಕುಮಾರ, ಹಂಸಜ್ಯೋತಿ ಟ್ರಸ್ಟ್‌ನ ಸಂಸ್ಥಾಪಕ ಮು.ಮುರಳೀಧರ, ಶೇಶಾದ್ರಿಪುರಂ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಜಯರಾಂ, ಸಹಕಾರಿ ಸಚಿವ ಎನ್.ಜಿ. ಸೋಮಶೇಖರ್ ಉಪಸ್ಥಿತರಿದ್ದರು.
Next Story





