ಹನೂರು: ಅಭಾ ಕಾರ್ಡ್ ನೋಂದಣಿ ಶಿಬಿರ

ಹನೂರು: ಪತ್ರಕರ್ತರು ಸರ್ಕಾರಿ ಸವಲತ್ತುಗಳನ್ನು ಪಡೆದುಕೂಂಡು ಸದೃಢರಾದರೆ ಸಮಾಜದ ಇತರ ವರ್ಗದ ಜನರನ್ನು ಸಹ ಸದೃಢರನ್ನಾಗಿ ಮಾಡಬಹುದು ಎಂದು ಹಿರಿಯ ಪತ್ರಕರ್ತ ಕುಮಾರ್ ದೊರೆ ತಿಳಿಸಿದರು.
ಹನೂರು ಪಟ್ಟಣದ ಮೈರಾಡ ಕಚೇರಿಯಲ್ಲಿ ರವಿವಾರ ಸಮಾನ ಮನಸ್ಕರ ಪತ್ರಕರ್ತರ ವತಿಯಿಂದ ಉಚಿತ ಅಭಾ ಕಾರ್ಡ್ ನೋಂದಣಿ ಶಿಬಿರಕ್ಕೆ ಚಾಲನೆ ನೀಡಿ ಬಳಿಕ ಮಾತನಾಡಿದರು.
ಪತ್ರಕರ್ತರು ತಮ್ಮ ಭದ್ರತೆಗಾಗಿ ಸರ್ಕಾರಿ ಸವಲತ್ತುಗಳನ್ನು ಪಡೆದುಕೂಂಡು ಸದೃಢರಾಗಬೇಕು. ಪ್ರತಿಯೊಬ್ಬರು ಆಭಾ ಕಾರ್ಡ್ ನೂಂದಣಿ ಮಾಡಿಸಿಕೂಳ್ಳುವುದರ ಮುಖಾಂತರ ಕುಟುಂಬಕ್ಕೆ ವಾರ್ಷಿಕ 5ಲಕ್ಷ ತನಕ ಚಿಕಿತ್ಸೆ ವೆಚ್ಚದ ಪ್ರಯೋಜನ ಪಡೆದುಕೂಳ್ಳಬಹುದು ಎಂದರು.
ಶಿಬಿರದಲ್ಲಿ ಹನೂರು ತಾಲ್ಲೂಕಿನ ಪತ್ರಕರ್ತರು, ಪತ್ರಿಕಾ ಏಜೆಂಟುಗಳು, ವಿತರಕರು ಸೇರಿ ಹಾಗೂ ಅವರು ಕುಟುಂಬದ ಸದಸ್ಯರ ಸಹಿತ 52 ಅಭಾ ಕಾರ್ಡ್ ನೋಂದಣಿ ಮಾಡಲಾಯಿತು.
ಈ ಸಂದರ್ಭ ಗ್ರಾಮ ಒನ್ ಸೇವೆ ಕೇಂದ್ರದ ನವೀದ್ ಸೇರಿದಂತೆ ಪತ್ರಕರ್ತರಾದ ಅಭಿಲಾಷ್, ನಿರಂಜನ್ ಬಂಗಾರಪ್ಪ, ಸುರೇಶ್, ರವಿಗೌಡ,
ನಾಗೇಂದ್ರ, ಪತ್ರಿಕಾ ವಿತರಕ ವಿಜಯ್ ಗೌಡ, ವಿಜಯ್ ಕಾಂಚಳ್ಳಿ, ಉಸ್ಮಾನ್ ಹಾಜರಿದ್ದರು.